ದಿವಂಗತ ಕನ್ನಡ ಸಾಹಿತಿ , ಕವಿ , ವಿದ್ವಾನ್ ಶ್ರೀ ಕುಂಟಿಕಾನಮಠ ಬಾಲಕೃಷ್ಣ ಭಟ್ ರವರು ರಚಿಸಿದ ಶ್ರೀ ರಾಮ ಕಥಾ ಮಂಜರಿ ( ಸಂಪೂರ್ಣ ರಾಮಾಯಣ ) ಮತ್ತು ಶ್ರೀ ಕೃಷ್ಣ ಕಥಾ ಮಂಜರಿ ( ಸಂಪೂರ್ಣ ಮಹಾಭಾರತ ) ಗದ್ಯ ಕಾವ್ಯಗಳನ್ನು ಓದುಗರಿಗೆ ತಲುಪಿಸುವ ಅಭಿಯಾನ

ದಿವಂಗತ ಕನ್ನಡ ಸಾಹಿತಿ , ಕವಿ , ವಿದ್ವಾನ್ ಶ್ರೀ ಕುಂಟಿಕಾನಮಠ ಬಾಲಕೃಷ್ಣ ಭಟ್ ರವರು ರಚಿಸಿದ ಶ್ರೀ ರಾಮ ಕಥಾ ಮಂಜರಿ ( ಸಂಪೂರ್ಣ ರಾಮಾಯಣ ) ಮತ್ತು ಶ್ರೀ ಕೃಷ್ಣ ಕಥಾ ಮಂಜರಿ ( ಸಂಪೂರ್ಣ ಮಹಾಭಾರತ ) ಗದ್ಯ ಕಾವ್ಯಗಳನ್ನು ಓದುಗರಿಗೆ ತಲುಪಿಸುವ ಅಭಿಯಾನವನ್ನು ಕುಂಟಿಕಾನಮಠ ಬಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ಮತ್ತು ಯಕ್ಷ ದ್ರುವ ಪಟ್ಟಾ ಫೌಂಡೇಶನ್ ಹಾಕಿಕೊಂಡಿದೆ . ಈ ಪುಸ್ತಕಗಳನ್ನು ಕರ್ನಾಟಕದ ಎಲ್ಲ ವಿದ್ಯಾರ್ಥಿಗಳು ಓದಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿ ಗಳಾದ ಶ್ರೀ ಯಡ್ಯೂರಪ್ಪನವರು ಸಂದೇಶವನ್ನಿತ್ತಿದ್ದಾರೆ . ಹಾಗೆಯೇ ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳು , ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು , ಡಾ ವೀರೇಂದ್ರ ಹೆಗ್ಗಡೆಯವರು , ಸಾಹಿತಿ ಶ್ರೀ ದೊಡ್ಡರಂಗೇಗೌಡರುಡಾ ಪುತಿನ , ಯಸ್ ಕೆ . ರಾಮಚಂದ್ರ ರಾವ್ ಕುಂಬ್ಳೆ ಸುಂದರ ರಾವ್‌ ಮೊದಲಾದ ಗಣ್ಯರು ಈ ಪುಸ್ತಕಗಳು ವಿದ್ಯಾರ್ಥಿಗಳು ಓದುವುದರಿಂದ ಭಾರತೀಯ ಸಂಸ್ಕೃತಿ , ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ತಿಳಿಯಲು ಬಹು ಉಪಯುಕ್ತವೆಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ . ಕುಂಟಿಕಾನಮಠ ಬಾಲಕೃಷ್ಣ ಭಟ್ಟರು ಕನ್ನಡ ಪ್ರಾಧ್ಯಾಪಕರಾಗಿ ಮಾತ್ರವಲ್ಲ ಯಕ್ಷಗಾನ ತಾಳ ಮದ್ದಳೆ ಅರ್ಥಧಾರಿಯಾಗಿ , ಕಲಾವಿದರಾಗಿ ಮತ್ತು ಯಕ್ಷಗಾನ ಕಾರ್ಯಕ್ರಮಗಳ ಅಯೋಜಕರಾಗಿ ಕೆಲಸ ಮಾಡಿದವರು . ಯಕ್ಷಗಾನ ಕಲಾವಿದರಿಗೆ ರಾಮಾಯಣ ಮತ್ತು ಮಹಾಭಾರತದ ಬಗ್ಗೆ ಸಂಪೂರ್ಣ ಮಾಹಿತಿ ಮಾತ್ರವಲ್ಲ ಅರ್ಥಗಾರಿಕೆಗೆ ಬೇಕಾದ ಸಾಹಿತ್ಯ , ಕಥೆ ಈ ಪುಸ್ತಕಗಳಲ್ಲಿ ಅಡಕವಾಗಿದೆ . ಯಕ್ಷಗಾನ ಕಲಾವಿದರ ಕ್ಷೇಮಾಭಿವೃದ್ಧಿಯ ಬಗ್ಗೆ ಕಲಾವಿದರಿಗೆ ಉತ್ತಮ ತರಬೇತಿಯನ್ನು ಕೊಡುವ ಉದ್ದೇಶವನ್ನು ಹೊಂದಿದ ಯಕ್ಷ ದ್ರುವ ಪಟ್ಟಾ ಫೌಂಡೇಶನ್ ಸಹಯೋಗ ದೊಂದಿಗೆ ಯಕ್ಷಗಾನ ಕಲಾವಿದರಿಗೆ 1000 ಪುಸ್ತಕಗಳನ್ನು ಕೊಡುವ ಅಭಿಯಾನವನ್ನು ಹಾಕಿ ಕೊಂಡಿದ್ದೇವೆ . ಈ ಪುಸ್ತಕಗಳನ್ನು ನಾಡಿನ ಎಲ್ಲ ಶಾಲೆ ಗಳಿಗೆ ತಲುಪಿಸಲು ಇನ್ಫೋಸಿಸ್ ಪ್ರತಿಷ್ಠಾನ , ವಿಪ್ರೊ ಫೌಂಡೇಶನ್ ಮೊದಲಾದ ಕಾರ್ಪೊರೇಟ್ ಸಂಸ್ಥೆಗಳನ್ನು ಸಂಪರ್ಕಿಸಿ ಸುಮಾರು ೧೦ ಲಕ್ಷ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಮುಟ್ಟಿಸುವ ಯೋಜನೆಯನ್ನು ನಮ್ಮ ಸಂಸ್ಥೆ ಹಾಕಿಕೊಂಡಿದೆ . ಜೊತೆಯಲ್ಲಿ ರಾಮಾಯಣ ಮತ್ತು ಮಹಾಭಾರತ ಪರೀಕ್ಷೆಯನ್ನು ಆಯೋಜಿಸಿ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ರಾಮಾಯಣ ಮತ್ತು ಮಹಾಭಾರತ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳಸಲು ಉತ್ತೇಜನ ಕೊಡುವುದು ಕೂಡ ಉದ್ದೇಶ . ಕುಂಟಿಕಾನಮಠ ಬಾಲಕೃಷ್ಣ ಭಟ್ಟರ ಆಶಯದಂತೆ ಗಡಿನಾಡಿನ ಕಾಸರಗೋಡಿನಲ್ಲಿರುವ ಕುಂಟಿಕಾನಮಠ ದಲ್ಲಿ ಒಂದು ಸಾಂಸ್ಕೃತಿಕ ಭವನಮೆಡಿಕಲ್ ಸೆಂಟರ್ , ವಾಚನಾಲಯ , ಯುವಜನ ರಿಗೆ ಸ್ಮಿಲ್ ಡೆವಲಪ್ರೈಂಟ್ ಸೆಂಟರ್ ಯಕ್ಷಗಾನ ಸಂಗೀತ , ಭರತ ನಾಟ್ಯ ಕಲಿಕಾ ಕೇಂದ್ರ ವನ್ನು ಮಾಡುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ . ನಮ್ಮ ಸಂಸ್ಥೆಯ ಮತ್ತು ಕಾರ್ಯ ಯೋಜನೆಗಳ ಹೆಚ್ಚಿನ ಮಾಹಿತಿಗೆ https : / 1kmskbhat . wixsite . com / kuntikanamata

Rukmini Balakrishna Bhat President

Kuntikanamata Balakrishn Bhat Charitable Trust ( R ) .

kuntikanamata , Via Neerchal , Kasaragod Kerala 671551 .

City Today News

(citytoday.media)

9341997946

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.