ನ್ಯಾಯಮೂರ್ತಿ ನಾಗಮೋಹನದಾಸ್ ರವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗಕ್ಕೆ ಮನವಿ

ಕರ್ನಾಟಕ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ / ಸಾರ್ವಜನಿಕ ಉದೂಗಗಳಿಗೆ ಈಗಿರುವ ಮೀಸಲಾತಿ ಪ್ರಮಾಣವನ್ನು ಜನ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸುವ ಕುರಿತು ಅಧ್ಯಯನ ನಡೆಸಿ , ವರದಿಯನ್ನು ಸಲ್ಲಿಸಲು ನಿವೃತ್ತ ನ್ಯಾಯಮೂರ್ತಿ ಶ್ರೀ . ನಾಗಮೋಹನದಾಸ ರವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿದೆ . ಇದು ಡಾ . ಬಾಬಾಸಾಹೇಬ್ ಅಂಬೇಡ್ಕರ್ ರವರು ನಮಗೆ ದೊರಕಿಸಿಕೊಟ್ಟ ಮೂಲಭೂತ ಹಕ್ಕು , ನ್ಯಾಯಮೂರ್ತಿಯವರ ಆಯೋಗಕ್ಕೆ ಪರಿಶಿಷ್ಟ ಜಾತಿಯ ಸಮುದಾಯದ ಪರವಾಗಿ ಯಾವ ರೀತಿಯ ಮನವಿ ಸಲ್ಲಿಸಬೇಕು ಎಂಬ ಬಗ್ಗೆ ಚರ್ಚಿಸಲು ದಿನಾಂಕ : 20 – 11 – 2019 ರಂದು ಸಮುದಾಯದ ಸಮಾಲೋಚನೆ ಸಭೆಯನ್ನು ಗಾಂಧಿ ಭವನದಲ್ಲಿ ಏರ್ಪಡಿಸಲಾಗಿತ್ತು . ಅಂದು ಸಭೆಯಲ್ಲಿ ಸಮುದಾಯದ ನಾಯಕರು ನಿವೃತ್ತ ಹಿರಿಯ ಅಧಿಕಾರಿಗಳು , ಸರ್ಕಾರಿ ನೌಕರರು ಮತ್ತು ಸಮುದಾಯದ ವಿವಿದ ನಾಯಕರು ನೀಡಿದ ಸಲಹೆಗಳು , ಸೂಚನೆಗಳನ್ನು ಆಧರಿಸಿ ಸುಮಾರು ಒಂದು ತಿಂಗಳ ಕಾಲ ಧೀರ್ಘವಾಗಿ ವ್ಯಾಪಕ ಸಂಶೋಧನೆ ಮತ್ತು ಸಮಾಲೋಚನೆಗಳ ಮೂಲಕ ಮನವಿಯನ್ನು ಸಿದ್ದಪಡಿಸಲಾಗಿದ್ದು

ದಿನಾಂಕ : 23 – 12 – 2019 ರ ಸೋಮವಾರ ಬೆಳಿಗ್ಗೆ 11 – 00 ಗಂಟೆಗೆ ಬೆಂಗಳೂರಿನ ಕೆ . ಆರ್ . ವೃತ್ತದಲ್ಲಿ ನೃಪತುಂಗ ರಸ್ತೆ ಯಲ್ಲಿರುವ ಯುವನಿಕಾ ಸಭಾಂಗಣದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಸಮುದಾಯದ ನಾಯಕರುಗಳು ಸಮಾವೇಶಗೊಂಡು ನ್ಯಾಯಮೂರ್ತಿ ನಾಗಮೋಹನದಾಸ್ ರವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗಕ್ಕೆ ಮನವಿ ಸಲ್ಲಿಸುತ್ತಿದ್ದೇವೆ . – ಈ ಸಂದರ್ಭದಲ್ಲಿ ಸಮುದಾಯದ ನಾಯಕರಾದ ಡಾ . ಸಿದ್ದಲಿಂಗಯ್ಯ , ಡಾ . ಎಲ್ . ಹನುಮಂತಯ್ಯ , ಇಂಡೂಥರ ಹೊನಾಪುರ ಇಂದಿರಾಕೃಷ್ಣಪ್ಪ ಶಿವಾಜಿ ಗಣೇಶನ್ , ಗುರುಪ್ರಸಾದ ಕರೆಗೋಡು ಡಿ . ಜಿ . ಸಾಗರ್ , ಮಾವಳ್ಳಿ ಶಂಕರ್ , ಎಂ . ವೆಂಕಟಸ್ವಾಮಿ , ಎಂ . ಜಯಣ್ಣ ಲಕ್ಷ್ಮೀನಾರಾಯಣ , ನಾಗವಾರ ಮೋಹನರಾಜು , ಅಣ್ಣಯ್ಯ , ಮಾರಪ್ಪ , ರಾಯಚೂರು ಮುಂತಾದವರು ಹಾಗೂ ನಿವೃತ್ತ ಐ . ಎ . ಎಸ್ . ಐ . ಪಿ . ಎಸ್ . ಅಧಿಕಾರಿಗಳಾದ ಇ , ವೆಂಕಟಯ್ಯ , ಎಸ್ . ಸಿ . ಮುನಿಯಪ್ಪ ತಂಗರಾಜನ್ , ಸಿದ್ದಯ್ಯ , ಮರಿಸ್ವಾಮಿ , ಸುಭಾಷ್ ಭರಣಿ , ಗೋನಾಳ ಭೀಮಪ್ಪ ಹೆಚ್ . ಆರ್ . ತೇಗನೂರು , ಬಾಬು ರಾವ್ ಮುಮ್ಮುಡಿ ಮುಂತಾದವರು ಭಾಗವಹಿಸಲಿದ್ದಾರೆ .

ಪ್ರಮುಖ ಬೇಡಿಕೆಗಳು :

1 ) ಈಗಿರುವ ಮೀಸಲಾತಿಯನ್ನು ಶೇಕಡ 15 ರಿಂದ 20 ಕ್ಕೆ ಏರಿಸುವುದು . 2 ) ಖಾಸಗಿ ವಲಯದ ಶಿಕ್ಷಣ ಮತ್ತು ಉದ್ಯೋಗಗಳಿಗೂ ಇದೇ ಮೀಸಲಾತಿಯನ್ನು ವಿಸ್ತರಿಸಬೇಕು .

3 ) ಸುಳ್ಳು ಜಾತಿ ಪ್ರಮಾಣಗಳನ್ನು ಸಲ್ಲಿಸಿ ಮೀಸಲಾತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕಾನೂನಿನ ಕ್ರಮ ಜರುಗಿಸಬೇಕು .

– ಹೆಚ್ . ಆಂಜನೇಯ

ಮಾಜಿ ಸಚಿವ

-ಮಾವಳ್ಳಿ ಶಂಕರ್

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.