ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹಗರಣಗಳ ಸಂಪೂರ್ಣ ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ N. R. ರಮೇಶ್.

* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಮೂಲ್ಯ ಸ್ವತ್ತನ್ನು ಕಬಳಿಸಿರುವ ಮತ್ತೊಂದು ಬೃಹತ್ ಹಗರಣ ಬಯಲು.
• ಪಾಲಿಕೆಯ 1,600 ಕೋಟಿ ಮೌಲ್ಯದ ಸ್ವತ್ತನ್ನು ವ್ಯವಸ್ಥಿತವಾಗಿ ತನ್ನದಾಗಿಸಿಕೊಂಡಿರುವ ಖಾಸಗಿ ಸಂಸ್ಥೆ.
• 250 ಕೋಟಿ ಮೌಲ್ಯದ ಗುತ್ತಿಗೆ ಸ್ವತ್ತನ್ನು ಸದ್ದಿಲ್ಲದೇ ಮಾರಾಟ ಮಾಡುವ ಪ್ರಯತ್ನ.
• ಬಿಬಿಎಂಪಿ ಕೇಂದ್ರ ಕಛೇರಿಗೆ ಕೂಗಳತೆಯ ದೂರದಲ್ಲಿರುವ ವಿಠಲ್ ಮಲ್ಯ ರಸ್ತೆ (ಹಿಂದಿನ ಗ್ರಾಂಟ್ ರಸ್ತೆ) ಯ 23ನೇ ನಂಬರಿನ ಸ್ವತ್ತು.
• 12.17 ಎಕರೆಗಳಷ್ಟು (5,29,966 ಚ. ಅಡಿ) ವಿಸ್ತೀರ್ಣದ ಸ್ವತ್ತು.
• ಪಾಲಿಕೆಯ ಈ ಸ್ವತ್ತನ್ನು 1921-22 ರಲ್ಲಿ St. Josephs Cricket Field ಗೆಂದು The Karnataka Jesuit Educational Society ಎಂಬ ಸಂಸ್ಥೆಗೆ 99 ವರ್ಷಗಳ ಗುತ್ತಿಗೆಗೆ ನೀಡಲಾಗಿತ್ತು. •    ಅಂದಿನ ಬೆಂಗಳೂರು ನಗರದ ದಂಡು ಪ್ರದೇಶ ಬೆಂಗಳೂರು ನಗರ ಸಭೆ (Contonement Municipality of Bangalore)  ಯು ಈ ಸ್ವತ್ತನ್ನು 99 ವರ್ಷಗಳ ಗುತ್ತಿಗೆಗೆ ನೀಡಿತ್ತು. •    ನಗರದ ಅಂದಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ St. Josephs College ನ Cricket Field ನಿರ್ಮಾಣಕ್ಕೆಂದು 12.17 ಎಕರೆ ವಿಸ್ತೀರ್ಣದ ಈ ಸ್ವತ್ತನ್ನು ನೀಡಲಾಗಿತ್ತು.
• ಪಾಲಿಕೆಯ ದಾಖಲೆಗಳ ಕೊಠಡಿ (Records Room) ಯಿಂದ ಈ ಸ್ವತ್ತಿನ ದಾಖಲೆಗಳು ನಿಗೂಢವಾಗಿ ಕಾಣೆಯಾಗಿದೆ.
• ಪಾಲಿಕೆಯ ಕಂದಾಯ ಇಲಾಖೆಯ ಅಧಿಕಾರಿಗಳ ಮಹಾ ದ್ರೋಹದಿಂದಾಗಿ ಈ ಅಮೂಲ್ಯ ಸ್ವತ್ತು ಸರ್ಕಾರದ ಸ್ವತ್ತು ಎಂಬ ದಾಖಲೆಗಳನ್ನೇ ನಾಶ ಪಡಿಸಲಾಗಿದೆ.
• ಆದರೆ, ಈ ಸ್ವತ್ತನ್ನು ಗುತ್ತಿಗೆಗೆ ಪಡೆದಿರುವ The Karnataka Jesuit Educational Society ಯು ಗುತ್ತಿಗೆಯ ನಿಯಮಗಳಿಗೆ ವಿರುದ್ಧವಾಗಿ, ಈ ಅಮೂಲ್ಯ ಸ್ವತ್ತಿನ ಒಂದೊಂದೇ ಭಾಗಗಳನ್ನು ಬೇರೆ ಬೇರೆ ಖಾಸಗಿ ಸಂಸ್ಥೆಗಳಿಗೆ ಕಾನೂನು ಬಾಹಿರವಾಗಿ ಪರಭಾರೆ ಮಾಡುತ್ತಲೇ ಅಥವಾ ಉಪಗುತ್ತಿಗೆ ನೀಡುತ್ತಲೇ ಬಂದಿದೆ ಎಂಬ ಆರೋಪ.
• ಪ್ರಸ್ತುತ ಈ ಸ್ವತ್ತಿನಲ್ಲಿ 1) St. Joseph`s Community College, 2) Amalgamated Bean Coffee Traders Ltd, 3) Arun Towers Pvt. Ltd. ಮತ್ತು 4) Play Ground ಗಳು ಕಾಣಸಿಗುತ್ತವೆ.
• ಅಕ್ರಮವಾಗಿ ಸುಮಾರು 50,825 ಚ. ಅಡಿ ವಿಸ್ತೀರ್ಣದ ಉತ್ತರ ಭಾಗದ ಸ್ವತ್ತನ್ನು M/s Amalgamated Bean Coffee Trading Co. Ltd ಸಂಸ್ಥೆಗೆ ಗುತ್ತಿಗೆ ನೀಡಿರುವ The Karnataka Jesuit Educational Society.

• ದಿನಾಂಕ 21/09/2004 ರಂದು ರಮೇಶ್ ಬಿ. ಗೌಡ ಮಾಲೀಕತ್ವದ M/s Amalgamated Bean Coffee Trading Co. Ltd ಸಂಸ್ಥೆಗೆ 30 ವರ್ಷಗಳ ಗುತ್ತಿಗೆಗೆ ನೀಡಲಾಗಿದೆ.
• ಸುಮಾರು 15,495 ಚ. ಅಡಿ ವಿಸ್ತೀರ್ಣದ ನಿರ್ಮಿತ ಪ್ರದೇಶ ಹೊಂದಿರುವ 50,825 ಚ. ಅಡಿ ವಿಸ್ತೀರ್ಣದ ಈ ಸ್ವತ್ತಿಗೆ ಪ್ರತೀ ವರ್ಷ ಸುಮಾರು 50 ಲಕ್ಷ ರೂಪಾಯಿಗಳಿಂದ 01 ಕೋಟಿಗಳಷ್ಟು ವಾರ್ಷಿಕ ಬಾಡಿಗೆ ಪಡೆಯುತ್ತಿರುವ The Karnataka Jesuit Educational Society.
• M/s Amalgamated Bean Coffee Trading Co. Ltd ಸಂಸ್ಥೆ ಕಾನೂನು ಬಾಹಿರವಾಗಿ ಪಡೆದಿರುವ ಈ ಸ್ವತ್ತಿನಲ್ಲಿ ಒಟ್ಟು 14 ಅಂತಸ್ತುಗಳ ಕಟ್ಟಡವನ್ನು ನಿರ್ಮಿಸಿಕೊಂಡಿದೆ.
• 14 ಅಂತಸ್ತುಗಳ ಕಟ್ಟಡದ ಒಟ್ಟು ನಿರ್ಮಿತ ಪ್ರದೇಶ ಸುಮಾರು 1,37,374 ಚ. ಅಡಿ.
• ಸುಮಾರು 250 ಕೋಟಿ ರೂಪಾಯಿಗಳಿಗೂ ಹೆಚ್ಚು ಬೆಲೆಬಾಳುವ ಈ ಸ್ವತ್ತನ್ನು ಸದ್ದಿಲ್ಲದೇ ಮಾರಾಟ ಮಾಡಲು ಮುಂದಾಗಿರುವ M/s Amalgamated Bean Coffee Trading Co. Ltd ಸಂಸ್ಥೆ.
• ಇದೇ 23ನೇ ನಂಬರಿನ ಸ್ವತ್ತಿನ ಒಟ್ಟು 41,334 ಚ. ಅಡಿ ವಿಸ್ತೀರ್ಣದ ಸ್ವತ್ತನ್ನು ಕಾನೂನು ಬಾಹಿರವಾಗಿ M/s Arun Towers Pvt. Ltd. ಸಂಸ್ಥೆಗೆ 33 ವರ್ಷಗಳ ಗುತ್ತಿಗೆ ನೀಡಿರುವ The Karnataka Jesuit Educational Society.
• M/s Arun Towers Pvt. Ltd. ಸಂಸ್ಥೆಗೆ ದಿನಾಂಕ 25/02/1982 ರಂದು ಗುತ್ತಿಗೆಗೆ ನೀಡಲಾಗಿದೆ.
• M/s Arun Towers Pvt. Ltd. ಸಂಸ್ಥೆಯ ಮಾಲೀಕರು M/s Mallya Apollo Hospital ನ ನಿರ್ದೇಶಕರಾಗಿದ್ದಾರೆ.
• ಕಾನೂನು ಬಾಹಿರವಾಗಿ ಈ ವಂಚಕ ಸಂಸ್ಥೆಗಳ ಹೆಸರಿಗೆ ಖಾತಾ ಮಾಡಿಕೊಟ್ಟಿರುವ ಪಾಲಿಕೆಯ ಕಂದಾಯ ಇಲಾಖೆಯ ಅಧಿಕಾರಿಗಳು.
• 1921-22 ರಲ್ಲಿ The Karnataka Jesuit Educational Society ಗೆ ಪಾಲಿಕೆಯು 99 ವರ್ಷಗಳ ಗುತ್ತಿಗೆಗೆ ನೀಡಿದ್ದ 12.17 ಎಕರೆ ವಿಸ್ತೀರ್ಣದ ಸ್ವತ್ತಿಗೆ ಸಂಬಂಧಿಸಿದ ಪಾಲಿಕೆಯ “ದಾಖಲೆಗಳ ಕೊಠಡಿ” ಯಲ್ಲಿನ ದಾಖಲೆಗಳನ್ನು ನಾಶಪಡಿಸಿರುವ ಅಧಿಕಾರಿಗಳು.
• 1996-97 ರಲ್ಲಿ ಪಾಲಿಕೆಯ ಸ್ವತ್ತುಗಳಿಗೆ ಖಾತಾ ಮಾಡಿಕೊಡುವಂತೆ ಪಾಲಿಕೆಯ ಕಂದಾಯ ಇಲಾಖೆಗೆ ಅರ್ಜಿಗಳನ್ನು ಸಲ್ಲಿಸಿದ್ದ M/s Amalgamated Bean Coffee Trading Co. Ltd. ಸಂಸ್ಥೆ ಮತ್ತು M/s Arun Towers Pvt. Ltd. ಸಂಸ್ಥೆ
• 1997-98 ರಲ್ಲಿ ಕಂದಾಯ ಇಲಾಖೆಯ ಶಿಫಾರಸ್ಸಿನಂತೆ ಅಂದಿನ ತೆರಿಗೆ, ಆರ್ಥಿಕ ಮತ್ತು ಮೇಲ್ಮನವಿ ಸ್ಥಾಯಿ ಸಮಿತಿಗೆ ತಮ್ಮ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿದ್ದ ಈ ಎರಡು ಸಂಸ್ಥೆಗಳು.
• ಅಂದಿನ ತೆರಿಗೆ, ಆರ್ಥಿಕ ಮತ್ತು ಮೇಲ್ಮನವಿ ಸ್ಥಾಯಿ ಸಮಿತಿಯಲ್ಲಿ ಮಾಜಿ ಮಹಾಪೌರರಾದ J. ಹುಚ್ಚಪ್ಪ ನವರು ಅಧ್ಯಕ್ಷರಾಗಿದ್ದರು ಹಾಗೂ ಮತ್ತೊಬ್ಬ ಮಾಜಿ ಮಹಾಪೌರ ಮತ್ತು ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ P. R. ರಮೇಶ್ ರವರು ಸದಸ್ಯರಾಗಿದ್ದರು.
• ಈ ಸ್ಥಾಯಿ ಸಮಿತಿಯ ಕಾನೂನು ಬಾಹಿರ ಆದೇಶದಂತೆ ಪಾಲಿಕೆಯ ಕಂದಾಯ ಇಲಾಖೆಯ ಅಧಿಕಾರಿಗಳು ಈ ಎರಡು ವಂಚಕ ಸಂಸ್ಥೆಗಳ ಹೆಸರಿಗೆ ಗುತ್ತಿಗೆದಾರರು ಎಂಬ ಹೆಸರಿನಲ್ಲಿ ಖಾತಾ ಮಾಡಿ ಕೊಟ್ಟಿದ್ದಾರೆ.
• ಸದರಿ ಸ್ವತ್ತಿಗೆ ನಿಗದಿಪಡಿಸಿದ್ದ ಆಸ್ತಿ ತೆರಿಗೆ ಮೊತ್ತವನ್ನು ಕಡಿಮೆ ಮಾಡುವಂತೆ 1999-2000 ರ ಸಾಲಿನಲ್ಲಿ ಮೇಲ್ಮನವಿ ಸ್ಥಾಯಿ ಸಮಿತಿಯ ಮುಂದೆ ಅರ್ಜಿ ಸಲ್ಲಿಸಿದ್ದ ಈ ಎರಡು ವಂಚಕ ಸಂಸ್ಥೆಗಳು.
• ಮಾಜಿ ಮಹಾಪೌರರಾದ M. ರಾಮಚಂದ್ರಪ್ಪನವರು 1999-2000 ರ ಸಾಲಿನಲ್ಲಿ ಮೇಲ್ಮನವಿ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದರು.
• M. ರಾಮಚಂದ್ರಪ್ಪ ಅಧ್ಯಕ್ಷತೆಯ ಮೇಲ್ಮನವಿ ಸ್ಥಾಯಿ ಸಮಿತಿಯು ಕಾನೂನು ಬಾಹಿರವಾಗಿ ಈ ಎರಡು ಸಂಸ್ಥೆಗಳಿಗೆ ವಿಧಿಸಿದ್ದ ಆಸ್ತಿ ತೆರಿಗೆ ಪ್ರಮಾಣವನ್ನು ಕಡಿತಗೊಳಿಸಿ ಆದೇಶಿಸಿತ್ತು.
• ಈ ಸ್ಥಾಯಿ ಸಮಿತಿಯ ಅಧ್ಯಕ್ಷರುಗಳಾಗಿದ್ದ J. ಹುಚ್ಚಪ್ಪ ನವರಾಗಲೀ ಅಥವಾ M. ರಾಮಚಂದ್ರಪ್ಪ ನವರಾಗಲೀ The Karnataka Jesuit Educational Society ಗೆ 99 ವರ್ಷಗಳ ಗುತ್ತಿಗೆಗೆ ನೀಡಿದ್ದ ದಾಖಲೆಗಳ ಕಡತವನ್ನು ಪರಿಶೀಲಿಸಿಯೇ ಇಲ್ಲ.
• ಈ ಎರಡು ಅವಧಿಯ ಮೇಲ್ಮನವಿ ಸ್ಥಾಯಿ ಸಮಿತಿಯ ಆದೇಶಗಳ ಹಿಂದೆ ಅಪಾರ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ.
• ನಿಯಮಗಳನುಸಾರ ಯಾವ ಉದ್ದೇಶಕ್ಕೆ ಗುತ್ತಿಗೆ ನೀಡಲಾಗಿರುತ್ತದೆಯೋ ಆ ಸಂಬಂಧಪಟ್ಟ ಸ್ಥಳವನ್ನು ಆ ಉದ್ದೇಶಕ್ಕೆ ಮಾತ್ರ ಬಳಸಬೇಕಿರುತ್ತದೆ.
• ಗುತ್ತಿಗೆ ಕರಾರಿನಲ್ಲಿರುವ ಉದ್ದೇಶವನ್ನು ಹೊರತುಪಡಿಸಿ ಅನ್ಯ ಉದ್ದೇಶಗಳಿಗೆ ಸ್ಥಳವನ್ನು ಬಳಸಿಕೊಂಡಾಗ ಅಥವಾ ಸ್ಥಳವನ್ನು ಇತರರಿಗೆ ಉಪಗುತ್ತಿಗೆ ನೀಡಿದಾಗ ಗುತ್ತಿಗೆ ಕರಾರು ತನ್ನನ್ತಾನೇ ರದ್ದಾಗುತ್ತದೆ.
• ಈ ಪ್ರಕರಣದಲ್ಲಿಯೂ ಸಹ ಗುತ್ತಿಗೆ ಕರಾರಿನ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ಹಲವು ಖಾಸಗಿ ಸಂಸ್ಥೆಗಳಿಗೆ ಉಪಗುತ್ತಿಗೆ ನೀಡಿರುವುದು ಮತ್ತು ಮಾರಾಟ ಮಾಡಿರುವುದು ಸ್ಪಷ್ಟವಾಗಿದೆ.
• ಈ ಎಲ್ಲ ಕಾರಣಗಳಿಂದ ಸದರಿ ಸಂಸ್ಥೆಗೆ ನೀಡಿರುವ ಗುತ್ತಿಗೆ ಸಹಜವಾಗಿಯೇ ರದ್ದಾಗಬೇಕಿರುತ್ತದೆ.
• 1920-21 ರ ಸಾಲಿನಲ್ಲಿ 99 ವರ್ಷಗಳ ಗುತ್ತಿಗೆಗೆ ನೀಡಿರುವ ಕಡತವನ್ನು ಪರಿಶೀಲಿಸದೆಯೇ ವಂಚಕ ಸಂಸ್ಥೆಗಳಿಗೆ ನಕಲಿ ದಾಖಲೆ ಸೃಷ್ಟಿಸಿಕೊಳ್ಳಲು ಸಹಾಯ – ಸಹಕಾರ ನೀಡಿರುವ ಅಂದಿನ ಸ್ಥಾಯಿ ಸಮಿತಿಯ ಅಧ್ಯಕ್ಷರುಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು.
• ಇಂದು ತಮ್ಮನ್ನು ತಾವು ಹೋರಾಟಗಾರು / ಬುದ್ದಿವಂತರು / ಪ್ರಾಮಾಣಿಕರು ಎಂದೆಲ್ಲ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿರುವ ಮಾಜಿ ಮಹಾಪೌರರುಗಳಾದ J. ಹುಚ್ಚಪ್ಪ, M. ರಾಮಚಂದ್ರಪ್ಪ ಮತ್ತು P. R. ರಮೇಶ್.
• ಈ ಮೂರು ಜನ ಮಾಜಿ ಮಹಾಪೌರರು ನಿಜಕ್ಕೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದರೆ, 1,600 ಕೋಟಿ ರೂಪಾಯಿಗಳ ಮೌಲ್ಯದ ಪಾಲಿಕೆಯ 12.17 ಎಕರೆ ವಿಸ್ತೀರ್ಣದ ಅತ್ಯಮೂಲ್ಯ ಸ್ವತ್ತನ್ನು ಕಳೆದುಕೊಳ್ಳುವ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂಬ ಆರೋಪ.
• 1997-98 ಮತ್ತು ಅದಕ್ಕೂ ಹಿಂದಿನ ಪಾಲಿಕೆಯ ಅಧಿಕಾರಿಗಳು ವಂಚಕ ಸಂಸ್ಥೆಗಳಿಂದ ಅಪಾರ ಪ್ರಮಾಣದ ಹಣ ಪಡೆದು ಪಾಲಿಕೆ ಈ ಸ್ವತ್ತಿಗೆ ಸಂಬಂಧಿಸಿದ ದಾಖಲೆಗಳನ್ನು ನಾಶಪಡಿಸಿ ಅದೇ ವಂಚಕ ಸಂಸ್ಥೆಗಳನ್ನೇ ಮಾಲೀಕರು ಎಂದು ರೂಪಿಸಿದ್ದಾರೆ.
• ಪಾಲಿಕೆಯ “ಆಸ್ತಿಗಳ ಇಲಾಖೆ” ಯ ಅಧಿಕಾರಿಗಳು ಈ ಸ್ವತ್ತಿನ ಬಗ್ಗೆ “ಜಾಣ ಮೌನ” ವಹಿಸಿದ್ದಾರೆ.
• ಪಾಲಿಕೆಯ ಅಮೂಲ್ಯ ಆಸ್ತಿಗಳ ರಕ್ಷಣೆ ಮತ್ತು ನಿರ್ವಹಣೆ ಜವಾಬ್ದಾರಿ ಹೊಂದಿರುವ “ಆಸ್ತಿಗಳ ಇಲಾಖೆ”
• ಆಸ್ತಿಗಳ ಇಲಾಖೆಯಲ್ಲಿ ವಿಶೇಷ ಆಯುಕ್ತರು, ಉಪ ಆಯುಕ್ತರು ಮತ್ತು ಸಹಾಯಕ ಆಯುಕ್ತರು ಸೇರಿದಂತೆ ಹತ್ತಾರು ಅಧಿಕಾರಿಗಳು / ನೌಕರರು ಮತ್ತು ಸರ್ವೆಯರ್ ಗಳು ನಿಯೋಜನೆಗೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.
• ಆಸ್ತಿಗಳ ಇಲಾಖೆಯ ದಿವ್ಯ ನಿರ್ಲಕ್ಷ್ಯ ಮತ್ತು ಕಂದಾಯ ಇಲಾಖೆಯ ಭ್ರಷ್ಟಾಚಾರದಿಂದ ಪಾಲಿಕೆಯ ಸಾವಿರಾರು ಕೋಟಿ ಮೌಲ್ಯದ ನೂರಾರು ಅತ್ಯಮೂಲ್ಯ ಸ್ವತ್ತುಗಳು ಪ್ರಭಾವೀ ನೆಲಗಳ್ಳರ ಪಾಲಾಗಿವೆ.
• ಸಾವಿರಾರು ಕೋಟಿ ಮೌಲ್ಯದ ಪಾಲಿಕೆಯ 12.17 ಎಕರೆ ವಿಸ್ತೀರ್ಣದ ಈ ಸ್ವತ್ತಿನ ಸಂರಕ್ಷಣೆ ಕಾರ್ಯ ಮಾಡಿಕೊಳ್ಳಬೇಕಾದ ಕರ್ತವ್ಯ ಪಾಲಿಕೆಯ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳದ್ದಾಗಿದೆ.
• 1921-22 ರಲ್ಲಿ ಈ ಸ್ವತ್ತನ್ನು ಪಾಲಿಕೆಯು The Karnataka Jesuit Educational Society ಗೆ 99 ವರ್ಷಗಳ ಗುತ್ತಿಗೆ ನೀಡಿರುವ ಗುತ್ತಿಗೆ ನೊಂದಣಿ ದಾಖಲೆಗಳನ್ನು ಉಪ ನೊಂದಣಾಧಿಕಾರಿಗಳ ಕಛೇರಿ ಅಥವಾ ನೊಂದಣಾಧಿಕಾರಿಗಳ ಕಛೇರಿಯಲ್ಲಿ ಪತ್ತೆ ಮಾಡಬೇಕಿದೆ ಎಂದು ಆಗ್ರಹಿಸಿರುವ N. R. ರಮೇಶ್.
• ಈ ಸ್ವತ್ತಿಗೆ ಸಂಬಂಧಿಸಿದ 1921-22 ಕ್ಕೂ ಹಿಂದಿನ ಪಹಣಿ, RTC ಅಥವಾ E.C. ಗಳನ್ನು ಪತ್ತೆಹಚ್ಚುವ ಮತ್ತು ನಗರದ ಭೂ ಮಾಪನ ಕಛೇರಿಯಲ್ಲಿರುವ ದಾಖಲೆಗಳನ್ನು ಪತ್ತೆಮಾಡುವ ಕೆಲಸಕ್ಕೆ ಪಾಲಿಕೆಯ ಅಧಿಕಾರಿಗಳು ಚಾಲನೆ ನೀಡಬೇಕೆಂದು ಆಗ್ರಹಿಸಿರುವ N. R. ರಮೇಶ್.
• 1,600 ಕೋಟಿ ಮೌಲ್ಯದ 12.17 ಎಕರೆ ವಿಸ್ತೀರ್ಣದ ಅಮೂಲ್ಯ ಸರ್ಕಾರೀ ಸ್ವತ್ತನ್ನು 99 ವರ್ಷಗಳ ಗುತ್ತಿಗೆಗೆ ನೀಡಿರುವ ದಾಖಲೆಗಳನ್ನು ನಾಶಪಡಿಸಿರುವ “ಬೃಹತ್ ಹಗರಣ” ವನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಆಗ್ರಹಿಸಿರುವ N. R. ರಮೇಶ್.
• ಈ ಅಮೂಲ್ಯ ಸ್ವತ್ತಿನ ದಾಖಲೆಗಳನ್ನು ನಾಶಪಡಿಸಿರುವ ಹಿಂದಿನ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪಾಲಿಕೆಯ ಮಾನ್ಯ ಆಯುಕ್ತರನ್ನು ಆಗ್ರಹಿಸಿರುವ N. R. ರಮೇಶ್.
• ಈ ಅಮೂಲ್ಯ ಸರ್ಕಾರೀ ಸ್ವತ್ತಿನ ಮಾಲೀಕತ್ವದ ದಾಖಲೆಗಳನ್ನೇ ಪರಿಶೀಲಿಸದೆ, ಸರ್ವೇ ಕಾರ್ಯ ಮಾಡದೇ ಕೇವಲ ರಾಜಕೀಯ / ಹಣದ ಪ್ರಭಾವಗಳಿಗೆ ಒಳಗಾಗಿ, ಒಂದು ಖಾಸಗಿ ಸಂಸ್ಥೆಯ ಹೆಸರಿಗೆ ಖಾತಾಗಳನ್ನು ಮಾಡಿಕೊಟ್ಟಿರುವ ಮತ್ತು ಇತರೆ ಮೂರ್ನಾಲ್ಕು ಖಾಸಗಿ ಸಂಸ್ಥೆಗಳ ಹೆಸರಿಗೆ ಕಾನೂನು ಬಾಹಿರ ಖಾತಾಗಳನ್ನು ಮಾಡಿಕೊಟ್ಟಿರುವ ಶಾಂತಿನಗರ ವಿಭಾಗದ ಕಂದಾಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮಾನ್ಯ ಆಯುಕ್ತರನ್ನು ಆಗ್ರಹಿಸಿರುವ N. R. ರಮೇಶ್.
• ಸುಮಾರು 250 ಕೋಟಿ ಮೌಲ್ಯದ 50,825 ಚ. ಅಡಿ ವಿಸ್ತೀರ್ಣದ ಸ್ವತ್ತನ್ನು ಮಾರಾಟ ಮಾಡಲು ಮುಂದಾಗಿರುವ M/s Amalgamated Bean Coffee Trading Co. Ltd ಸಂಸ್ಥೆಯ ವಿರುದ್ಧ ಕಾನೂನು ಹೋರಾಟ ಮಾಡುವ ಬಗ್ಗೆ ಪಾಲಿಕೆಯ ಕಾನೂನು ಕೋಶದ ಮುಖ್ಯಸ್ಥರಿಗೆ ಆದೇಶಿಸಬೇಕೆಂದು ಮಾನ್ಯ ಆಯುಕ್ತರನ್ನು ಆಗ್ರಹಿಸಿರುವ N. R. ರಮೇಶ್.
ಈ ಹಗರಣಗಳ ಸಂಪೂರ್ಣ ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ N. R. ರಮೇಶ್.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.