ಡಿಸೆಂಬರ್ 31 ರಾತ್ರಿ ಬೆಂಗಳೂರು ಮಹಾತ್ಮಗಾಂಧಿ ರಸ್ತೆಯಲ್ಲಿ ನಡೆಯುವ ಹೊಸವರ್ಷ ಆಚರಣೆಯನ್ನು ರದ್ದುಗೊಳಿಸುವ ಬಗ್ಗೆ

ಡಿಸೆಂಬರ್ 31 ರಾತ್ರಿ ಹೊಸ ವರ್ಷಾಚರಣೆ ಹೆಸರಿನಲ್ಲಿ ಮಹಾತ್ಮಗಾಂಧಿ ರಸ್ತೆಯಲ್ಲಿ ಅತ್ಯಂತ ಕೆಟ್ಟ ಅಸಭ್ಯ ರೀತಿಯಲ್ಲಿ ಯುವಕ , ಯುವತಿಯರು ಸೇರಿಕೊಂಡು ಕಂಠಪೂರ್ತಿ ಕುಡಿದು , ಕುಣಿದು ಕುಪ್ಪಳಿಸಿ , ಸ್ಟೇಚ್ಚಾಚಾರಿಗಳಾಗಿ ನರ್ತಿಸುತ್ತಾ ನಮ್ಮ ನಾಡಿನ ಸಂಸ್ಕೃತಿ ಸಂಸ್ಕಾರಗಳನ್ನು ಹಾಳು ಮಾಡುತ್ತಾರೆ . ಈ ಯುವಕ ಯುವತಿಯರು ಯಾರೆಂದರೆ ಇವರೆಲ್ಲಾ ಹೊರ ರಾಜ್ಯದಿಂದ ಮತ್ತು ಹೊರದೇಶದಿಂದ ವಿದ್ಯೆ ಕಲಿಯಲು ಬಂದಿರುವ ಕಾಲೇಜು ವಿದ್ಯಾರ್ಥಿಗಳು ಮತ್ತು ಹೊಟ್ಟೆ ಪಾಡಿನ ಉದ್ಯೋಗಕ್ಕೆ ಬಂದಿರುವ ಹೊರಗಿನವರು , ಇವರಾರೂ ಕನ್ನಡಿಗರಲ್ಲ . ಇವರೆಲ್ಲಾ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಮನೋಇಚ್ಚೆ ಮದ್ಯಪಾನ ಮತ್ತು ಮಾದಕ ವಸ್ತುಗಳನ್ನು ಸೇವಿಸಿ ಮೈಮೇಲೆ ಪ್ರಜ್ಞೆಯಿಲ್ಲದೆ ಮರ್ಯಾದೆಗೆಟ್ಟು ವರ್ತಿಸುತ್ತಾರೆ . ಇಂತಹ ಕೆಟ್ಟರೀತಿಯ ವರ್ಷಾಚರಣೆಗಳು ನಮ್ಮ ನಾಡಿಗಾಗಲಿ ನಮ್ಮ ದೇಶಕ್ಕಾಗಲಿ ಬೇಕಿಲ್ಲ . ಪಾಶ್ಚಿಮಾತ್ಯ ಸಂಸ್ಕೃತಿಯ ಆಚರಣೆಯಿಂದ ನಮ್ಮ ದೇಶದ ಸಂಸ್ಕೃತಿ ಸಂಸ್ಕಾರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ . ವಲಸಿಗರಿಗಾಗಿ ವರ್ಷಾಚರಣೆ ಬೇಡ , ವಲಸಿಗರಿಗಾಗಿ ಬೆಂಗಳೂರನ್ನು ಬಲಿ ಕೊಡುವುದು ಬೇಡ , ಸಂಸ್ಕೃತಿ ಸಂಸ್ಕಾರಗಳು ದೇಶದ ಹೃದಯವಿದ್ದಂತೆ ಇದನ್ನು ಹಾಳುಮಾಡುವುದು ಬೇಡ ಇಂತಹ ಅನಿಷ್ಟ ವರ್ಷಾಚರಣೆಗೆ ಸರ್ಕಾರ ರಕ್ಷಣೆ ಕೊಡುವುದು ಬೇಡ ಇಂತಹ ಕೆಟ್ಟ ವರ್ಷಾಚರಣೆಗೆ ಸರ್ಕಾರವು 11 ಸಾವಿರ ಪೋಲಿಸರನ್ನು 270 ಹೊಯ್ಸಳಗಳನ್ನು 1200 ಚೀತಾ ಬೈಕ್‌ಗಳನ್ನು ನಿಯೋಜಿಸಿ , ರಾತ್ರಿ 2 ಗಂಟೆವರೆಗೆ ಮದ್ಯ ಮಾರಾಟಕ್ಕೆ ಮತ್ತು ಪಬ್ ಹಾಗೂ ರೆಸ್ಟೋರೆಂಟ್‌ಗಳಿಗೆ ಅವಕಾಶ ಮಾಡಿಕೊಡುವುದು ಯಾವ ಪುರುಷಾರ್ಥಕ್ಕೆ . ಇಂತಹ ಕಿಡಿಗೇಡಿ ಕಾರ್ಯಕ್ರಮಗಳಿಗೆ ಸರ್ಕಾರ ಬೆಂಬಲ ನೀಡಿದರೆ ಸಮಾಜದ ಮೇಲೆ ಅತ್ಯಂತ ಕೆಟ್ಟ ಪರಿಣಾಮವಾಗುತ್ತದೆ . ಅದ್ದರಿಂದ ದಯಮಾಡಿ ಮಹಾತ್ಮಗಾಂಧಿ ರಸ್ತೆಯಲ್ಲಿ ನಡೆಯುವ ಹೊಸ ವರ್ಷಾಚರಣೆ ಕಾರ್ಯಕ್ರಮವನ್ನು ಸರ್ಕಾರ ರದ್ದು ಪಡಿಸಬೇಕೆಂದು ಶ್ರೀ ಬಸವಟಿವಿ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ . ಈ ವಿಚಾರದಲ್ಲಿ ರಾಜ್ಯದ ಧರ್ಮಗುರುಗಳು ಮತ್ತು ಪ್ರಜ್ಞಾವಂತ ನಾಗರಿಕರು ಇಂತಹ ಅಸಭ್ಯ ವರ್ಷಾಚರಣೆಗಳನ್ನು ವಿರೋದಿಸಬೇಕೆಂದು ಶ್ರೀ ಬಸವಟಿವಿ ಕೇಳಿಕೊಳ್ಳುತ್ತದೆ .

-ಶರಣು ಶರಣಾರ್ಥಿಗಳು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.