“ಸಂತ ಕವಿ ಶ್ರೀ ಕನಕದಾಸರ 532ನೇ ಜಯಂತ್ಯೋತ್ಸವ” ಹಾಗೂ “ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿಯ ರಜತ ಮಹೋತ್ಸವ”

ತಾವು ಹುಟ್ಟಿ ಬೆಳೆದುಬಂದ ಸಮಾಜಕ್ಕೆ ಕಿಂಚಿತ್ ಬತಣವನ್ನು ತೀರಿಸಬೇಕೆಂಬ ಸೇವಾ ಮನೋಭಾವದ ಸರ್ಕಾರಿ ಸೇವೆಯಲ್ಲಿರುವೆ . ಅಧಿಕಾರಿ / ನೌಕರರು ಮತ್ತು ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಸ್ನೇಹ ಸೇತುವೆಯ ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕೆ ಸಮಿ … ” , ಮೊದಲಿಗೆ ಬೆಂಗಳೂರಿನ ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕರ ನಡುವೆ ‘ ಭಾರ್ಮಿಕರ ಕೇಂದ್ರ ಕನಕ ಸಮಿತಿ ” ಎಂಬ ಕಾರವಾರಕ ಸಬರದ ಕಾರ್ಯಾರಂಭ ಮಾಡಿದ ಈ ಸಂಖ್ಯೆ ಕಳೆದ 25 ವರ್ಷಗಳಿಂದ ಕುರುಬ ಸಮಾಜದ ಕಾರ್ಮಿಕರು ಮತ್ತು ಸರ್ಕಾರಿ ನೌಕರರ ರಾಜ್ಯ ಮಟ್ಟದೆ ಪ್ರಾತಿನಿಧಿಕ ಸಂಘಟನೆಯಾಗಿದೆ , ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿಯು ತನ್ನ 25 ವರ್ಷಗಳ ಇತಿಹಾಸದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುವುದು , ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಾಧಕರಿಗೆ ಅಭಿನಂದಿಸಿ ಹೊತ್ತಾಹಿಸುವುದು , ಸಮಾಜಕ್ಕೆ ಗಣನೀಯ ಕೊಡುಗೆ ನೀಡಿದ ಮಹನೀಯರನ್ನು ಸನ್ಮಾನಿಸುವುದು ಮತ್ತು ಸಂತ ಕವಿ ಕನಕದಾಸರು ಮುಂತಾದ ಪುಣ್ಯ ಪುರುಷರ ಕೃತಿಗಳನ್ನು ಮುದ್ರಿಸಿ , ಹಂಚುವುದು ಮತ್ತು ಆ೦ತಹ ಮಹಾ ಪುರುಷರ ಜಯಂತಿಯನ್ನು ಆಚರಿಸುವ ಮುಖೇನ ಮಹಾಮಹಿಮರ ಜೀವನ ಮತ್ತು ಸಂದೇಶವನ್ನು ಪ್ರಚುರಪಡಿಸುವ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತದೆ , ಅಲ್ಲದೆ ಸಮಾಜದ ಅಧಿಕಾರಿ / ನೌಕರರು , ಉದ್ಯಮಿಗಳು ಮುಂತಾದವರ ದೂರವಾಣಿ ಕೈಪಿಡಿ . ಜ್ಯ ಮತ್ತು ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳಿಗೆ ಕಲ್ಪಿಸಿರುವ ಯೋಜನೆಗಳು ಮುಂತಾದ ಮಾಹಿತಿ ಕೈಪಿಡಿಯನ್ನು ಮುದ್ರಿಸಿ , ಉಚಿತವಾಗಿ ಸಮುದಾಯಕ್ಕೆ ತಲುಪಿಸಲಾಗಿರುತ್ತದೆ .

ಸದರಿ ಸಂಘಟನೆಯ ಪ್ರೇರಣೆಯೊ೦ದಿಗೆ ಕನಕ ಗೃಹ ನಿರ್ಮಾಣ ಸಹಕಾರ ಸಂಘ , ಕಾಗಿನೆಲೆ ಕನಕ ಸೌಹಾರ್ದ ಕ್ರೆಡಿಟ್ ಕೋ – ಅಪರೇಟಿವ್ ನಿ . , ಮತ್ತು ಕನಕ ಚಾರಿಟೆಬಲ್ ಟ್ರಸ್ಟ್ ಸ್ಥಾಪನೆಗೊಂಡು ಸಮಾಜ ಸೇವೆಯಲ್ಲಿ ನಿರತವಾಗಿರುತ್ತವೆ . ಇಂದು ಹುಟ್ಟಿ ನಾಳೆ ಇಲ್ಲವಾಗುವ ಸಂಘ ಸಂಸ್ಥೆಗಳ ನಡುವೆ ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿಯು ನಿರಂತರವಾಗಿ 25 ವರ್ಷಗಳ ಸೇವೆ ಸಲ್ಲಿಸುತ್ತಾ ಮುನ್ನಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ . ಸಂಘವು ಆರಂಭವಾಗಿ 25 ವರ್ಷಗಳು ಸಂದ ಈ ಸಭೆ ಸಂದರ್ಭದಲ್ಲಿ ಸಂಘದ ರಜತ ಮಹೊತ್ಸವವನ್ನು ಹಾಗೂ ಸಂತ ಕವಿ ಕನಕ ದಾಸರ 532ನೇ ಜಯಂತ್ಯೋತ್ಸವನ್ನು ದಿನಾಂಕ 29 – 12 – 2019 ರಂದು ಭಾನುವಾರ ಬೆಳಿಗ್ಗೆ 12 – 00 ಗಂಟೆಗೆ ಕನಕ ಸಂಕೀರ್ಣ , ನಂ . 125 , ಸೋಪ್ಡೇನಹಳ್ಳಿ , ಬಸ್ ನಿಲ್ದಾಣದ ಹತ್ತಿರ , ಜೋಡಿ ರಸ್ತೆ , ಮಾತಾ ಅಮೃತಾನಂದಮಯ ಚಿತ್ರಮವೆ ಹಿಂಭಾಗ ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ ಸಮೀಪ , ಏಶ್ವೇಶ್ವರಯ್ಯ ಬಡಾವಣೆ , ಬೆಂಗಳೂರು – 56 ಇಲ್ಲಿ ಆಚರಿಸಲು ನಿರ್ಣಯಿಸಲಾಗಿದೆ , ಈ ಸಂದರ್ಭದಲ್ಲಿ ಸಂಘಟನೆಯು ನಡೆದು ಬಂದ ಹಾದಿಯ ಸಿಂಹಾವಲೋಕನದೊಂದಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆಯಲ್ಲಿ ಅರ್ಪಿಸಿಕೊಳ್ಳುವ ದಿಸೆಯಲ್ಲಿ ಚಿಂತನ – ಮಂಥನ ಮಾಡುವ ಸದುದ್ದೇಶ ಹೊಂದಲಾಗಿದೆ . ಈ ಸಂಬಂಧ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಏರ್ಪಡಿಸಿ ಸಮಾಜದ ನೌಕರರ ಮತ್ತು ಕಾರ್ಮಿಕರ ಪ್ರಚಲಿತ ಸಮಸ್ಯೆಗಳು / ಸವಾಲುಗಳು ಮತ್ತು ಅವುಗಳನ್ನು ಎದುರಿಸುವ ಬಗ್ಗೆ ವಿಚಾರ ಗೋಷ್ಠಿಗಳನ್ನು ಆಯೋಜಿಸುವುದರೊಂದಿಗೆ ಸಂಘದ ರಜತ ಮಹೋತವವನ್ನು ಅರ್ಥಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ . ಈ ಒಂದು ಕಾರ್ಯಕ್ರಮಕ್ಕೆ ಸಮಾಜದ ಸ್ವಾಮಿಜಿಗಳು , ಗಣ್ಯಮಾನ್ಯರು ಆಗಮಿಸುತ್ತಿದಾರೆ .

-ಹೆಚ್ . ಎಂ . ರೇವಣ್ಣ

ಗೌರವ ಅಧ್ಯಕ್ಷರು

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.