ಎಸ್‌ಡಿಪಿಐ ಪಕ್ಷ – ಪಿಎಫ್ಐ ಸಂಘಟನೆಗಳ ಮೇಲೆ ನಿರಾಧಾರ ಬಾಲಿಶ ಆರೋಪ – ಅಪಪ್ರಚಾರಗಳಿಗೆ ಖಂಡನೆ

ಕರ್ನಾಟಕ , ಉತ್ತರ ಪ್ರದೇಶ ಪೊಲೀಸರದ್ದು ಪೂರ್ವಯೋಜಿತ ಕೃತ್ಯ

ಸಿಎಎ / ಎನ್ ಆರ್ ಸಿ / ಎನ್ ಪಿಆರ್ ವಿರುದ್ದ ಬಲಗೊಳ್ಳಲಿರುವ ಹೋರಾಟ

BENGALURU : ಸಿಎಎ / ಎನ್‌ಆರ್‌ಸಿ ವಿರುದ್ದ ದೇಶದಾದ್ಯಂತ ಭುಗಿಲೆದ್ದಿರುವ ಅಭೂತಪೂರ್ವ ಪ್ರತಿಭಟನೆಗಳಿಂದ ಕಂಗೆಟ್ಟ ಬಿಜೆಪಿ ದೇಶದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಇನ್ನಿಲ್ಲದ ಹತಾಶ ಪ್ರಯತ್ನ ನಡೆಸುತ್ತಿದೆ . ಬಿಜೆಪಿ ಸರಕಾರವಿರುವ ರಾಜ್ಯಗಳಲ್ಲಿ ಅಲ್ಲಿನ ರಾಜ್ಯ ಸರಕಾರ ಪೊಲೀಸರನ್ನು ಉಪಯೋಗಿಸಿಕೊಂಡು ಪ್ರತಿಭಟನಾಕಾರರ ಮೇಲೆ ಅಮಾನುಷ ದೌರ್ಜನ್ಯ ನಡೆಸಿವೆ . ಕರ್ನಾಟಕ , ಉತ್ತರ ಪ್ರದೇಶ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಒಟ್ಟು 31 ಜೀವ ಬಲಿಯಾಗಿದ್ದು ನೂರಾರು ಮಂದಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗಳಲ್ಲಿ ನರಳುವಂತೆ ಮಾಡಿವೆ . ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ನಿರಂತರವಾಗಿ ವ್ಯಕ್ತವಾಗುತ್ತಿರುವ ಪ್ರತಿಭಟನೆಗಳನ್ನು ಕಂಡು ವಿಚಲಿತಗೊಂಡಿರುವ ಕರ್ನಾಟಕ ರಾಜ್ಯದ ಬಿಜೆಪಿ ಸರಕಾರ ಇದೀಗ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ – ಎಸ್‌ಡಿಪಿಐ ಪಕ್ಷ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ( ಪಿಎಫ್‌ಐ ) ಸಂಘಟನೆಯನ್ನು ನಿಷೇಧಿಸಬೇಕೆಂದು ಹೇಳಿಕೆ ನೀಡುತ್ತಿರುವುದು ಖಂಡನೀಯ . ಪೊಲೀಸರ ಶೋಚನೀಯ ವೈಫಲ್ಯ , ಶೌರ್ಯ ಮತ್ತು ಪಕ್ಷಪಾತೀಯ ಮನೋಭಾವನೆ , ಉತ್ತರ ಪ್ರದೇಶ ಸರಕಾರದ ಸೇಡು ಹಾಗೂ ದ್ವೇಷಭರಿತ ಷಡ್ಯಂತ್ರಗಳೇ ಈ ಮೂರು ರಾಜ್ಯಗಳಲ್ಲಿ ಹಿಂಸೆ ತಾಂಡವಾಡಲು ಕಾರಣವೆನ್ನುವುದು ಸಾಕ್ಷ್ಯಗಳ ಸಮೇತ ಸಾಬೀತಾಗಿವೆ . ಕರ್ನಾಟಕ ರಾಜ್ಯದ ಕೆಲ ಬಿಜೆಪಿ ಸಚಿವರು , ಶಾಸಕರು ಹಾಗೂ ಸಂಸದರು ಹಿಂಸೆಗೆ ಪ್ರಚೋದನೆ ನೀಡುವ ಹಾಗೂ ದ್ವೇಷ ಹುಟ್ಟಿಸುವ ಪ್ರಚೋದನಾತ್ಮಕ ಹೇಳಿಕೆಗಳನ್ನು ನಿರಂತರವಾಗಿ ನೀಡುತ್ತಿದ್ದಾರೆ . ಅಂತಹವರ ಮೇಲೆ ಕರ್ನಾಟಕ ಸರಕಾರ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ . ಎಸ್‌ಡಿಪಿಐ ಪಕ್ಷ ಹಾಗೂ ಪಿಎಫ್‌ಐ ಸಂಘಟನೆಯ ಮೇಲೆ ನಿರಾಧಾರ ಹಾಗೂ ಬಾಲಿಶ ಆರೋಪಗಳನ್ನು ಹಾಗೂ ಅಪಪ್ರಚಾರಗಳನ್ನು ಮಾಡುತ್ತಿರುವ ರಾಜ್ಯ ಸರಕಾರದ ನಿಲುವನ್ನು ವಿರೋಧಿಸುತ್ತೇವೆ . ಈ ಬಗ್ಗೆ ಸೂಕ್ತ ಕಾನೂನು ಹೋರಾಟವನ್ನು ನಡೆಸಲಾಗುವುದು . ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟಿಸುತ್ತಿದ್ದ ಜನರ ಮೇಲೆ ಮಂಗಳೂರಿನಲ್ಲಿ ಪೊಲೀಸರು ನಡೆಸಿದ ಲಾಠಿಚಾರ್ಜ್ ಹಾಗೂ ಗೋಲಿಬಾರ್‌ನಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದು ಹಲವಾರು ಜನರು ಗಾಯಗೊಂಡಿರುವ ಘಟನೆ ನಾಗರಿಕ ಸಮಾಜವನ್ನು ತೀವ್ರವಾಗಿ ಘಾಸಿಗೊಳಿಸಿದೆ . ಸುಮಾರು 100 – 150ರಷ್ಟು ಪ್ರತಿಭಟನಾಕಾರರ ಮೇಲೆ ವಿನಾಕಾರಣ ದೌರ್ಜನ್ಯ ನಡೆಸಿದ ಪೊಲೀಸರ ಕ್ರಮ ಎಲ್ಲಾ ಅನಾಹುತಗಳಿಗೆ ಕಾರಣ . ಗಂಭೀರ ಗಾಯಗೊಂಡ ಹಲವು ಮಂದಿ ಮಂಗಳೂರು ನಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ . ಆಸ್ಪತ್ರೆಯೊಳಗೆ ಆಶ್ರುವಾಯು ಸಿಡಿಸಿರುವುದು ಹಾಗೂ ಪೊಲೀಸರು ಆಸ್ಪತ್ರೆಯ ಐಸಿಯು ಘಟಕದ ಬಾಗಿಲನ್ನು ಒಡೆದು ಒಳ ನುಗ್ಗಿ ಅಲ್ಲಿದ್ದ ವೈದ್ಯರು , ನರ್ಸ್‌ಗಳಿಗೂ ಲಾಠಿ ಬೀಸಿರುವುದು ಕೂಡಾ ಮಂಗಳೂರು ಪೊಲೀಸರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ . ಅಲ್ಲಿನ ಪೊಲೀಸರ ಕ್ರೌರ್ಯ ಮನೋಸ್ಥಿತಿ ಎಷ್ಟು ಮಿತಿಮೀರಿದೆ ಎನ್ನುವುದಕ್ಕೆ ಗಲಭೆಗೆ ಸಂಬಂಧಪಟ್ಟ ಕೆಲವು ವೀಡಿಯೋ ದೃಶ್ಯಗಳೇ ಸಾಕ್ಷಿ .

ಆದರೆ ಇದುವರೆಗೂ ಪೊಲೀಸ್ ಅಧಿಕಾರಿಗಳ ಮೇಲೆ ಯಾವುದೇ ಕ್ರಮಗಳನ್ನು ರಾಜ್ಯ ಸರಕಾರ ಕೈಗೊಳ್ಳದಿರುವುದು ದೊಡ್ಡ ದುರಂತವಾಗಿದೆ . ಕಾರಣವಿಲ್ಲದೆ ಲಾಠಿಚಾರ್ಜ್ ಹಾಗೂ ಗೋಲಿಬಾರ್ ನಡೆಸಿದ ಪೊಲೀಸ್ ಅಧಿಕಾರಿಗಳು ಈಗಲೂ ತಮ್ಮ ಸ್ಥಾನದಲ್ಲಿ ಮುಂದುವರಿಯುತ್ತಿರುವುದು ಹಾಗೂ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿರುವುದು ಅತ್ಯಂತ ಖಂಡನೀಯ , ಇದೀಗ ಸರಕಾರ ಇಡೀ ಪ್ರಕರಣವನ್ನು ಸಿಐಡಿ ಮತ್ತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಿದ್ದು ಇದರಿಂದ ಕಿಂಚಿತ್ತೂ ನ್ಯಾಯ ಸಿಗುವ ಭರವಸೆ ಉಳಿದಿಲ್ಲ . ಆದುದರಿಂದ ರಾಜ್ಯ ಸರಕಾರ ತಪ್ಪಿತಸ್ಥ ಅಧಿಕಾರಿಗಳನ್ನು ತಕ್ಷಣವೇ ಹುದ್ದೆಯಿಂದ ಅಮಾನತುಗೊಳಿಸಬೇಕು ಹಾಗೂ ಕರ್ನಾಟಕ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು . ಈ ನಡುವೆ ರಾಜ್ಯ ಬಿಜೆಪಿ ಸರಕಾರವು ಮಂಗಳೂರಿನಲ್ಲಿ ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟ ಕುಟುಂಬಕ್ಕೆ ಘೋಷಿಸಿದ್ದ ಪರಿಹಾರವನ್ನು ವಾಪಾಸ್ ಪಡೆದಿರುವುದು ಅತ್ಯಂತ ನಾಚಿಕೆಗೇಡು ಮಾತ್ರವಲ್ಲ ರಾಜ್ಯಕ್ಕೆ ಮಾಡಿದ ಅಪಮಾನವಾಗಿದೆ . ದೇಶದಾದ್ಯಂತ ಸಿಎಎ / ಎನ್‌ಆರ್‌ಸಿ ವಿರುದ್ದ ಪ್ರತಿಭಟನೆಗಳು ವ್ಯಾಪಕವಾಗಿ ನಿರಂತರವಾಗಿ ನಡೆಯುತ್ತಿದೆ . ಆದರೆ ಬಿಜೆಪಿ ಸರಕಾರಗಳಿರುವ ರಾಜ್ಯಗಳಲ್ಲಿ ಮಾತ್ರ ಹಿಂಸಾ ಕೃತ್ಯಗಳು ಹಾಗೂ ಪೊಲೀಸ್ ದೌರ್ಜನ್ಯಗಳು ಭೀಕರವಾಗಿ ನಡೆಯುತ್ತಿವೆ . ಕರ್ನಾಟಕ ಮತ್ತು ಉತ್ತರ ಪ್ರದೇಶಗಳಲ್ಲಿ ಪ್ರತಿಭಟನಾಕಾರರ ಮೇಲೆ ಮಹಿಳೆಯರು , ವಿದ್ಯಾರ್ಥಿಗಳು , ವೃದ್ಧರು , ಮಕ್ಕಳನ್ನದೆ . ನಡೆಸಿದ ಪೊಲೀಸರ ದೌರ್ಜನ್ಯ ಅತ್ಯಂತ ಭಯಾನಕವಾಗಿದೆ . ಬಿಜೆಪಿ ಸರಕಾರಗಳಿರುವ ಮೂರು ರಾಜ್ಯಗಳಾದ ಉತ್ತರ ಪ್ರದೇಶದಲ್ಲಿ 23 ಜನರನ್ನು , ಅಸ್ಲಾಮ್ ನಲ್ಲಿ 6 ಜನರನ್ನು ಹಾಗೂ ಕರ್ನಾಟಕದಲ್ಲಿ ಇಬ್ಬರನ್ನು ಪೊಲೀಸರು ಕೊಂದಿದ್ದು , ನೂರಾರು ಜನರು ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ . ಬಿಜೆಪಿಯೇತರ ಸರಕಾರವಿರುವ ಇತರ ರಾಜ್ಯಗಳಲ್ಲಿ ಹಿಂಸಾ ಸನ್ನಿವೇಶಗಳು ಉದ್ಬವಾಗದಿರುವುದು ಹಾಗೂ ಬಿಜೆಪಿ ಸರಕಾರಗಳಿರುವ ರಾಜ್ಯಗಳಲ್ಲಿ ಭೀಕರ ಕ್ರೌರ್ಯ ಮರೆದಿರುವುದು ಹಿಂಸಾ ಕೃತ್ಯಗಳಲ್ಲಿ ಬಿಜೆಪಿ ಸರಕಾರ ಹಾಗೂ ಪೊಲೀಸರ ನೇರ ಕೈವಾಡವನ್ನು ವ್ಯಕ್ತಪಡಿಸುತ್ತಿದೆ . ಉತ್ತರ ಪ್ರದೇಶ ಮುಖ್ಯಮಂತ್ರಿ ಪ್ರತಿಭಟನಾಕಾರರ ವಿರುದ್ದ ಪ್ರತೀಕಾರ ‘ ( ಬದ್ಲಾ ) ನಡೆಸಲಾಗುವುದು ಎಂದಿರುವುದು ಪ್ರತಿಭಟನಾಕಾರರ ಮೇಲೆ ಪೊಲೀಸರು ಪಿಸ್ತೂಲ್‌ಗಳಿಂದ ಗುಂಡು ಹೊಡೆಯುವುದು , ಪೊಲೀಸರು ಗುಂಪು ಗುಂಪಾಗಿ ಮನೆಗಳಿಗೆ ನುಗ್ಗಿ ದಾಂಧಲೆ ಎಬ್ಬಿಸಿ ಮಸೀಳೆಯರು , ಮಕ್ಕಳು , ವೃದ್ದರ ಮೇಲೆ ಹಲ್ಲೆ ನಡೆಸಿರುವುದು ಮುಂತಾದವುಗಳ ವೀಡಿಯೋ ಚಿರ್ತಣಗಳು ಬಿಜೆಪಿ ಸರಕಾರವಿರುವ ರಾಜ್ಯಗಳ ಕ್ರೌರ್ಯತೆಗೆ ಸಾಕ್ಷಿಯಾಗಿದೆ . ಬಿಜೆಪಿ ಸರಕಾರವಿರುವ ರಾಜ್ಯಗಳಲ್ಲಿ ಈ ತರಹದ ಭಯೋತ್ಪಾದನಾ ಸನ್ನಿವೇಶ ನಡೆಯುವುದಕ್ಕೆ ಆಯಾಯ ಬಿಜೆಪಿ ಸರಕಾರಗಳು ಹಾಗೂ ಪೊಲೀಸರೇ ಕಾರಣ . ಈ ಎಲ್ಲಾ ಗಲಭೆಗಳು ಬಿಜೆಪಿ ಸರಕಾರದ ಮತ್ತು ಪೊಲೀಸರ ಪೂರ್ವಯೋಜಿತ ಸಂಚು ಹಾಗೂ ಕೋಮುವಾದಿ ಮನೋಭಾವನೆಯೇ ಕಾರಣವಾಗಿದೆ . ಹಿಂಸೆ ಹಾಗೂ ಬಲಪ್ರಯೋಗದಿಂದ ಪ್ರತಿಭಟನೆಗಳನ್ನು ಹತ್ತಿಕ್ಕಬಹುದು ಎಂದು ಯೋಚಿಸಿರುವ ಇಂತಹ ಸರಕಾರಗಳು ಪ್ರಜಾಪ್ರಭುತ್ವಕ್ಕೆ ಮಾತ್ರವಲ್ಲ ನಮ್ಮ ದೇಶದ ಭವಿಷ್ಯಕ್ಕೆ ಮಾರಕವಾಗಿದೆ . ಕೇಂದ್ರ ಸರಕಾರ ಇದೀಗ ಎನ್‌ಪಿಆರ್‌ನ್ನು ನಡೆಸಲು ಹೊರಟಿರುವುದನ್ನು ವಿರೋಧಿಸುತ್ತಿದ್ದೇವೆ . ಗೃಹ ಮಂತ್ರಿ ಅಮಿತ್ ಶಾ ಹೇಳಿದ ಹಾಗೆ ಇದೊಂದು ಎನ್‌ಆರ್‌ಸಿಯ ಮೊದಲ ಹಂತವಾಗಿದೆ . ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಯಾವುದೇ ಕ್ರಮಗಳನ್ನು ನಾಗರಿಕ ಜನತೆ ಒಕ್ಕೊರಲಿನಿಂದ ಐಕ್ಯರಾಗಿ ವಿರೋಧಿಸುತ್ತಿದೆ . ನಾವೆಲ್ಲರೂ ಸಿಎಎ / ಎನ್‌ಆರ್ ಸಿ / ಎನ್‌ಪಿಆರ್ ನ್ನು ಬಹಿಷ್ಕರಿಸುತ್ತೇವೆ ಹಾಗೂ ತಿರಸ್ಕರಿಸುತ್ತೇವೆ . ಈ ಎಲ್ಲಾ ನಿರ್ಧಾರ / ಕಾನೂನುಗಳನ್ನು ಹಿಂಪಡೆಯುವ ತನಕ ನಾಗರಿಕ ಸಮಾಜದ ಹೋರಾಟ ನಿರಂತರವಾಗಿ ಮುಂದುವರಿಯಲಿದೆ .

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ :

1 , ಇಲ್ಯಾಸ್ ಮುಹಮ್ಮದ್ ತುಂಬೆ ( ರಾಜ್ಯಾಧ್ಯಕ್ಷರು , ಎಸ್‌ಡಿಪಿಐ ಕರ್ನಾಟಕ ) 2 . ಮುಹಮ್ಮದ್ ಶಾಕಿಫ್ ( ರಾಜ್ಯಧ್ಯಕ್ಷರು , ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ) 3 , ಬಾಸ್ಕರ್ ಪ್ರಸಾದ್ ( ದಲಿತ ಮುಖಂಡರು ಮತ್ತು ಸಾಮಾಜಿಕ ಹೋರಾಟಗಾರರು ) 4 . ಎಜಿ ಖಾನ್ ( ರಾಜ್ಯಾಧ್ಯಕ್ಷರು , ದಲಿತ ಮುಸ್ಲಿಮ್ ಸೇನೆ , ಕರ್ನಾಟಕ ) 5 , ಹೆಬ್ಬಾಳ ವೆಂಕಟೇಶ್ ( ದಲಿತ ಮುಖಂಡರು )

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.