೭ನೇ ರಾಜ್ಯ ಮಟ್ಟದ ಅಮರಶಿಲ್ಪಿ ಜಕಣಾಚಾರಿಯವರ ಸಂಸ್ಕರಣಾ ದಿನಾಚರಣೆ

ಕರ್ನಾಟಕ ರಾಜ್ಯದಲ್ಲಿ ೪೫ ಲಕ್ಷ ವಿಶ್ವಕರ್ಮ ಸಮಾಜದವರು ಚಿನ್ನ ಬೆಳ್ಳಿ ಕಬ್ಬಿಣ , ಮರಗೆಲಸ , ಶಿಲ್ಪಕಲಾ ಕೃತಿಗಳನ್ನು ಮಾಡುತ್ತಿದ್ದೇವೆ . ದೇಶದಲ್ಲಿ ೧೦ ಕೋಟಿಗೂ ಅಧಿಕ ವಿಶ್ವಕರ್ಮರು ಇರುವ ನಮ್ಮ ಸಮುದಾಯ . ಭಾಷೆಯಲ್ಲಿ ವಿವಿಧತೆ ಇದ್ದರೂ ಪಂಚ ವೃತ್ತಿಯಲ್ಲಿ ವಿಶ್ವಕರ್ಮ ಸಮಾಜದವರಾಗಿದ್ದೇವೆ . ಸಮಾಜದವರೆಲ್ಲಾ ಒಂದಾಗಿದ್ದೇವೆ . ವಿಶ್ವಕರ್ಮ ಸಮಾಜವು ಒಂದು ಜಾತಿಯಲ್ಲಾ , ಸಂಸ್ಕೃತಿ ವಿಶ್ವಕರ್ಮರ ಪಂಚ ಕಸಬುಗಳು ಸಮಸ್ತ ನಾಗರಿಕರ ಬದುಕಿಗೆ ಹಾಗೂ ಇತಿಹಾಸಕ್ಕೆ ಆಧಾರ ಸ್ಥಂಭ , ಪಂಚ ಕಸುಬುಗಳಲ್ಲಿ ವಿಶೇಷವಾದ ಶಿಲ್ಪ ಕಲೆಯ ಮೂಲಕ ಇಡೀ ಜಗತ್ತೇ ಭಾರತದ ಕಡೇ ನೋಡುವಂತೆ ಮಾಡಿದೆ . ಈ ಶಿಲ್ಪ ಕಲಾ ಕೃತಿಗಳ ಮೂಲ ಪುರುಷ ವಾಸ್ತುಶಿಲ್ಪಕ್ಕೆ ಆಧಿನಾಯಕ ಅಮರಶಿಲ್ಪಿ ಜಕಣಾಚಾರಿ . ೯೯೦ ವರ್ಷಗಳ ಹಿಂದೆ ಹಾಸನ ಜಿಲ್ಲೆಯ ಹಳೇಬೀಡು , ಬೇಲೂರುಗಳಲ್ಲಿ ನಿರ್ಮಿಸಿರುವಂತಹ ಚನ್ನಕೇಶವ ದೇವಾಲಯಗಳು ಅದರೊಟ್ಟಿಗೆ ೬೬೦ ದೇವಾಲಯಗಳನ್ನು ನಿರ್ಮಿಸಿದ ರೂವಾರಿ ಅಮರಶಿಲ್ಪಿ ಜಕಣಾಚಾರಿ ಮತ್ತು ಡಂಕಣಾಚಾರಿ . ಮಾನ್ಯರೆ , ೯೦೦ ವರ್ಷಗಳ ಹಿಂದೆಯೇ ೧000 ವರ್ಷಗಳ ಮುಂದೆ ನಡೆಯಬಹುದಾದ ನಾಗರಿಕತೆಯನ್ನು ಶಿಲ್ಪಕಲಾ ಕೃತಿಯಲ್ಲಿ ನಿರ್ಮಿಸಿದ ಮಾಹಾನ್ ಶಿಲ್ಪಿ ಜಕಣಾಚಾರಿ ಮತ್ತು ಡಂಕಣಾಚಾರಿ . ಇಂತಹ ಮಹಾನ್ ಪುರುಷನ ಕೊಡುಗೆಗಳನ್ನು ನೆನಪಿಸಿಕೊಳ್ಳುವಂತಹ ಅಮರ ಶಿಲ್ಪಿ ಜಕಣಾಚಾರಿಯ ಸಂಸ್ಕರಣಾ ದಿನಾಚರಣಾ ಕಾರ್ಯಕ್ರಮವನ್ನು ೬ ವರ್ಷಗಳಿಂದ ಹೋರಾಟ , ಪಾದ ಯಾತ್ರೆ ಹಾಗೂ ಧರಣಿಗಳ ಮೂಲಕ ನಡೆಸಿಕೊಂಡು ಬಂದಿರುತ್ತೇವೆ .

ಈ ಕಾರ್ಯಕ್ರಮವನ್ನು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ದಿನಾಂಕ : ೦೧ . ೧೧ . ೨೦೨೦ ರಂದು ಮಧ್ಯಾಹ್ನ ೨ . ೦೦ ಗಂಟೆಗೆ ೭ನೇ ರಾಜ್ಯ ಮಟ್ಟದ ಅಮರಶಿಲ್ಪಿ ಜಕಣಾಚಾರಿಯವರ ಸಂಸ್ಕರಣಾ ದಿನಾಚರಣೆಯನ್ನು ನಡೆಸುತ್ತಿದ್ದೇವೆ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ . ಎಸ್ . ಯಡಿಯೂರಪ್ಪ ನವರು ಮತ್ತು ಕೇಂದ್ರ ಸಚಿವರಾದ ಶ್ರೀ ಡಿ . ವಿ . ಸದಾನಂದಗೌಡರ ಅಧ್ಯಕ್ಷತೆಯೊಂದಿಗೆ ವಿರ್ಶಕರ್ಮ ಸ್ವಾಮೀಜಿಗಳು ಹಾಗೂ ಹಿಂದುಳಿದ ವರ್ಗಗಳ ಸ್ವಾಮೀಜಿಗಳು , ವಿಶೇಷವಾಗಿ ಅವಧೂತರಾದ ಶ್ರೀ ಶ್ರೀ ಶ್ರೀ ವಿನಯಗುರೂಜಿಯವರ ಸಾನಿಧ್ಯದಲ್ಲಿ ಅನೇಕ ಸಚಿವರು ಶಾಸಕರ ಸಮಕ್ಷಮದಲ್ಲಿ ಹಮ್ಮಿಕೊಳ್ಳಲಾಗಿದೆ . ಈ ಕಾರ್ಯಕ್ರಮದ ಮೂಲಕ ಈ ಕೆಳಕಂಡ ಬೇಡಿಕೆಗಳ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು .

ಬೇಡಿಕೆಗಳು

೧ . ಅಮರಶಿಲ್ಪಿ ಜಕಣಾಚಾರಿಯವರ ಸಂಸ್ಕಾರಣಾ ದಿನಾಚರಣೆಯನ್ನು ಸರ್ಕಾರದ ಈ ಕಾರ್ಯಕ್ರಮವನ್ನಾಗಿ ಆಚರಿಸುವುದು . ೨ . ಕರ್ನಾಟಕ ಸರ್ಕಾರದ ಯಾವುದಾದರೊಂದು ವಿಶ್ವವಿದ್ಯಾಲಯಕ್ಕೆ ಅಮರಶಿಲ್ಪಿ ಜಕಣಾಚಾರಿಯವರ ಹೆಸರನ್ನು ಇಡುವುದು . ೩ . ಅಮರಶಿಲ್ಪಿ ಜಕಣಾಚಾರಿಯವರ ಪುತ್ತಳಿಯನ್ನು ಬೇಲೂರಿನ ಚೆನ್ನಕೇಶವ ದೇವಸ್ಥಾನದ ಆವರಣದಲ್ಲಿ ಸ್ಥಾಪಿಸುವುದು . ೪ . ಕಲಬುರಗಿ ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಜಕಣಾಚಾರಿಯವರ ಹೆಸರನ್ನು ಇಡುವುದು , ೫ . ವಿಶ್ವಕರ್ಮ ಅಭಿಎಸೃದ್ದಿ ನಿಗಮಕ್ಕೆ ಸಮಾಜದವರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ : ೧ ಲಕ್ಷ ೨ ಸಾವಿರ ( ಒಂದು ಲಕ್ಷದ ಎರಡು ಸಾವಿರ ) ಇದನ್ನು ಪೂರೈಸಲು ೨೦೦ ಕೋಟಿ ರೂ . ಗಳ ಹಣವನ್ನು ತಕ್ಷಣ ಬಿಡುಗಡೆ ಮಾಡುವುದು . ೬ . ಗ್ರಾಮಾಂತರ ಪ್ರದೇಶದಲ್ಲಿರುವ ಕಬ್ಬಿಣ ಮತ್ತು ಮರಗೆಲಸದವರಿಗೆ ಸರ್ಕಾರದ ಅನೇಕ ಯೋಜನೆಗಳ ಮೂಲಕ ಜಿಲ್ಲಾ , ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳ ಮುಖಾಂತರ ವಿಶೇಷ ಆರ್ಥಿಕ ನೆರವು ಜಾರಿಗೆ ತರುವುದು . ೭ ಚಿನ್ನ – ಬೆಳ್ಳಿ ಕೆಲಸಗಾರರ ಮೇಲೆ ಸರ್ಕಾರದ ಆದೇಶವಿದ್ದರೂ ಪೊಲೀಸರಿಂದ ನಿರಂತರ ದೌರ್ಜನ್ಯ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುವುದು , ೮ . ಪಂಚ ಕಸಬುಗಳಿಗೆ ಅನುಸಾರವಾಗಿ ಪಂಚ ಪೀಠಗಳಾದ ವರವಿಯ ಮೌನೇಶ್ವರ , ಶಿರಸಂಗಿಯ ಕಾಳಿಕಾದೇವಿ , ಚಿಕ್ಕಲ್ಲೂರಿನ ಶ್ರೀ ಸಿದ್ದಪ್ಪಾಜಿಯ ದೇವಾಲಯ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕು ಪೋತಲೂರು ಶ್ರೀ ವೀರಬ್ರಹೇಂದ್ರಸ್ವಾಮಿ ದೇವಾಲಯ ( ಪಾಪಾಗ್ನಿ ಮಠ ) ಅಲ್ಲದೇ ತಿಂಥಣಿಯ ಶ್ರೀ ಮೌನೇಶ್ವರ ದೇವಾಲಯಗಳನ್ನು ಅಭಿವೃದ್ದಿ ಪಡಿಸಲು ಪ್ರಾಧಿಕಾರ ರಚಿಸುವುದು . ೯ . ಇತಿಹಾಸ ಉಳಿಸುವ ಮತ್ತು ಬೆಳೆಸುವ ವೃತ್ತಿಗಳಾದ ಪಂಚ ಕಸುಬುಗಳಿಗೆ ಸಂಬಂಧಪಟ್ಟಂತೆ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದು .

– ಶ್ರೀ ಶ್ರೀ ಶ್ರೀ ಕಾಳಹಸ್ತೆಂದ್ರ ಮಹಾ ಸ್ವಾಮಿಗಳು

ವಿಶ್ವಕರ್ಮ ಮಠಾಧಿಪತಿಗಳ ಒಕ್ಕೂಟ

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.