ಜಾನಪದ ಲೋಕದ ಬೆಳ್ಳಿಹಬ್ಬ ಮತ್ತು ಇದರ ಪ್ರಯುಕ್ತ ಕ್ಯಾಲೆಂಡರ್ ಬಿಡುಗಡೆ

ಕನ್ನಡ ಸಾಹಿತ್ಯ ಮತ್ತು ಜಾನಪದ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕನ್ನಡ ಸಾರಸ್ವತ ಲೋಕದ ಹಿರಿಯರಲ್ಲಿ ಒಬ್ಬರಾದ ಎಚ್ . ಎಲ್ . ನಾಗೇಗೌಡರದು ಬಹುಮುಖ ಪ್ರತಿಭೆ , ಕವಿಯಾಗಿ , ಕಥೆಗಾರರಾಗಿ , ಕಾದಂಬರಿಕಾರರಾಗಿ , ಅನುವಾದಕರಾಗಿ , ಜಾನಪದ ಸಂಗ್ರಾಹಕ , ಸಂಶೋಧಕರಾಗಿ , ನಿರ್ಮಾತೃವಾಗಿ ನಾಗೇಗೌಡರು ನಾಡಿಗೆ ಬಹು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ . ಕನ್ನಡ ನಾಡಿನ 20ನೆಯ ಶತಮಾನದ ಚರಿತ್ರೆಯ ಅದ್ಭುತಗಳಲ್ಲಿ ಒಂದು ನಾಗೇಗೌಡರು ರೂಪಿಸಿದ ಜಾನಪದ ಲೋಕ , ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ರಾಮನಗರದ ಬಳಿ ಸುಮಾರು 15 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಜಾನಪದ ಲೋಕವು ನಾಗೇಗೌಡರ ಕಠಿಣ ಪರಿಶ್ರಮ , ಸಂಘಟನಾ ಶಕ್ತಿಯ ಫಲವಾಗಿ 1994ರ ಮಾರ್ಚ್ 12 ರಂದು ಆರಂಭವಾಯಿತು . ಕಳೆದ 25 ವರ್ಷಗಳಿಂದ ಜಾನಪದ ಲೋಕವ ನಮ್ಮ ನಾಡಿನ ಜಾನಪದ ಕಲೆ , ಸಾಹಿತ್ಯ , ಸಂಸ್ಕೃತಿ , ಜಾನಪದ ಗೀತ ಗಾಯನ , ಜಾನಪದ ಕ್ರೀಡೆ , ಜಾನಪದ ವಸ್ತು ಮತ್ತು ಪರಿಕರಗಳ ಸಂಗ್ರಹ , ಜಾನಪದ ಸಂಪ್ರದಾಯ ಮತ್ತು ಚಟುವಟಿಕೆಗಳನ್ನು ಸಂರಕ್ಷಿ , ಮುನ್ನಡೆಸುವ ಮಹತ್ಕಾರ್ಯವನ್ನು ನಿರ್ವಹಿಸುತ್ತಿದೆ . ‘ ಜಾನಪದ ಲೋಕ ‘ ರಾಜ್ಯದಲ್ಲಿ ಒಂದು ಪ್ರತಿಷ್ಠಿತ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆದು ಬಂದಿದೆ .

ಈ ಲೋಕದಲ್ಲಿ ಸಂಗ್ರಹವಾಗಿರುವ ಅಪರೂಪದ ಅಮೂಲ್ಯ ಜಾನಪದ ವಸ್ತುಸಂಗ್ರಹಾಲಯವು ರಾಷ್ಟ್ರದಲ್ಲಿ ಪ್ರಖ್ಯಾತಿಯಾಗಿರುತ್ತದೆ , ಇದು ಜಾನಪದ ಕಲಾವಿದರ ತರಬೇತಿ , ಕಲಾ ಪ್ರದರ್ಶನ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವೂ ಆಗಿರುತ್ತದೆ . ಕರ್ನಾಟಕ ಜಾನಪದ ಪರಂಪರೆಯ ಸಂರಕ್ಷಣೆ – ಸಂವರ್ಧಪ್ರಸಾರ ಕಾರ್ಯದಲ್ಲಿ ನಿರತವಾಗಿರುವ ಕರ್ನಾಟಕ ಜಾನಪದ ಪರಿಷತ್ತು ಅತ್ಯಂತ ವಿಶಿಷ್ಟ ರೀತಿಯಲ್ಲಿ 2020ರ ಫೆಬ್ರವರಿ ಎರಡನೇ ವಾರದಲ್ಲಿ ದಿನಾಂಕ 7 , 8 ಮತ್ತು 9ರ ಫೆಬ್ರವರಿ ಚಾನಪದ ಲೋಕದಲ್ಲಿ ಜಾನಪದ ಲೋಕದ ಬೆಳ್ಳಿಹಬ್ಬ ಮತ್ತು ‘ ಪ್ರವಾಸಿ ಜಾನಪದ ಲೋಕೋತ್ಸವ ವನ್ನು ಆಚರಿಸಲು ಉದ್ದೇಶಿಸಿರುತ್ತದೆ . ಈ ಬೆಳ್ಳಿಹಬ್ಬ ಮತ್ತು ಲೋಕೋತ್ಸವದಲ್ಲಿ ಬೆಂಗಳೂರಿನಲ್ಲಿ ಒಂದು ದಿನ ಮತ್ತು ಜಾನಪದ ಲೋಕದಲ್ಲಿ ಎರಡು ದಿನಗಳ ಕಾಲವೂ ಕಲಾವಿದರಿಗೆ ಸನ್ಮಾನ , ಕರಕುಶಲ ಕಲೆಗಳ ಮೇಳ , ಆಹಾರ ಮೇಳ , ಜನಪದ ಕಲೆಗಳ ವೈವಿಧ್ಯಮಯ ಪ್ರದರ್ಶನಗಳು ನಡೆಯಲಿವೆ . ಕರ್ನಾಟಕದ ಕರಕುಶಲ ಕರಿಗಳು , ಕಲಾವಿದರುಗಳಷ್ಟೇ ಅಲ್ಲದೆ . ಹೊರ ರಾಜ್ಯಗಳ ಕಲಾವಿದರುಗಳೂ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ . ಜಾನಪದ ಲೋಕದ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುತ್ತಿದೆ . ಈ ಕ್ಯಾಲೆಂಡರ್‌ನ ಬಿಡುಗಡೆಯ ಉದ್ದೇಶ ನಾಗೇಗೌಡರ ಸಾಧನೆಯನ್ನು ನೆನಪಿಸಿಕೊಳ್ಳುವುದು , ಜಾನಪದ ಲೋಕಕ್ಕೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿವುದು ಮತ್ತು ಕಲಾವಿದರಿಗೆ ಮನ್ನಣೆ ತಂದುಕೊಡುವುದು ಆಗಿದೆ .

ಟಿ . ತಿಮ್ಮೇಗೌಡ , ಐಎಎಸ್ (ನಿ) ಅಧ್ಯಕ್ಷರು

ಕರ್ನಾಟಕ ಜಾನಪದ ಪರಿಷತ್ತು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.