ಶ್ರೀಮದ್ ಹಿಮವತ್ ಕೇದಾರ ಜಗದ್ಗುರುಗಳ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಮತ್ತು ಜನಜಾಗೃತಿ ಧರ್ಮಸಭೆಯ ಕಾರ್ಯಕ್ರ

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಹಿಮಾಲಯದ ದೇವನಗರಿ , ಕೇದಾರನಾಥ ಕ್ಷೇತ್ರದ ಶ್ರೀ ಕೇದಾರನಾಥನ ಮಸ್ತಕದಲ್ಲಿ 6 ತಿಂಗಳುಗಳ ಕಾಲ ಪ್ರಜ್ವಲಿಸುವ ಸುವರ್ಣ ಖಚಿತ ಕಿರೀಟವನ್ನು ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆಯ ಸಂದರ್ಭದಲ್ಲಿ ಧರಿಸಿ ಸಾಕ್ಷಾತ್ ಪರಮೇಶ್ವರನೇ ಕಿರೀಟಧಾರಿಯಾಗಿ ಇಷ್ಟಲಿಂಗೆ ಪೂಜೆಯನ್ನು ನೆರವೇರಿಸುತ್ತಿರುವನೇನೋ ಎನ್ನುವ ಹಾಗೆ ನಾಲ್ಕು ಗಂಟೆಗಳ ಕಾಲ ಇಷ್ಟಲಿಂಗ ಮಹಾಪೂಜೆಯ ವೈಭವವನ್ನು ಭಕ್ತ ಸಮೂಹಕ್ಕೆ ನೀಡಲು ದಿನಾಂಕ : 04 – 01 – 2020 ಮತ್ತು 05 – 01 – 2020 ರಂದು ಶ್ರೀ ನಿಜಗುಣ ಕಲ್ಯಾಣ ಮಂಟಪ , ದೊಡ್ಡ ಗಣೇಶ ದೇವಸ್ಥಾನದ ಎದುರು , ಬಸವನಗುಡಿ ಬೆಂಗಳೂರು – 560004 ,

ಶ್ರೀಮದ್ ಹಿಮವತ್ ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ರಾವಲ್ ಪದವಿ ವಿಭೂಷಿತ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು , ಶ್ರೀ ಕೇದಾರಪೀಠ , ಉತ್ತರಾಖಂಡ ಇವರು ಅನುಗ್ರಹಿಸಿದ್ದಾರೆ , – ದಿನಾಂಕ : 04 – 01 – 2020 ಮತ್ತು 05 – 01 – 2020 ರಂದು ಸಂಜೆ 6 . 30 ಕ್ಕೆ ಜನಜಾಗೃತಿ ಧರ್ಮಸಭೆಯು ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ನಾಡಿನ ವಿವಿಧ ಮಠಾಧೀಶರುಗಳು , ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಜರುಗುತ್ತದೆ , ದಿನಾಂಕ : 04 – 01 – 2020 ರಂದು ರಂದು ಸಂಜೆ 6 . 30 ಕ್ಕೆ ಜನಜಾಗೃತಿ ಧರ್ಮಸಭೆಯು ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ . ಎಸ್ . ಯಡಿಯೂರಪ್ಪನವರ ಉದ್ಘಾಟನೆಯೊಂದಿಗೆ ನೆರವೇರುವುದು . ಮುಖ್ಯ ಅತಿಥಿಗಳಾದ ಇಸ್ರೋದ ಮಾಜಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎ . ಎಸ್ . ಕಿರಣ್ ಕುಮಾರ್ , ಕರ್ನಾಟಕ ಸರ್ಕಾರದ ವಸತಿ ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಯ ಸಂಪುಟ ಸಚಿವರಾದ ಸನ್ಮಾನ್ಯ ಶ್ರೀ ವಿ . ಸೋಮಣ್ಣನವರು , ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ಶ್ರೀ ತೇಜಸ್ವಿಸೂರ್ಯ ರವರು , ಬಸನವಗುಡಿ ಶಾಸಕರಾದ ಶ್ರೀ ಎಲ್ , ಎ . ರವಿ ಸುಬ್ರಹ್ಮಣ್ಯ ರವರು , ಮಾಜಿ ಮಹಾಪೌರರಾದ ಶ್ರೀಮತಿ ಗಂಗಾಂಬಿಕೆ ಮಲ್ಲಿಕಾರ್ಜುನ್‌ರವರು , ಮಾಜಿ ಮಹಾಪೌರರಾದ ಶ್ರೀ ಕಟ್ಟೆ ಸತ್ಯನಾರಾಯಣ ರವರು , ಮಾಜಿ ಬಿಬಿಎಂಪಿ ಸದಸ್ಯರಾದ ಶ್ರೀ ಎನ್ . ಆರ್ . ರಮೇಶ್ ರವರು , ಶ್ರೀ ಜಿ . ಮರಿಸ್ವಾಮಿ ರವರು ಹಾಗೂ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ನೆರವೇರುವುದು . ಇದೇ ಸಂದರ್ಭದಲ್ಲಿ ಚಂದ್ರಯಾನ – 2 ರ ವಿಜ್ಞಾನಿಗಳಾದ ಶ್ರೀಮತಿ ಎಂ . ವನಿತಾ ಪ್ರಾಜೆಕ್ಟ್ ಡೈರೆಕ್ಟರ್ ಮತ್ತು ಶ್ರೀಮತಿ ರೀತು ಕರಿದಾಳ್ ಮಿಷನ್ ಡೈರೆಕ್ಟರ್ , ಇಸ್ರೋ ಇವರುಗಳಿಗೆ ವಿಶೇಷ ಗೌರವ ಸನ್ಮಾನವನ್ನು ಏರ್ಪಡಿಸಲಾಗಿದೆ .

– ಹಿಮವತ್ ಕೇದಾರ ಪೂಜಾ ಸಮಿತಿ ( ರಿ )

ಶಿವಪ್ರಕಾಶ್. ಪಿ ,

ಅಧ್ಯಕ್ಷರು ,

City Today News

(citytoday.media)

9341997946

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.