ಯುಐಸಿಸಿ ಸಹಯೋಗದೊಂದಿಗೆ “ವಿಶ್ವ ಕ್ಯಾನ್ಸರ್ ದಿನ” ಕಾರ್ಯಕ್ರಮ, ಫಬ್ರವರಿ 9 ರಂದು ಕಬ್ಬನ್ ಪಾರ್ಕ್ ನಲ್ಲಿ- ಕ್ಲಾಸಿಕ್ ರೋಡ್ ರನ್ನರ್ಸ್ ಆಥ್ಲೆಟಿಕ್ ಕ್ಲಬ್

ಇದೊಂದು ಸಾಮಾಜಿಕ ಕಲ್ಯಾಣಕ್ಕಾಗಿ ಹಮ್ಮಿಕೊಂಡ ದೈನ್ಯ ಹಸುಳೆಗಳ ಕ್ಯಾನ್ಸರ್ ರೋಗಕ್ಕೆ ತುತ್ತಾದ ರೋಗಿಗಳಿಗೆ ಅದರಲ್ಲೂ ಚಿಕ್ಕ ಕಂದಮ್ಮಗಳಿಗೆ ಆರ್ಥಿಕ ನೆರವಿಗಾಗಿ ಹಮ್ಮಿಕೊಂಡ ಕಾರ್ಯಕ್ರಮ . ಕಳೆದ ಬಾರಿ ಇದರ ಬಗ್ಗೆ ಬಂದಂತಹ 1.58 ಲಕ್ಷ ರೂ . ಗಳನ್ನು ಕಿದ್ವಾಯ್ ಕಂದಮ್ಮಗಳಿಗೆ , ಬಡ ಕ್ಯಾನ್ಸರ್ ರೋಗಿಗಳಿಗೆ ಸೇವಾರ್ಥವಾಗಿ ಈ ಸಂಸ್ಥೆಯಿಂದ ಕೊಟ್ಟಿದೆ . “ವಿಶ್ವ ಕ್ಯಾನ್ಸರ್ ದಿನ” ಫೆಬ್ರವರಿ 4 , 2020 ( ಭಾನುವಾರ ) ಎಂದು ಘೋಷಿಸಲಾಗಿದೆ .

ಆದರೆ ನಾವು ಹಮ್ಮಿಕೊಂಡ ಕಾರ್ಯಕ್ರಮ ಫಬ್ರವರಿ 9 ರಂದು ಕಬ್ಬನ್ ಪಾರ್ಕ್ ನಲ್ಲಿ .

ಜಿನೇವಾ ಸೈಡರ್ ಲ್ಯಾಂಡ್ ಲಾಂಛನದಡಿ ಘೋಷಿಸಲಾದ ನಾಣ್ಣುಡಿ ‘ ನಾನು ಮತ್ತು ನಾಳೆ ನನ್ನದು ‘ ಎಂಬ ಘೋಷಣೆ A world cancer day ಹುಟ್ಟಿಕೊಂಡಿತು . ಇದೊಂದು ಸದವಕಾಶದ ದಿನ . ಎಲ್ಲರೂ ಒಕ್ಕೊರಲಿನಿಂದ ಒಂದೇ ಬಾಂಧತ್ವ ಮತ್ತು ಭ್ರಾತೃತ್ವದೊಂದಿಗೆ ಹಮ್ಮಿಕೊಂಡ ರ್ಯಾಲಿ . ಆದ್ದರಿಂದ ಇದೊಂದು ಉತ್ತೇಜನಾತ್ಮಕ ಮತ್ತು ಸ್ಫೂರ್ತಿದಾಯಕ ಕ್ರಿಯೆ ಆಗಿರುವುದರಿಂದ ಎಲ್ಲರಿಗೂ ಸಹ ಅನ್ಯೂನ್ಯತೆಯೊಂದಿಗೆ ಆಮಂತ್ರಣವನ್ನು ನೀಡಲಾಗುತ್ತಿದೆ .

ಇದೊಂದು ಕ್ರಿಯಾಶೀಲಾತ್ಮಕ ತತ್ವವನ್ನು ಹೊಂದಿದ ಸಂಸ್ಥೆಯಾಗಿದೆ . ಈಗಾಗಲೇ ಚಿರಪರಿಚಿತವಾದ ವಿಶ್ವವಿಖ್ಯಾತ ಯುಐಸಿಸಿ ( ಯೂನಿಯನ್ ಫಾರ್ ಇಂಟರ್ ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ , ಜಿನೇವಾ, ಸ್ವಿಡ್ಜರ್ಲ್ಯಾಂಡ್ ) ಇದೊಂದು ಸಂಯುಕ್ತ ಸಂಸ್ಥಾಪಕ ಮತ್ತು ವಿಶ್ವವಿಖ್ಯಾತ ಕ್ಯಾನ್ಸರ್ ನ್ನು ತಡೆಗಟ್ಟುವ ಹಾಗೂ ಹುಟ್ಟಿನಲ್ಲೇ ಚಿವುಟಿ ಹಾಕುವಂತಹ ಗುರಿಯೊಂದಿಗೆ ನಡೆದುಬಂದ ಸಂಸ್ಥೆ . ಈ ಕಾರಣದಿಂದ ಸಮಾಜದ ಎಲ್ಲ ಬಾಂಧವರನ್ನು ಸೇರಿಸಿಕೊಂಡು ಕ್ಯಾನ್ಸರ್ ರೋಗಿಗಳಿಗಾಗಿ ಹಮ್ಮಿಕೊಂಡ ನಡಿಗೆಯಾಗಿದೆ . ಈ ನಡಿಗೆಯೊಂದಿಗೆ ಆರ್ಥಿಕ ಸಹಾಯವನ್ನು ಕ್ಯಾನ್ಸರ್ ಮಕ್ಕಳಿಗೋಸ್ಕರ ಸಮಾಜಮುಖಿ ಸಮಾಜ ಬಾಂಧವರಿಂದ ತೆಗೆದುಕೊಂಡು ಸದ್ವಿನಿಯೋಗ ಕಾರ್ಯಕ್ರಮವಾಗಿ ಬಳಸಲಾಗುತ್ತಿದೆ .

ಎಲ್ಲರಲ್ಲೂ ಕೋರಿಕೆ ಒಂದೇ ಮನಸ್ಸಿನಿಂದ ತಾವು ನೀಡುವಂತಹ ದೇಣಿಗೆ ಸದ್ವಿನಿಯೋಗವಾಗಿ ಚಿಕ್ಕಮಕ್ಕಳು ರೋಗ ನಿವಾರಿಸಿಕೊಂಡು ನಕ್ಕುನಲಿಯುವಂತೆ ಮಾಡಿ ಜೀವನದ ದೀಪವನ್ನು ಕಾಣಲು ಸ್ಫೂರ್ತಿದಾಯಕವಾಗಿದೆ . ಕಳೆದ ವರ್ಷದ ಸಮೀಕ್ಷೆಯಂತ 9 . 6 ಮಿಲಿಯನ್ ಕ್ಯಾನ್ಸರ್ ರೋಗಿಗಳು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ . ಇದನ್ನು ವಿಶ್ವ ಕ್ಯಾನ್ಸರ್ ಕಾಂಗ್ರೆಸ್ ಸಂಯುಕ್ತಾಶ್ರಯದಲ್ಲಿ ಘೋಷಿಸಲಾಗಿತ್ತು . ತದಕಾರಣ ಈ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ .

ಈ ಕಾರ್ಯಕ್ರಮಕ್ಕೆ ಆರ್ಥಿಕ ಸಹಾಯವನ್ನು ಯಾವ ನೋಂದಣಿ ಶುಲ್ಕವನ್ನು ತೆಗೆದುಕೊಳ್ಳದೇ ಜೈನ್ ಬಾಂಧವರಾದ ಅಧ್ಯಕ್ಷರಾದ ಶಂಕರ್ ರವರು ಮತ್ತು ಸೀನಿಯರ್ ವೈಸ್ ಪ್ರೆಸಿಡೆಂಟ್ ಚಂಪಾಲಾಲ್ ಜೈನ್ ರವರು ನಮ್ಮ ಸಂಸ್ಥೆಯ ಇತರ ಜನರೊಂದಿಗೆ ಕೈಜೋಡಿಸಿ ಯಾವುದೇ ಹಣ ಸೌಲಭ್ಯವನ್ನು ತೆಗೆದುಕೊಳ್ಳದೇ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ . ಈ ವಿಶ್ವ ಕ್ಯಾನ್ಸರ್ ದಿನವನ್ನು ಪ್ರತಿಷ್ಠಿತ ಕಿದ್ವಾಯ್ ಕ್ಯಾನ್ಸರ್‌ ಸಂಸ್ಥೆಗೆ ಮತ್ತು ಇತರ ಕ್ಯಾನ್ಸರ್ ರೋಗಿಗಳಿಗೆ ಆರ್ಥಿಕ ಸೌಲಭ್ಯವನ್ನು ನೀಡುವುದು ನಮ್ಮ ಹೆಮ್ಮೆಯ ವಿಷಯವಾಗಿದ , ಈ ಒಂದು ಕಾರ್ಯಕ್ರಮ ಇತರ ದಿಗ್ಗಜರು . ವ್ಯಾಪಾರೋದ್ಯಮಿಗಳಿಗಾಗಲಿ , ಶಾಲಾ ಕಾಲೇಜುಗಳಿಗಾಗಲಿ , ಯಾವುದೇ ವ್ಯವಸ್ಥಿತ ಸಂಸ್ಥೆಗಳಿಗಾಗಲಿ ಇದೊಂದು ಸದವಕಾಶವಾಗಿರುತ್ತದೆ . ಇಂತಹ ಒಂದು ಕಾರುಣ್ಯಕರ ಸನ್ನಿವೇಶಕ್ಕೆ ಮಕ್ಕಳು ಸೇರಿದಂತೆ ಸುಮಾರು 3 , 000 ಜನರು ಬರುವ ಸಾಧ್ಯತೆಯಿದೆ .

ಇದೊಂದು ವಿಶ್ವ ಕ್ಯಾನ್ಸರ್ ದಿನಕ್ಕೆ ತೋರಿಸುವ ಗೌರವಾನ್ವಿತ ಚಿಹ್ನೆಯಾಗಿದೆ , ಮತ್ತು ಭಾಗವಹಿಸಿದವರಿಗೆ ಟಿ – ಶರ್ಟ್ ಗಳು , ಗೋಲ್ ಮಡಲ್ ಗಳು , ಸರ್ಟಿಫಿಕೇಟ್ ಗಳು ಜಿನೇವಾ ಸ್ವಿಡ್ಡರ್ ಲ್ಯಾಂಡ್ ನಾಮಫಲಕದೊಂದಿಗೆ ವಿತರಿಸಲಾಗುವುದು , ಈ ಸಂದರ್ಭದಲ್ಲಿ ಭಾಗವಹಿಸಲು ನಾವು ಎಲ್ಲರನ್ನು ಧನ್ಯತಾ ಭಾವನೆಯಿಂದ ವಿನಂತಿಸಿಕೊಳ್ಳುತ್ತೇವ .

ಎ . ಜಯರಾಜ್

ಅಧ್ಯಕ್ಷರು

ಡಾ . ಪ್ರಮೋದ್

ಉಪಾಧ್ಯಕ್ಷರು

ಕಿದ್ವಾಯ್ ವೈದ್ಯಕೀಯ ಅಧೀಕ್ಷಕರು

ಶಂಕರ್ ತಾಮ್ರೆ

ಉಪಾಧ್ಯಕ್ಷರು

ಚಂಪಾಲಾಲ್ ಜೈನ್

ಹಿರಿಯ ಉಪಾಧ್ಯಕ್ಷರು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.