ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕ / ನಿರ್ವಾಹಕರಿಗೆ ಕಿದ್ವಾಯಿ ಸ್ಮಾರಕ ಗ್ರಂಥಿ  ಸಂಸ್ಥೆಯಿಂದ ( Oral Cancer ) ಬಾಯಿ ಮತ್ತು ಗಂಟಲು ಕ್ಯಾನ್ಸರ್ ತಪಾಸಣಾ ಕಾರ್ಯಕ್ರಮ

ನಿಗಮದ ಚಾಲಕ / ನಿರ್ವಾಹಕರಿಗೆ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಿಂದ ( Oral Cancer ) ಬಾಯಿ ಮತ್ತು ಗಂಟಲು ಕ್ಯಾನ್ಸರ್ ತಪಾಸಣಾ ಕಾರ್ಯಕ್ರಮ .

ದಿನಾಂಕ 06 / 01 / 2020 ರಂದು ಕೆಎಸ್‌ಆರ್‌ಟಿಸಿ ಕೇಂದ್ರ ಕಛೇರಿಯಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಿಂದ . ನಿಗಮದ 17 ವಿಭಾಗಗಳ ಸುಮಾರು 150 ಚಾಲಕ / ನಿರ್ವಾಹಕರಿಗೆ ( Oral Cancer ) ಬಾಯಿ ಮತ್ತು ಗಂಟಲು ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . ಸದರಿ ಕಾರ್ಯಕ್ರಮವನ್ನು ಶ್ರೀ . ಶಿವಯೋಗಿ . ಸಿ . ಕಳಸದ , ಭಾ . ಆಸೇ , ವ್ಯವಸ್ಥಾಪಕ ನಿರ್ದೇಶಕರು ಕೆಎಸ್‌ಆರ್‌ಟಿಸಿ ರವರು ಉದ್ಘಾಟಿಸಿದರು . ವ್ಯವಸ್ಥಾಪಕ ನಿರ್ದೇಶಕರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ , ನಿಗಮದ ಸಿಬ್ಬಂದಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಂಸ್ಥೆಯ ಅಡಿಪಾಯವಾಗಿರುತ್ತದೆ . ಸಿಬ್ಬಂದಿಗಳು ಆರೋಗ್ಯವಾಗಿದ್ದಲ್ಲ . ಇನ್ನು ಹೆಚ್ಚಿನ ದಕ್ಷತೆಯಿಂದ ಕೆಲಸ ನಿರ್ವಹಿಸಬಹುದು . ಸಿಬ್ಬಂದಿಗಳ ಆರೋಗ್ಯ ಅವರ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ . ಚಾಲಕ ನಿರ್ವಾಹಕರು ತಮ್ಮ ಹೆಚ್ಚಿನ ಸಮಯವನ್ನು ಮಾರ್ಗಗಳಲ್ಲಿ ಕರ್ತವ್ಯ ನಿರ್ವಹಿಸಲು ತೊಡಗಿಸಿಕೊಲುವುದರಿಂದ ತಮ್ಮಗಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ವಹಿಸುವುದಿಲ್ಲ . ಸಿಬ್ಬಂದಿಗಳು ಗುಟ್ಟ್ಕಾ , ತಂಬಾಕು ಸೇವನೆಯನ್ನು ಬಿಡಬೇಕು . ಆರೋಗ್ಯದ ಕಡೆ ಗಮನವಹಿಸಬೇಕು . ಆದ್ದರಿಂದ ನಿಗಮವು ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಿ , ಸಿಬ್ಬಂದಿಗಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಹಾಗೂ ಮುಂಜಾಗ್ರತೆ ಮೂಡಿಸುವ ಕಾರ್ಯಕ್ರಮವನ್ನು ನಿರಂತರವಾಗಿ ಮಾಡುತ್ತಿದೆ . ಹೃದಯ , ಕಣ್ಣು , ಹಲವು ಮಾದರಿಯ ಕ್ಯಾನ್ಸರ್ , stress management , ನಿವೃತ್ತಿ ಪೂರ್ವ ಕಾರ್ಯಾಗಾರಗಳನ್ನು ಅಧಿಕ ಸಂಖ್ಯೆಯಲ್ಲಿ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ . ಇಂದಿನ ಈ ಶಿಖರಕ್ಕೆ ಹಾಜರಾಗಿರುವ ಸಿಬ್ಬಂದಿಗಳು ತಮ್ಮ ಸಹೋದ್ಯೋಗಿಗಳಿಗೆ ಕೂಡ ಈ ಬಗ್ಗೆ ತಿಳಿಸಿ ಜಾಗೃತಿ ಮೂಡಿಸುವುದು ಅವಶ್ಯಕವಾಗಿರುತ್ತದೆ . ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯವರು ನಿಗಮದ ಪ್ರತಿಯೊಂದು ಕಾರ್ಯಕ್ರಮಕ್ಕೂ ಸೂಕ್ತ ರೀತಿ ಸ್ಪಂದಿಸುತ್ತಾ ನೆರವು ನೀಡುತ್ತಿದ್ದು , ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು . ಆರೋಗ್ಯಕರ ಸಿಬ್ಬಂದಿ – ಆರೋಗ್ಯಕರ ಸಂಸ್ಥೆಯಾಗಿ ರೂಪುಗೊಳ್ಳಬೇಕೆಂಬುದು ನಮ್ಮ ಆಶಯ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದರು .

ಈ ಸಂದರ್ಭದಲ್ಲಿ ಶ್ರೀಮತಿ ಕವಿತಾ ಎಸ್ . ಮನ್ನಿಕೇರಿ ಭಾ . ಆಸೇ , ನಿರ್ದೇಶಕರು ( ಸಿಬ್ಬಂದಿ & ಪರಿಸರ ) . ಕೆಎಸ್‌ಆರ್‌ಟಿಸಿ , ಡಾ ಚವ್ಹಾಣ್ , ಪ್ರೊಪೆಸರ್ , ಮುಖ್ಯಸ್ಥರು , Oral Cancer , ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ , ಶ್ರೀ . ವಿಜಯಕುಮಾರ್ ರೈ , ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ , ಶ್ರೀ . ಪ್ರಭಾಕರ ರೆಡ್ಡಿ , ಮುಖ್ಯ ಸಂಚಾರ ವ್ಯವಸ್ಥಾಪಕರು ( ಕಾ ) , ಡಾ . ರಾಮಮೂರ್ತಿ ಕೆ . ಮುಖ್ಯ ಯಾಂತ್ರಿಕ ಅಭಿಯಂತರರು ( ಸಿ ) , ಶ್ರೀ .ಲಿಂಗರಾಜು ಜಿ . ಮುಖ್ಯ ಭದ್ರತಾ ಜಾಗೃತಾಧಿಕಾರಿಗಳು ಉಪಸ್ಥಿತರಿದ್ದರು .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.