“ವಿಶ್ವ ಸ್ಥಾನಿಕ ಬ್ರಾಹ್ಮಣ ಸಮಾವೇಶ”2020. ಜನವರಿ 11 , 12 ರಂದು ಬೆಂಗಳೂರಿನ ಕೊಡಿಗೆಹಳ್ಳಿಯ ಜ್ಞಾನಶಕ್ತಿ ಮಂಟಪದಲ್ಲಿ ನಡೆಯಲಿದೆ

ಸ್ಥಾನಿಕ ಬ್ರಾಹ್ಮಣ ಮಹಾಮಂಡಲ ( ರಿ . ) , ಮಂಗಳೂರು ಆಯೋಜನೆಯ ವಿಶ್ವ ಸ್ಥಾನಿಕ ಬ್ರಾಹ್ಮಣ ಸಮಾವೇಶ ಜನವರಿ 11 , 12 ರಂದು ಬೆಂಗಳೂರಿನ ಕೊಡಿಗೆಹಳ್ಳಿಯ ಜ್ಞಾನಶಕ್ತಿ ಮಂಟಪದಲ್ಲಿ ನಡೆಯಲಿದೆ . ಈ ಕಾರ್ಯಕ್ರಮಕ್ಕೆ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ . ಎಸ್ ಯಡಿಯೂರಪ್ಪನವರು , ಹೆಣ್ಣೂರು ಮಾಧವಾಶ್ರಮ ಮಠದ ಸ್ವಾಮೀಜಿ , ಹಾಗೂ ನಳೀನ್ ಕುಮಾರ್ ಕಟೀಲು , ದಿನೇಶ್ ಗುಂಡೂರಾವ್ , ತೇಜಸ್ವಿ ಸೂರ್ಯ , ರಮೇಶ್ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ . 2012 , 2014 , 2016ರಲ್ಲಿ ಸಮಾವೇಶವನ್ನು ಉಡುಪಿ , ಪಡುಬಿದ್ರಿ , ಮಂಗಳೂರಿನಲ್ಲಿ ನಡೆಸಿದ್ದು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ . ಸಾಮಾಜಿಕ ಸಂಸ್ಕಾರವನ್ನು ರೂಪಿಸುವ ಸನಾತನ ಹಿಂದೂ ಸಂಸ್ಕೃತಿಯ ಉತ್ತಾನಕ್ಕಾಗಿ ಧರ್ಮಬೋಧೆ , ಪಾಠ ಪ್ರವಚನ , ಹಿರಿಯರಿಂದ ಧಾರ್ಮಿಕ ಸಂದೇಶ , ವಿಚಾರ ಗೋಷ್ಠಿಗಳು , ಕಲಾಲೋಕದ ಅನಾವರಣ , ಜನೋಪಯೋಗಿ ಅನೇಕ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು , ಸಂಪನ್ಮೂಲ ವ್ಯಕ್ತಿಗಳ ಸಮಾಗಮ , ವಿಚಾರ ಧಾರೆಗಳ ಚಿಂತನ – ಮಂಥನ , ಹಿರಿಯ ಸಾಧಕರ ಸಂಮಾನ , ಚಿಗುರು ಪ್ರತಿಭೆಗಳಿಗೆ ಪುರಸ್ಕಾರ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಆಯೋಜನೆಯೇ ಈ ಸಮಾವೇಶದ ಮೂಲ ಉದ್ದೇಶ , ಸಾಮಾನ್ಯ ಎರಡು ದಿನಗಳಲ್ಲಿ 6 ಸಾವಿರಕ್ಕೂ ಹೆಚ್ಚಿನ ಸಮಾಜದ ಬಂಧುಗಳು ಸೇರಿ ಸಮ್ಮೇಳನ ಯಶಸ್ವಿಗೊಳ್ಳುವ ಭರವಸೆ ಇದೆ.

– ಎನ್ , ಕೆ ಜಗನ್ನಿವಾಸ ರಾವ್ , ಪುತ್ತೂರು – ಅಧ್ಯಕ್ಷರು

ಸ್ಥಾನಿಕ ಬ್ರಾಹ್ಮಣ ಮಹಾಮಂಡಲ

ಎಂ . ದೇವಾನಂದ ಭಟ್ , ಬೆಳುವಾಯಿ ಪ್ರಧಾನ ಕಾರ್ಯದರ್ಶಿ

ಸ್ಥಾನಿಕ ಬ್ರಾಹ್ಮಣ ಮಹಾಮಂಡಲ

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.