ಸಜ್ಜನ್‌ ರಾವ್ ವೃತ್ತದಲ್ಲಿ ಅವರೇಕಾಯಿ ಮೇಳ ಆರಂಭ . . . .

ಬೆಂಗಳೂರಿನ ಮಂದಿಗೆ ‘ ಶ್ರೀ ವಾಸವಿ ಕಾಂಡಿಮೆಂಟ್ಸ್ ಪರಿಚಯ ಇದ್ದೇ ಇರುತ್ತದೆ . ರುಚಿಕಟ್ಟು , ಅತ್ಯುತ್ತಮ ಗುಣಮಟ್ಟ ಮತ್ತು ತಾಜಾ ತಿಂಡಿ ತಿನಿಸುಗಳಿಗೇ ಹೆಸರು ವಾಸಿಯಾದ ವಾಸವಿ ಕಾಂಡಿಮೆಂಟ್ಸ್ ಕಳೆದ ಇಪ್ಪತ್ತು ವರ್ಷಗಳಿಂದ ವಿನೂತನವಾದ ಸಾಹಸ – ಪ್ರಯೋಗವನ್ನು ಮಾಡುತ್ತಾ ಅದರಲ್ಲಿ ಅಮೋಘ ಯಶಸ್ಸು ಕಂಡಿದೆ . ಅದೇನೆಂದರೆ ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನ ಸಜ್ಜನ್‌ ರಾವ್‌ ಸರ್ಕಲ್‌ನಲ್ಲಿ ಶ್ರೀ ವಾಸವಿ ಕಾಂಡಿಮೆಂಟ್‌ನ ವತಿಯಿಂದ ಅವರೇಕಾಯಿ ಮೇಳವನ್ನು ಆಯೋಜಿಸಲಾಗುತ್ತಿದೆ . ಇಲ್ಲಿ ಅವರೇಕಾಯಿಯಿಂದ ತಯಾರಾದ ಇಡ್ಲಿ , ದೋಸೆ , ಪಾಯಸ , ಚಕ್ಕುಲಿ , ನಿಪ್ಪಟ್ಟು , ಸಿಹಿ , ಖಾರಾ ಪದಾರ್ಥಗಳು ಸೇರಿದಂತೆ ಸುಮಾರು ನೂರು ಬಗೆಯ ತಿಂಡಿ , ತಿನಿಸುಗಳು , ರುಚಿಕಟ್ಟಾದ ಖಾದ್ಯಗಳು ಗ್ರಾಹಕರಿಗೆ ಲಭ್ಯವಾಗುತ್ತಿದೆ . ಹೀಗಾಗಿ ಬೆಂಗಳೂರಿನ ಬಹಳಷ್ಟು ಜನ ಈ ವಾರ್ಷಿಕ ಅವರೇಕಾಯಿ ಮೇಳಕ್ಕಾಗಿ ಕಾತರಿಸುವಂತಾಗಿದೆ . – ವರ್ಷ ಪ್ರತಿ ಅವರೇಕಾಯಿ ಮೇಳವನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡುಬರುತ್ತಿರುವ ವಾಸವಿ ಕಾಂಡಿಮೆಂಟ್‌ನ ಉದ್ದೇಶ ನಿಜಕ್ಕೂ ದೊಡ್ಡದು ಎಂಬುದು ಹಲವರ ಅಭಿಪ್ರಾಯ . ಅದೇನೆಂದರೆ ಮಾಗಡಿ ತಾಲೂಕಿನಲ್ಲಿ ರೈತರು ಬೆಳೆದ ಸುಮಾರು ಇಪ್ಪತ್ತು ಟನ್‌ಗಳಿಗೂ ಅಧಿಕವಾದ ಅವರೇಕಾಯಿಯನ್ನು ‘ ವಾಸವಿ ಕಾಂಡಿಮೆಂಟ್ಸ್ ‘ ನೇರವಾಗಿ ಖರೀದಿಸುತ್ತದೆ . ಇಲ್ಲಿ ಯಾವುದೇ ಮಧ್ಯವರ್ತಿಗಳ ಪ್ರವೇಶವಿಲ್ಲದೇ , ನೇರವಾಗಿ ಬೆಳೆಗಾರರ ಮನೆಬಾಗಿಲಿಗೇ ಹೋಗಿ ಅವರೇಕಾಯಿ ಖರೀದಿಸುವುದರಿಂದ ರೈತರಿಗೆ ಮಾರುಕಟ್ಟೆಯಲ್ಲಿ ಸಿಗುವ ಲಾಭಕ್ಕಿಂತ ಹೆಚ್ಚು ಮೊತ್ತ ಕೈಸೇರುತ್ತದೆ . ಇದರಿಂದ ಕಷ್ಟಪಟ್ಟು ಅವರೇಕಾಯಿ ಬೆಳೆದ ರೈತಬಾಂಧವರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಹೊಂದಿ ಸಂತೃಪ್ತರಾಗುತ್ತಿದ್ದಾರೆ . ವರ್ಷದಿಂದ ವರ್ಷಕ್ಕೆ ಅವರೇಕಾಯಿ ಖರೀದಿಯೂ ಹೆಚ್ಚಳವಾಗುತ್ತಲೇ ಇದೆ . ಈಬಾರಿ ಕೂಡಾ ಸಜ್ಜನ್‌ ರಾವ್ ವೃತ್ತದಲ್ಲಿ 17 . 01 . 2020 ರಿಂದ 26 . 01 . 2020ರವರೆಗೆ ಸಜ್ಜನ್‌ ರಾವ್ ಸರ್ಕಲ್ ನಲ್ಲಿರುವ ಶ್ರೀ ವಾಸವಿ ಕಾಂಡಿಮೆಂಟ್ಸ್ನಲ್ಲಿ ಏರ್ಪಡಿಸಲಾಗಿದೆ .

ಶ್ರೀಮತಿ ಗೀತಾ ಶಿವಕುಮಾರ್ ಮಾಲೀಕರು

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.