ಸಿ . ಪಿ . ಆರ್ . ಐ ವಜ್ರ ಮಹೋತ್ಸವ ಸಮಾರಂಭ

ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆ ( ಸಿ . ಪಿ . ಆರ್ . ಐ ) ಭಾರತದ ವಿದ್ಯುತ್ ಉದ್ಯಮದ ಅತಿ ಶ್ರೇಷ್ಠ ಅಂಗವಾಗಿದ್ದು , ಇದರ ಮುಖ್ಯ ಕಛೇರಿ ಬೆಂಗಳೂರಿನಲ್ಲಿದೆ . ಈ ಸಂಸ್ಥೆಯು ತನ್ನ ೬೦ ನೇ ಸ್ಥಾಪನಾ ವಜ್ರ ಮಹೋತ್ಸವ , ಜನವರಿ ೧೬ , ೨೦೨೦ ರಂದು ಬೆಂಗಳೂರಿನಲ್ಲಿ ಆಚರಿಸಲಾಯಿತು .

ಆಚರಣೆಯ ಅಂಗವಾಗಿ ಜವಾಹರ್ಲಾಲ್ ನೆಹರೂ ಸ್ಮರಣಾರ್ಥಕ ಉಪನ್ಯಾಸವನ್ನು ಪದ್ಮಶ್ರೀ ಪುರಸ್ಕೃತ , ನಿವೃತ್ತ ಪ್ರೊ . ಜಿ . ಡಿ . ಯಾದವ , ಇನ್ಸಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಾಜೆ ಮುಂಬಯಿ , ರವರಿಂದ ‘ ಜಾಗತಿಕ ಇಂಧನ ಸನ್ನಿವೇಶ ಮತ್ತು ಹೈಡೋಜನ್ ಆರ್ಥಿಕತೆ ‘ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಾಯಿತು . ಸಭೆಯಲ್ಲಿ ಉಪಸ್ಥಿತರಿದ್ದಂತಹ ಎಲ್ಲಾ ವೈಜ್ಞಾನಿಕ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ಜೊತೆಗೆ ಮೆಚ್ಚುಗೆಯೂ ವ್ಯಕ್ತಪಡಿಸಲಾಯಿತು . ಸಭೆಯನ್ನುದ್ದೇಷಿಸಿ ಮಾತನಾಡಿದ ಸಿ . ಪಿ . ಆರ್ . ಐ ನ ಮಹಾನಿರ್ದೇಶರಾದ ಶ್ರೀ ವಿ . ಎಸ್ . ನಂದಕುಮಾರ್ ರವರು , ದೇಶದಲ್ಲಿ ಬೆಳೆಯುತ್ತಿರುವ ವಿದ್ಯುತ್ ಕ್ಷೇತ್ರದ ಅಗತ್ಯ , ಬೇಳವಣಿಗೆ , ವಿದ್ಯುತ್ ಉಪಕರಣಗಳ ಗುಣಮಟ್ಟ ಮತ್ತು ತಯಾರಿಕೆ , ಇದರಲ್ಲಿ ಸಿ . ಪಿ . ಆರ್ . ಐ ನ ಪಾತ್ರದ ಬಗ್ಗೆ ಮಾತನಾಡಿದರು .

ಸಿ . ಪಿ . ಆರ್ . ಐ ದೇಶದ ವಿದ್ಯುತ್ ಉದ್ಯಮಕ್ಕೆ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಹೊಂದಲು ಮತ್ತು ಗುಣಮಟ್ಟ ಸುಧಾರಣೆಯಲ್ಲಿ ಒಂದೇ ನಿಟ್ಟಿನಲ್ಲಿ ಶ್ರಮಿಸುತ್ತಿದೆ .

ವಿದ್ಯುತ್ ಉಪಕರಣಗಳ ಪರೀಕ್ಷೆ ಮತ್ತು ಅವುಗಳ ಪ್ರಮಾಣೀಕರಣಕ್ಕಾಗಿ ಸ್ವತಂತ್ರ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುವುದು ಗಮನಾರ್ಹ ಸಂಗತಿ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.