ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನವದೆಹಲಿಯ ರಾಜಪಥ್‌ನಲ್ಲಿ ಅನುಭವ ಮಂಟಪ ಸಬ್ದಚಿತ್ರ : ಭರದಿಂದ ಸಾಗಿದ ಸಿದ್ಧತೆ

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನವದೆಹಲಿಯ ರಾಜಪಥ್‌ನಲ್ಲಿ ಅನುಭವ ಮಂಟಪ ಸಬ್ದಚಿತ್ರ : ಭರದಿಂದ ಸಾಗಿದ ಸಿದ್ಧತೆ

• ಈ ನಿಮಿತ್ತ ನವದೆಹಲಿಯ ರಕ್ಷಣಾ ಮಂತ್ರಾಲಯದ ರಾಷ್ಟ್ರೀಯ ರಂಗಶಾಲಾ ಆವರಣದಲ್ಲಿಂದ್ದು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಎಸ್ . ಎನ್ . ಸಿದ್ದರಾಮಪ್ಪ ಅವರು ಸ್ತಬ್ಧಚಿತ್ರದ ಬಗ್ಗೆ ವಿವರಣೆ ನೀಡಿದರು .

> 2020ರ ಜನವರಿ 26ರಂದು “ ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಇಲಾಖೆ “ ಅನುಭವ ಮಂಟಪ ” ವಿಷಯಾಧಾರಿತ ಸ್ತಬ್ದಚಿತ್ರದೊಂದಿಗೆ ಭಾಗವಹಿಸುತ್ತಿದ್ದು , ಸ್ತಬ್ದಚಿತ್ರದ ನಿರ್ಮಾಣಕಾರ್ಯ ಭರದಿಂದ ಸಾಗಿದೆ .

*ಜಾತಿ , ಮತ , ಲಿಂಗ ಮತ್ತು ಧರ್ಮ ಬೇಧಗಳ ಮೇಲಾಟದ ಸಂದರ್ಭದಲ್ಲಿ ನಲುಗಿದ ಸಮಾಜದ ಪರಿವರ್ತನೆಗಾಗಿ ಸಂತ ಬಸವೇಶ್ವರರು ಹನ್ನೆರಡನೇ ಶತಮಾನದಲ್ಲಿ ನಡೆಸಿದ ಕರ್ನಾಟಕದ ಸಾಮಾಜಿಕ ಕ್ರಾಂತಿಯ ಪ್ರತಿರೂಪ – ಅನುಭವ ಮಂಟಪ ”

* ಸ್ತಬ್ದಚಿತ್ರದ ಮುಂಭಾಗದ ಪೀಠದಲ್ಲಿ “ ಕಾಯಕವೇ ಕೈಲಾಸ ” ಪರಿಕಲ್ಪನೆಗೆ ರೂಪಕೊಟ್ಟ ಮಹಾ ಸಂತ ಬಸವೇಶ್ವರರ ಪ್ರತಿಕೃತಿ , ಅದರ ಅಕ್ಕಪಕ್ಕ ಕಾಯಕ ಕಲ್ಪನೆಯ ಅರ್ಥ ವಿಸ್ತರಿಸಿದ ಅನುಭಾವಿಗಳು ತಮ್ಮ ಕಾಯಕದಲ್ಲಿ ಮಗ್ನರಾದ ಶಿಲ್ಪಗಳು ಅನುಭವ ಮಂಟಪದ ಅರ್ಥ ವಿಸ್ತರಿಸಲು ಅದರ ಕೆಳಪೀಠದಲ್ಲಿ ಅಕ್ಕನಾಗಮ್ಮ ಶರಣೆ ಸತ್ಯಕ್ತ , ಅಂಬಿಗರ ಚೌಡಯ್ಯ , ಮೋಳಿಗೆ ಮಾರಯ್ಯ , ಕಲ್ಯಾಣಮ್ಮ , ಹರಳಯ್ಯ , ಕುಂಬಾರ ಗುಂಡಣ್ಣ , ಸಿದ್ದರಾಮೇಶ್ವರ , ಬಾಚೆ ಕಾಯಕದ ಬಸಪ್ಪ ಅವರ ಪ್ರತಿಕೃತಿಗಳು ಇವೆ .

*ಸ್ತಬ್ದಚಿತ್ರದೊಂದಿಗೆ ಸಾಣೇಹಳ್ಳಿ ಶಿವಸಂಚಾರ ನಾಟಕ ತಂಡದ 27 ಕಲಾವಿದರು ಭಾಗವಹಿಸುತ್ತಿದ್ದು , ಈ ಕಲಾವಿದರು ವಿವಿಧ ಶರಣರ ಪಾತ್ರ ಮತ್ತು ನೃತ್ಯ ಪ್ರದರ್ಶನ ನೀಡಲಿದ್ದಾರೆ .

* ಅದರ ಹಿಂಭಾಗದ ಪೀಠದಲ್ಲಿ ಅನುಭವ ಮಂಟಪದ ಕಲ್ಪನೆಯನ್ನು ಕಟ್ಟಲು ನಾಲ್ಕು ಕಂಬಗಳ ಮೇಲೆ ರೂಪಿಸಿದ ಮಂಟಪ , ಅದರೊಳಗೆ ಇತರ ಜ್ಞಾನಿಗಳ ನಡುವೆ ಶರಣೆ ಅಕ್ಕಮಹಾದೇವಿ ಹಾಗೂ ಅಲ್ಲಮರ ನಡುವೆ ನಡೆದ ಚರ್ಚೆಯ ಸನ್ನಿವೇಶ . ಮಂಟಪದ ಮೇಲ್ಬಾಗದ ಮೊಲೆಯ ಮೇಲೆ ಅನುಭವ ಮಂಟಪದ ಕಾಲ – ಸ್ಥಳದ ಅಕ್ಷರರೂಪ . ಕೆಳಭಾಗದಲ್ಲಿ ಆ ಕಾಲಘಟ್ಟದ ಜಾನಪದ ಕಲೆಗಳ ಅನಾವರಣ . ಜೊತೆಗೆ ಅನುಭವ ಮಂಟಪದ ಅನುಭವವನ್ನು ಮತ್ತಷ್ಟು ಹಿಗ್ಗಿಸುವ ಹಿನ್ನೆಲೆಯಲ್ಲಿ ಲಯಬದ್ದವಾಗಿ ಹರಿದು ಬರುವ ವಚನಗಾಯನ ಇದೆ .

*ಇಲಾಖೆ 2010 ರಿಂದ ಇಲ್ಲಿಯವರೆಗೆ ಅಂದರೆ ಕಳೆದ 11 ವರ್ಷಗಳಿಂದ ಸತತವಾಗಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸ್ತಬ್ದಚಿತ್ರದೊಂದಿಗೆ ಭಾಗವಹಿಸುತ್ತಿದೆ . ರಾಜ್ಯ ಸರ್ಕಾರ ಹಾಗೂ ಇಲಾಖೆಗೆ ಇದು ರಾಷ್ಟ್ರಮಟ್ಟದಲ್ಲಿ ಹೆಮ್ಮೆ ತರುವ ಸಂಗತಿಯಾಗಿದೆ .

*ಗಣರಾಜ್ಯೋತ್ಸವ ಪರೇಡ್‌ನಲ್ಲಿ ಇಲಾಖೆಗೆ ಈವರೆಗೆ 5 ಬಾರಿ ಪ್ರಶಸ್ತಿ ಗಳಿಸಿದ್ದು , ಒಂದು ಬಾರಿ ಪ್ರಥಮ , 2 ಬಾರಿ ದ್ವಿತೀಯ ಹಾಗೂ 2 ಬಾರಿ ತೃತೀಯ ಪ್ರಶಸ್ತಿ ತನ್ನದಾಗಿಸಿಕೊಂಡಿದೆ ಎಂದು ವಿವರಿಸಿದರು .

* ಪತ್ರಿಕಾಗೋಷ್ಠಿಯಲ್ಲಿ ಇಲಾಖೆಯ ಜಂಟಿ ನಿರ್ದೇಶಕರಾದ ಬಸವರಾಜ ಕಂಬಿ , ಸಹಾಯಕ ನಿರ್ದೇಶಕ ಡಾ . ಗಿರೀಶ್ ಎಲ್ . ಪಿ , ಸಬ್ದಚಿತ್ರದ ವಿನ್ಯಾಸಕ ಶಶಿಧರ ಅಡಪ ಭಾಗವಹಿಸಿದ್ದರು .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.