ಜನವರಿ 26 ಗಣರಾಜ್ಯೋತ್ಸವದ ಅಂಗವಾಗಿ ಸಂವಿಧಾನದ ಉಳಿವಿಗಾಗಿ ಪ್ರತಿಭಟನಾ ರಾಲಿ ಮತ್ತು ಜನಜಾಗೃತಿ ಅಂದೋಲನದ ಸಮಾವೇಶ

ಜನವರಿ 26 ಗಣರಾಜ್ಯೋತ್ಸವದ ಅಂಗವಾಗಿ ಸಂವಿಧಾನದ ಉಳಿವಿಗಾಗಿ ಪ್ರತಿಭಟನಾ ರಾಲಿ ಮತ್ತು ಜನಜಾಗೃತಿ ಅಂದೋಲನದ ಸಮಾವೇಶ ಜನವರಿ 26 . 2020 ಬೆಳಿಗ್ಗೆ 11 ಗಂಟೆಗೆ ಮೆರವಣಿಗೆ : ಬೆಂಗಳೂರು ನಗರ ರೈಲ್ವೆ ನಿಲ್ದಾಣದಿಂದ ಹೊರಟು ಬಹಿರಂಗ ಸಮಾವೇಶವನ್ನು : ಸ್ವಾತಂತ್ರ್ಯ ಉದ್ಯಾನವನ , ಬೆಂಗಳೂರು . ಬಾಬಾ ಸಾಹೇಬ್ ಅಂಬೇಡ್ಕರ್ ರವರು ಭಾರತ ಗಣರಾಜಕ್ಕೆ ಕೊಟ್ಟ ಸಂವಿಧಾನದ ಮೂಲ ಆಶಯಕ್ಕೆ ವಿರುದ್ದವಾಗಿ ರಾಷ್ಟ್ರೀಯ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಘಾಸಿ ಉಂಟುಮಾಡಿದೆ . ಮೊಟ್ಟ ಮೊದಲ ಬಾರಿಗೆ ಸಂವಿಧಾನದ ಮೂಲ ಪರಿಕಲ್ಪನೆಯನ್ನೇ ತಿರುಚುವ ಹುನ್ನಾರ ನಡೆದಿರುವಾಗ ಅದರ ವಿರುದ್ದ ದನಿಯೆತ್ತುವುದು ನಮ್ಮ ಕರ್ತವ್ಯವಾಗಿದೆ . ಸಂವಿಧಾನದ ಕರ್ತೃಗಳು ಧರ್ಮಾಧಾರಿತ , ಜಾತಿ ಆಧಾರಿತ ಪೌರತ್ವವನ್ನು ಒಪ್ಪಿರಲಿಲ್ಲ . ದೇಶದ ಎಲ್ಲರೂ ಸಮಾನರು ಎಂಬ ತತ್ವದ ಮೇಲೆ ಸಂವಿಧಾನ ನಿಂತಿದೆ . 1949 ರ ನವೆಂಬರ್ 26 ರಂದು ಸಂವಿಧಾನ ರಚನೆ ಪೂರ್ಣಗೊಂಡು ಬಹಿರಂಗಗೊಂಡ ನಂತರ ಅದನ್ನು ಮೊಟ್ಟಮೊದಲ ಬಾರಿಗೆ ವಿರೋಧಿಸಿದವರೇ ಇಂದು ದೇಶದಲ್ಲಿ ಆಳ್ವಿಕೆ ನಡೆಸುತ್ತಿದ್ದಾರೆ . ಅಂಬೇಡ್ಕರ್‌ರ ನೇತೃತ್ವದಲ್ಲಿ ಸಂವಿಧಾನದ ಅಂತಿಮ ಕರಡು ಹೊರಬಂದ ಕೂಡಲೇ ಆರೆಸ್ಸೆಸ್‌ನ ಮುಖವಾಣಿ ಆಗ್ನಯಸರ್‌ ಪತ್ರಿಕೆಯ ಸಂಪಾದಕೀಯದಲ್ಲಿ ಈ ಸಂವಿಧಾನ ಭಾರತೀಯವಾದುದ್ದಲ್ಲ . ದೇಶಕ್ಕೆ ಈ ರೀತಿಯ ಸಂವಿಧಾನದ ಅಗತ್ಯವಿಲ್ಲ . ಮನುಸೃತಿಯೇ ಈ ದೇಶಕ್ಕೆ ಸಂವಿಧಾನ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು . ಹುಟ್ಟಿನ ಆಧಾರದ ಮೇಲೆ ದೇಶದ ಪ್ರಜೆಗಳನ್ನು ವಿಭಾಗಿಸುವ ಮನುಸ ತಿಯ ನೀತಿಯನ್ನು ಈಗ ಜಾರಿಗೆ ತರಲು ಬಿ . ಜೆ . ಪಿ . ಯ ಮೋದಿ – ಅಮಿತ್ ಶಾ ಅವರ ಸರ್ಕಾರ ಹೊರಟಿದೆ . ಮುಂದಿನ ಗುರಿ ಮೀಸಲಾತಿಯೇ ಆಗಿರುತ್ತದೆ : ಹೀಗೆಯೇ ಮುಂದುವರಿದರೆ , ಬೇರೆ ಬೇರೆ ಕಾರಣಗಳನ್ನು ಹೇಳುತ್ತಾ ಶೋಷಿತ ಸಮುದಾಯಗಳಿಗೆ ಕೊಟ್ಟಿರುವ ಮೀಸಲಾತಿಯನ್ನು ತೆಗೆದು ಹಾಕುತ್ತಾರೆ . ಮೀಸಲಾತಿ ಎಂಬುದು ಶತಮಾನಗಳಿಂದ ವಂಚನೆಗೊಳಪಟ್ಟಿರುವ ಸಮುದಾಯಗಳಿಗೆ ನೀಡುವ ಪ್ರಾತಿನಿಧ್ಯ ಎಂಬುದನ್ನು ಮರೆಮಾಚಲಾಗಿದೆ . ಇದರ ಕುರಿತು ಮೇಲಾತಿಗಳಲ್ಲಿ ಅಪಾರ ಪ್ರಮಾಣದ ಅಸಹನೆಯನ್ನು ಬಿತ್ತಿ ಎತ್ತಿ ಕಟ್ಟುವ ಮೂಲಕ ವ್ಯವಸ್ಥಿತ ಸಂಚು ನಡೆದಿದೆ . ಈಗಾಗಲೇ ಖಾಸಗೀಕರಣದ ಮೂಲಕ ಮೀಸಲಾತಿಗೆ ಅರ್ಥವಿಲ್ಲದಂತೆ ಮಾಡಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ . ಈ ಹಿನ್ನಲೆಯಲ್ಲಿಯೇ ಬಿಜೆಪಿಯ ಅನಂತ್ ಕುಮಾರ್ ಹೆಗಡೆ * ಸಂವಿಧಾನ ಬದಲಿಸಲೆಂದೇ ನಾವು ಬಂದಿರುವುದು ‘ ಎಂಬ ಮಾತುಗಳನ್ನು ಆಡಿದ್ದು .

ಎರಡನೇ ದರ್ಜೆಯ ಪೌರತ್ವವನ್ನು ನಾವು ಒಪ್ಪುವುದಿಲ್ಲ . ಆರ . ಎಸ್ . ಎಸ್ . ಸಂಘ – ಪರಿವಾರ ಮತ್ತು ಬಿ . ಜೆ . ಪಿ . ಲಂದ ದೇಶದ ಆದಿವಾಸಿ , ಅಲೆಮಾರಿ , ದಲಿತ ಹಾಗೂ ಹಿಂದುಳಿದ ಸಮುದಾಯಗಳ ವಿರುದ್ದ ದೊಡ್ಡ ಹುನ್ನಾರ ನಡೆದ ರಾಷ್ಟ್ರೀಯ ಪೌರತ್ನ ಕಾಯ . ಪೌರತ್ವ ನೋಂದಣಿ ಪ್ರಕ್ರಿಯೆಯ ಮೂಲಕ ದೇಶದ ಮೂಲ ನಿವಾಸಿಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವ ಸಂಚು ಮಾಡಲಾಗಿದೆ . ತಕ್ಷಣದಲ್ಲಿ ಅಂತರ ಸಮಸ್ಯೆ ಏನಿಲ್ಲ ಎಂದು ನಂಬಿಸುವ ಸುಳ್ಳುಗಳನ್ನು ಹೇಳಲಾಗುತ್ತಿದೆ . ಈಗ ನಾವು ಎಚ್ಚೆತ್ತು ಕೊಳ್ಳದಿದ್ದರೆ ಕೋಟ್ಯಾಂತರ ಬಡವರನ್ನು ಪ್ರತಿನಿತ್ಯದ ಪರದಾಟವಾಗುವುದರಲ್ಲಿ ಸಂಶಯವೇ ಇಲ್ಲ . ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ರತಿಮ ಪಾತ್ರ ವಹಿಸಿದ ಮುಸ್ಲಿಮರು ದೇಶ ವಿಭಜನೆಯ ಸಂದರ್ಭದಲ್ಲಿ ತಾವೇ ಆಯ್ಕೆ ಮಾಡಿಕೊಂಡು ಭಾರತದಲ್ಲಿ ಉಳಿದರು . ಈ ಮೂಲಕ ಜಿನ್ನಾ ಹಾಗೂ ಸಾವರ್ಕ‌್ರ ಪ್ರತಿಪಾದಿಸುವ “ ಎರಡು ರಾಷ್ಟ್ರಗಳ ಸಿದ್ದಾಂತವನ್ನು ತಿರಸ್ಕರಿಸಿದರು . ಆದರೆ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟು ಅವರ ಪರವಾಗಿ ಕೆಲಸ ಮಾಡಿದ ಸಾವರ್ಕರ್ ವಾರಸುದಾರರು ಇಂದು ಮುಸ್ಲಿಮರನ್ನು ಮತ್ತು ಆದಿವಾಸಿ , ಅಲೆಮಾರಿ ದಲಿತ ಹಿಂದುಳಿದ ತಳ ಸಮುದಾಯಗಳ ಅಕ್ರಮ ವಲಸಿಗಲೆಂಬಂತೆ ಬಿಂಬಿಸಲು ಹೊರಟಿದ್ದಾರೆ . ಎರಡನೇ ದರ್ಜೆಯ ಪೌರತ್ವ ಮಾಡಿಬಿಟ್ಟರೆ ಮುಂದಿನ ದಿನಗಳಲ್ಲಿ ನಮಗೆ ಮತದಾನದ ಹಕ್ಕು ಇಲ್ಲದಂತೆ ಮಾಡುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ , ಏಕೆಂದರೆ ಬಾಬಾ ಸಾಹೇಬರ ಸಂವಿಧಾನದಲ್ಲಿ ಪ್ರತಿಯೊಬ್ಬ ವಯಸ್ಕರಿಗೆ ಮತದಾನದ ಹಕ್ಕು ಬರುವ ಮುಂಚೆ , ಪದವೀಧರರು ಮತ್ತು ಜಮೀಣಾರಲಗೆ ಮಾತ್ರ ಮತದಾನದ ಹಕ್ಕು ಇತ್ತು . ಎಲ್ಲರಿಗೂ ಮತದಾನದ ಹಕ್ಕು ನೀಡುವುದನ್ನು ಮೋದಿ – ಅಮಿತ್ ಶಾ ರವರ ಪರಂಪರೆಯವರು ಅಂದು ವಿರೋಧಿಸಿದ್ದುದ್ದನ್ನು ನಾವು ಮರೆಯುವಂತಿಲ್ಲ . ದುರ್ಬಲ ಸಮುದಾಯಗಳ ಪಾಲಿನ ಮರಣ ಶಾಸನವೇ ಎನ್ ಆರ್ ಸಿ , ಸಿಎ , ಎಸ್ ಪಿಆರ್ , ಮೋದಿ ಅಮಿತ್ ಶಾ ಪ್ರಯೋಗಿಸುತ್ತಿರುವ ಎಲ್ಲಕ್ಕಿಂತ ದೊಡ್ಡ ಅಗ್ಯ ರಾಷ್ಟ್ರೀಯ ಪೌರತ್ವ ನೋಂದಣಿಯದ್ದಾಗಿದೆ . ಈ ದೇಶದ ಮೂಲ ನಿವಾಸಿಗಳು , ದಶವನ್ನು ಕಟ್ಟಲು ಜೀವಂತವಾಗಿಡಲು ಶ್ರಮಿಸಿರುವವರೂ ಸೇರಿದಂತೆ ಎಲ್ಲರೂ ಈ ದೇಶದವರು ಎಂದು ಸಾಬೀತು ಪಡಿಸಬೇಕಾದ ಅನಿವಾರ್ಯತೆಯನ್ನು ಅದು ತರಲಿದೆ . 1987 ರ ನಂತರ ಹುಟ್ಟಿದವರೆಲ್ಲರೂ ಅವರ ತಂದೆ – ತಾಯಂದಿರು ಇದೇವರೂ ದೇಶದಲ್ಲಿ ಹುಟ್ಟಿದವರು ಎಂದು ಸಾಬೀತುಪಡಿಸುವ ದಾಖಲೆಗಳನ್ನು ನೀಡಬೇಕಾಗುತ್ತದೆ . ಅದಕ್ಕೆ ಮುಂಚೆ ಹುಟ್ಟಿದವರು ತಾವು ಇಲ್ಲೇ ಹುಟ್ಟಿದ್ದಕ್ಕೆ ಸಾಕ್ಷಿಗಳನ್ನು ನೀಡಬೇಕಂತೆ . ಎಲ್ಲರಿಗೂ ತೊಂದರೆಯಾಗುವುದಿಲ್ಲ : ಯಾರನ್ನು ಸಂಶಯಾಸ್ಪದ ಪೌರರು ಎಂದು ಅಧಿಕಾರಿಗಳು ಗುರುತಿಸುತ್ತಾರೋ ಅವರಷ್ಟೇ ದಾಖಲೆ ನೀಡಬೇಕು ಎಂದು ಹೇಳಲಾಗುತ್ತಿದೆ . ಆದರೆ ಯಾರದೇ ಪೌರತ್ವದ ಮೇಲೆ ಯಾರಾದರೂ ದೂರು ನೀಡಿದರೆ ಮೊದಲು ಪಾಸಾಗಿದ್ದವರೂ ಸಂಶಯಾಸದ ಪೌರರಾಗುತ್ತಾರೆ . ಅದಕ್ಕೆ ನಿಯಮಗಳಲ್ಲಿ ಅವಕಾಶವಿದೆ . ಎಲ್ಲಿಯವರೆಗೆ ಸಾಬೀತುಗುವುದಿಲ್ಲವೋ ಅಲ್ಲಿಯವರೆಗೆ ಓಟೆನೆ ಹಕ್ಕು ಸೇರಿದಂತೆ ನನ್ನ ಎಲ್ಲಾ ಹಕ್ಕುಗಳೂ ರದ್ದಾಗುತ್ತವೆ . 40 ವರ್ಷಗಳ ಹಿಂದೆ ಬಹುತೇಕ ಭೂಮಿ ರಹಿತರೇ ಆಗಿದ್ದ ನಮ್ಮ ಈ ತಳ ಸಮುದಾಯಗಳಲ್ಲಿ ಯಾವ ದಾಖಲೆ ಪತ್ರ ಇರಲು ಸಾಧ್ಯ ? ” ದೇಶವನ್ನು ಕಟ್ಟಿರುವ , ಜೀವಂತವಾಗಿಟ್ಟಿರುವ ನಾವು ನಿಮಗೆ ಯಾವುದೇ ದಾಖಲೆ ಯಾಕೆ ಕೊಡಬೇಕು ? ಅಸ್ಸಾಂ ಬಿಟ್ಟರೆ ಇಡೀ ದೇಶದಲ್ಲಿ ಇರಬಹುದಾದ ಕೆಲವು ಸಾವಿರ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಸರ್ಕಾರಕ್ಕೆ ಸಾಧ್ಯವಿಲ್ಲವೇ ? ಅದಕ್ಕಾಗಿ 130 ಕೋಟಿ ಜನರಿಗೆ ಇನ್ನಿಲ್ಲದ ಸಂಕಷ್ಟ ಯಾಕೆ ನೀಡಬೇಕು . ? ಗಣರಾಜ್ಯೋತ್ಸವದ ದಿನ ಬೆಂಗಳೂರಿನಲ್ಲಿ ಸಮಾವೇಶಗೊಳೋಣ : ಜನವರಿ 26 , ಗಣರಾಜ್ಯೋತ್ಸವದ ದಿನ 1950 ರ ದಿನದಂದೇ ಸಂವಿಧಾನವು ಅಧಿಕೃತವಾಗಿ ದೇಶದಾದ್ಯಂತ ಶಾದಿಗೊಂಡಿದ್ದು ರಾಗಿ , 2020 ನೇ ಜನವರಿ 26 ರಂದು ನಾವು ಕರ್ನಾಟಕದ ಎಲ್ಲಾ ಶೃತಿ . ತ ತಳ ಸಮುದಾಯಗಳು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಒಂದಾಗಿ ಸೇರೂ ಸಂವಿಧಾನ ವಿರೋಧಿಯಾದ ಎನ್ . ಪಿ . ಆರ್ , ಎನ್ ಆರ್ . ಸಿ ಮತ್ತು ಸಿ . ಎ . ವಿ ಯನ್ನು ತಿರಸ್ಕರಿಸೋಣ , ಅಷ್ಟೇ ಅಲ್ಲ 2020 ನೇ ಜನವರಿ 26 ರಿಂದ ಮುಂದಿನ ಏಪ್ರಿಲ್ 14ರ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿವರೆಗೆ ಎಲ್ಲಾ ಕಾಡು , ಊರು – ಕೇರಿ , ಹಳ್ಳಿ ಹಳ್ಳಿಗಳಿಗೂ ಹೋಗಿ ಜನ ವಿರೋಧಿಯಾದ ಈ ಪೌರತ್ವ ತಿದ್ದುಪಡಿ ಕಾಯ್ದೆಯ ತಂದೊಡ್ಡುವ ಸಮಸ್ಯೆ ಹಾಗೂ ಸಂಕಷ್ಟಗಳ ಕುರಿತು ಜನರನ್ನು ಜಾಗೃತಿಗೊಳಿಸೋಣ .

– ಮಾವಳ್ಳಿ ಶಂಕರ್ -ರಾಜ್ಯ ಸಂಚಾಲಕರು, ದ . ಸಂ . ಸ ಲಕ್ಷ್ಮೀನಾರಾಯಣ ನಾಗವಾರ- ರಾಜ್ಯ ಸಂಚಾಲಕರು, ಕ . ದ . ಸಂ . ಸ .

ಅಣ್ಣಯ್ಯ – ರಾಜ್ಯ ಸಂಯೋಜಕರು ,

ಕೆ . ಎಂ . ರಾಮಚಂದ್ರಪ್ಪ-ಅಧ್ಯಕ್ಷರು

City Today News

(citytoday.media)

9341997936

ರಾಜ , ಸಂಚಾಲಕರು ದ . ಸಂ . ಸ ಅಂಬೇಡ್ಕರ್‌ ವಾದ ಕ . ದ . ಸಂ . ಸ . ರ್ವಿಸ್ K . Ed , K – 4 ( ಕೆ . ಎಂ . ರಾಮಚಂದ್ರಪ್ಪ ) ಬಿ . ಎ , ಬಸವರಾಜ್ ನಾಯಕ ಹೆಚ್ ಮಾರಪ್ಪ ಎ S k ಅಧ್ಯಕ್ಷರು . ರಾಜ್ಯಾದ್ಯಕ್ಷರು ರಾಜ್ಯ ಸಂಚಾಲಕರು ಕರ್ನಾಟಕ ವಾಲ್ಮೀಕಿ ನಾಯಕ ಪರಿತತೆ ದ . ಸಂ . ಸ ಸಮತವಾದ

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.