ಒಂಟಿ ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿದ ಆರೋಪಿಯ ಬಂಧನ

ಒಂಟಿ ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿದ ಆರೋಪಿಯ ಬಂಧನ ದಿನಾಂಕ 11 – 01 – 2020 ರಂದು ಮಧ್ಯಾಹ್ನ 1 – 00 ಗಂಟೆಯಿಂದ 3 – 45 ಗಂಟೆ ಸಮಯದಲ್ಲಿ ಸುಬ್ರಮಣ್ಯನಗರ ಪೊಲೀಸ್ ಠಾಣಾ ಸರಹದ್ದಿನ ಗಾಯತ್ರಿನಗರ , 4 ನೇ ಕ್ರಾಸ್‌ನ ಮನೆಯೊಂದರಲ್ಲಿ ಬಾಡಿಗೆಗೆ ವಾಸವಾಗಿದ್ದ ಮಂಜುಳ 42 ವರ್ಷ ಎಂಬುವರನ್ನು ಯಾರೋ ದುಷ್ಕರ್ಮಿಗಳು ಹಲತವಾದ ಅಂಯುಧದಿಂದ ಕತ್ತು ಸೀಳಿ ಕೊಲೆ ಮಾಡಿದ್ದು , ಈ ಸಂಬಂಧ ಮೃತಳ ಅಡ್ಡ ಶ್ರೀಮತಿ ಸಿದ್ದಗಂಗಮ್ಮ ರವರು ನೀಡಿರುವ ದೂರಿನ ಮೇರೆಗೆ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಿರುತ್ತದೆ .

ಈ ಪ್ರಕರಣದ ಆರೋಪಿಯಾದ ಮುಕುಂದ ಹೆಚ್ . ಹೆಚ್ . 48 ವರ್ಷ , ಸಂತೇಬಾಚನಹಳ್ಳಿ ಕೆ . ಆರ್ . ಪೇಟೆ ತಾಲ್ಲೂಕು , ಮಂಡ್ಯ ಜಿಲ್ಲೆ ಎಂಬುವನನ್ನು ದಸ್ತಗಿರಿ ಮಾಡುವಲ್ಲಿ ಸುಬ್ರಮಣ್ಯನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ . ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಈತನು ಎಲೆಕ್ಟ್ರಾನಿಕ್ ಏಶಿಯಲ್ಲಿ ಜ4 ಗ್ರೂಪ್‌ನಲ್ಲಿ ಸೆಕೂಲಿಯಾಗಿ ಕೆಲಸ ಮಾಡಿಕೊಂಡಿರುತ್ತಾನೆ . ಈತನು 15 ದಿನಗಳಿಗೊಮ್ಮೆ ಸ್ವಂತ ಊರಾದ ಕೆ . ಆರ್ . ಪೇಟೆಗೆ ಹೋಗಲು ಮೆಜೆಸ್ಟಿಕ್‌ಗೆ ಬಂದಾಗ ಆರೋಪಿಯು ಮೃತ ಮಂಜುಳ ಜೊತೆಯಲ್ಲಿ ಲೈಂಗಿಕತೆಯಲ್ಲಿ ತೊಡಗಲು ಪರಸ್ಪರ ಮಾತುಕತೆ ನಡೆಸಿ 1 , 500 / – ರೂ . ಗೆ ಒಪ್ಪಿಕೊಂಡು ಆಕೆಯು ಆರೋಪಿಯನ್ನು ಮನೆಗೆ ಕರೆದುಕೊಂಡು ಬಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಮುಂದಾದಾಗ ಮೃತ ಮಂಜುಳ ಸುರಕ್ಷಿತ ಲೈಂಗಿಕಯಲ್ಲಿ ತೊಡಗಲು ತಿಳಿಸಿದಾಗ ಆರೋಪಿಯು ನಿರಾಕರಿಸಿದ್ದು , ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಆಕೆಯು ಚೀರಾಡಲು ಶುರು ಮಾಡಿದ್ದು , ಆ ಸಮಯದಲ್ಲಿ ಆರೋಪಿಯು ಚಾಕುವಿನಿಂದ ಆಕೆಯ ಕತ್ತು ಕೊಯ್ದು ಕೊಲೆ ಮಾಡಿ , ಆಕೆಯ ಕೊರಳಿನಲ್ಲಿದ್ದ ಮಾಂಗಲ್ಯ ಸರ ಮತ್ತು ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡಿರುವುದಾಗಿ ತಿಳಿಸಿರುತ್ತಾನೆ . ಈ ಪ್ರಕರಣದಲ್ಲಿ ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ , ಶ್ರೀ ಬಿ . ಧನಂಜಯ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎಂ . ಸದಾನಂದ ರವರ ನೇತೃತ್ವದಲ್ಲಿ ಮ . ಪಿ . ಎಸ್ . ಐ ಶ್ರೀಮತಿ ಲತಾ ಎನ್ . ಪ್ರೊ ಪಿ . ಎಸ್ . ಐ ಶ್ರೀ ನವೀನ್ ಪ್ರಸಾದ್ ಹಾಗೂ ಸಿಬ್ಬಂದಿಯವರುಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.