ರಾಜ್ಯದ ಸೌಹಾರ್ದ ಸಹಕಾರಿಗಳು ಆದಾಯ ತೆರಿಗೆ ಕಲಂ 80 ಪಿ ( 2 ) ರಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವೆಂದು ರಾಜ್ಯ ಉಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯಿಂದ ಆಯೋಜಿಸಿದ ಪತ್ರಿಕಾಗೋಷ್ಠಿ

ಸೌಹಾರ್ದ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಹಾಗೂ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ನಿಮ್ಮ ಸಹಕಾರ ಕೋರುತ್ತ , ಸಹಕಾರ ಕ್ಷೇತ್ರ ಎದುರಿಸುತ್ತಿರುವ ಆದಾಯ ತೆರಿಗೆ ತೊಂದರೆಗಳು , ಸಂಯುಕ್ತ ಸಹಕಾರಿ ಈ ತೊಂದರೆಗಳ ನಿವಾರಣೆಯಲ್ಲಿ ನಡೆಸಿದ ಪ್ರಯತ್ನ ಮತ್ತು ನಿರಂತರ ಪ್ರಯತ್ನದಿಂದಾಗಿ ಈಗ ಸೌಹಾರ್ದ ಸಹಕಾರ ಕ್ಷೇತ್ರಕ್ಕೆ ಆದಾಯ ತೆರಿಗೆ ವಿಷಯದಲ್ಲಿ ದೊರೆತಿರುವ ಯಶಸ್ಸಿನ ಬಗ್ಗೆ ಕೆಲವು ವಿಷಯಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಈ ಪತ್ರಿಕಾಗೋಷ್ಠಿಯಲ್ಲಿ ಪ್ರಯತ್ನಿಸುತ್ತೇನೆ . ಆದಾಯ ತೆರಿಗೆ ತೊಂದರೆಯಿಂದ ಸೌಹಾರ್ದ ಸಹಕಾರಿಗಳಿಗೆ ಪರಿಹಾರ ರಾಜ್ಯದ ಸ್ವಾಯತ್ತ ಸಹಕಾರ ಕಾಯ್ದೆಯಾದ ಸೌಹಾರ್ದ ಸಹಕಾರಿ ಅಧಿನಿಯಮದಡಿಯಲ್ಲಿ ನೋಂದಾಯಿತವಾದೆ . ಸೌಹಾರ್ದ ಸಹಕಾರಿಗಳು ಸಹಕಾರಿ ಸಂಘ ‘ ಗಳಲ್ಲ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪರಿವಾಚಿಸಿ ತೆರಿಗೆ ಕಟ್ಟುವಂತೆ ನೋಟೀಸ್ ಹಾಗೂ ಆದೇಶಗಳನ್ನು ನೀಡುತ್ತಿರುವುದು ಸೌಹಾರ್ದ ಸಹಕಾರಿಗಳಿಗೆ ಆತಂಕವನ್ನುಂಟು ಮಾಡಿತ್ತು . ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಸೌಹಾರ್ದ ಸಹಕಾರ ಕ್ಷೇತ್ರದ ಮಾತೃಸಂಸ್ಥೆಯಾದ “ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ” ಇದು ನಿರಂತರವಾಗಿ ಎರಡು ವರ್ಷಗಳಿಂದ ಪ್ರಯತ್ನ ನಡೆಸುತ್ತ ಬಂದಿತ್ತು . ರಾಜ್ಯ ಸರ್ಕಾರ , ಕೇಂದ್ರ ಸರ್ಕಾರ , ಮಾನ್ಯ ಪ್ರಧಾನ ಮಂತ್ರಿಗಳು , ಮಾನ್ಯ ಹಣಕಾಸು ಸಚಿವರು , ಸಿಬಿಡಿಟಿ ಅಧ್ಯಕ್ಷರು ಮುಂತಾದವರನ್ನು ನಿರಂತರವಾಗಿ ಭೇಟಿ ಮಾಡುವ ಮೂಲಕ ಆದಾಯ ತೆರಿಗೆ ಸಮಸ್ಯೆಗಳ ಪರಿಹಾರಕ್ಕೆ ನಿರಂತರ ಪ್ರಯತ್ನ ಮಾಡಲಾಗಿದೆ . ಸೌಹಾರ್ದ ಸಹಕಾರ ಕ್ಷೇತ್ರದ ಆದಾಯ ತೆರಿಗೆ ತೊಂದರೆ ನಿವಾರಣೆಯ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಿ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಸಂಯುಕ್ತ ಸಹಕಾರಿಯಿಂದ ಪ್ರಕರಣ ದಾಖಲಿಸಲಾಗಿತ್ತು . ಪ್ರಸ್ತುತ ಸಂಯುಕ್ತ ಸಹಕಾರಿಯ ನಿರಂತರ ಪ್ರಯತ್ನದ ಫಲವಾಗಿ , ಸೌಹಾರ್ದ ಸಹಕಾರಿಗಳ ಆದಾಯ ತೆರಿಗೆ ತೊಂದರೆಗೆ ಪರಿಹಾರ ದೊರೆತಿದೆ . ಸೌಹಾರ್ದ ಸಹಕಾರಿಗಳು ಕೂಡ “ ಸಹಕಾರಿ ಸಂಘ ‘ ಗಳೆಂದು ಕರ್ನಾಟಕ ರಾಜ್ಯದ ಮಾನ್ಯ ಉಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪನ್ನು ನೀಡಿದೆ .

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ರಿಟ್ ಅರ್ಜಿ ( WP . 14381 / 2012 ) ರಾಗೂ ಶಾರದಾ ಸೌಹಾರ್ದ ಸಹಕಾರಿಯ : ರಿಟ್ ಅರ್ಜಿ ( W ] ) . 18411 / 2013 ) ಕುರಿತ ತೀರ್ಪಿನಲ್ಲಿ ಸೌಹಾರ್ದ ಸಹಕಾರಿಗಳು ಆದಾಯ ತೆರಿಗೆ ಕಾಯ ; SCC . 30P ( 2 ) ರಲ : ತೆರಿಗೆ ವಿನಾಯಿತಿ ಪಡೆಯಲು ಅರ್ಹರೆಂದು ಉಚ್ಚ ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ , ಸಹಕಾರಿಗಳ ಅವಗಾಹನೆಗಾಗಿ High Court Judgment ಪ್ರತಿಯನ್ನು ಸಂಯುಕ್ತ ಸಹಕಾರಿಯ ವೆಬ್ ಸೈಟ್ http://www.souharda.coop ನಲ್ಲಿ ಪ್ರಕಟಿಸಲಾಗಿದೆ .

ಉಚ್ಚ ನ್ಯಾಯಾಲಯದ ತೀರ್ಪು :

These writ petition succeed. A declaration is made to the effect that the entities registered under the Karnataka Souharda Sahakari Act 1997 fit in to the definition of “Co operative Society” as enacted in Sec.2(19) of the Income Tax Act, 1961 and therefore subject to all just exceptions, petitioners are, entitled to stake their claim for the benefit sec.80P of the said act; a writ of certiorari issues quashing the impugned notice dated 30.03.2018 in W.P.No.48414/2018; other legal consequences accordingly do follow. It is needless to mention that the other provisions of sec.80P of 1961 act and their effect on the claim of the petitioner like societies have been left to be addressed by the concerned authorities.

ಸಹಕಾರ ಕ್ಷೇತ್ರದ ಆದಾಯ ತೆರಿಗೆ ತೊಂದರೆ ನಿವಾರಣೆಯ ದೃಷ್ಟಿಯಿಂದ ಸೌಹಾರ್ದ ಸಹಕಾರಿಗಳು ಕೂಡ “ ಸಹಕಾರ ಸಂಘ ” ಎಂದು ಸೌಹಾರ್ದ ಸಹಕಾರಿ ಕಾಯ್ದೆಗೆ ಅಗತ್ಯ ತಿದ್ದುಪಡಿ ಮಾಡಿಕೊಡಲು ಅಥವಾ ಅದ್ಯಾದೇಶ ಹೊರಡಿಸಲು ಮಾನ್ಯ ಮುಖ್ಯಮಂತ್ರಿಗಳನ್ನು , ಮಾನ್ಯ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಬಸವರಾಜ ಬೊಮ್ಮಾಯಿಯವರನ್ನು ಹಾಗೂ ಮಾನ್ಯ ಕಾನೂನು , ಸಂಸದೀಯ ವ್ಯವಹಾರಗಳು ಮತ್ತು ಶಾಸನ ಇಲಾಖೆಯ ಸಚಿವರಾಗಿರುವ ಶ್ರೀ ಜಿಎ ಸಿ ಮಾಧುಸ್ವಾಮಿಯವರನ್ನು ವಿನಂತಿಸಿಕೊಳ್ಳಲಾಗಿದ್ದು , ಶ್ರೀಯುತರು ಇದಕ್ಕೆ ಒಪ್ಪಿಗೆ ನೀಡಿರುತ್ತಾರೆ . ಆದ್ಯಾದೇಶ ಹೊರಡಿಸುವ / ಕಾಯ್ದೆ ತಿದ್ದುಪಡಿ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ . ಇದೇ ಸಂದರ್ಭದಲ್ಲಿ ಮಾನ್ಯ ಉಚ್ಚೆ ನ್ಯಾಯಾಲಯದ ತೀರ್ಪು ಬಂದಿರುವುದ ಸೌಹಾರ್ದ ಸಹಕಾರಿಗಳಿಗೆ ಪೂರಕವಾಗಿದೆ .

ಕೇಂದ್ರ ಹಣಕಾಸು ಸಚಿವರಾದ ಶ್ರೀ ನಿರ್ಮಲಾ ಸೀತಾರಾಮನ್ ಇವರ ಭೇಟಿ : ಈ ಮೇಲೆ ತಿಳಿಸಿದ ತೊಂದರೆ ಕೇವಲ ಸೌಹಾರ್ದ ಸಹಕಾರ ಕ್ಷೇತ್ರಕ್ಕೆ ಮೀಸಲಾಗಿತ್ತು . ಆದರೆ ಇದನ್ನು ಹೊರತುಪಡಿಸಿ ) ಸಮಗ್ರ ಸಹಕಾರ ಕ್ಷೇತ್ರಕ್ಕೆ ಅನೇಕ ಆದಾಯ ತೆರಿಗೆ ತೊಂದರೆಗಳು ಎದುರಾಗಿವೆ . ಅವುಗಳೆಂದರೆ > ಸಹಕಾರ ಸಂಸ್ಥೆಗಳಿಗೆ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದ್ದರೂ ಆದಾಯ ತೆರಿಗೆ ಅಧಿಕಾರಿಗಳು ನೋಟೀಸ್ ನೀಡುವ ಮೂಲಕ ಗೊಂದಲ ಮೂಡಿಸುತ್ತಿರುವುದು , > ರಾಜ್ಯ ಕಾಯ್ದೆಯಲ್ಲಿರುವ ಸಹ ಸದಸ್ಯರು ಹಾಗೂ ನಾಮ ಮಾತ್ರ ಸದಸ್ಯರ ಅವಕಾಶವನ್ನು ಪರಿಗಣಿಸದೆ ಇವರೊಂದಿಗಿನ ವ್ಯವಹಾರಕ್ಕೆ ತೆರಿಗೆ ವಿಧಿಸುತ್ತಿರುವುದು , > ಸಹಕಾರ ಬ್ಯಾಂಕುಗಳಿಗೆ ಅನ್ವಯವಾಗುವ ಪ್ರಾವಧಾನವನ್ನು ಸಹಕಾರ ಸಂಸ್ಥೆಗಳಿಗೂ ಅನ್ವಯಿಸುತ್ತಿರುವುದು . > ಸಹಕಾರಿಗಳು ಬ್ಯಾಂಕಿನಲ್ಲಿಟ್ಟಿರುವ ಮೀಸಲು ನಿಧಿಗಳ ಮೇಲಿನ ಬಡ್ಡಿಗೆ ತೆರಿಗೆ ಪಾವತಿಸಲು ಸೂಚಿಸುತ್ತಿರುವುದು . > ಸಹಕಾರ ಕ್ಷೇತ್ರಕ್ಕೆ ಮಾರಕವಾಗುವಂತಹ ಸೆಕ್ಷನ್‌ಗಳಾದ 269ಎಸ್‌ಟಿ , 194ಎನ್ ಮೂಲಕ ನಗದು ವ್ಯವಹಾರಕ್ಕೆ ಕಡಿವಾಣ ಎಧಿಸುತ್ತಿರುವುದು . > 269ಎಸ್ ಎಸ್ ಹಾಗೂ 269ಟಿ ಮೂಲಕ ಸಾಲ ಹಾಗೂ ಠೇವಣಿ ವ್ಯವಹಾರಗಳಿಗೆ ರೂ . 20 , 000 / – ಗಳ ನಗದು ಮಿತಿ ವಿಧಿಸಿರುವುದು . > ಅಪನಗದೀಕರಣದ ಸಂದರ್ಭದಲ್ಲಿ ಸದಸ್ಯರಿಂದ ಪಡೆದು ಬ್ಯಾಂಕಿಗೆ ಜಮಾ ಮಾಡಲಾದ ಕರೆನ್ಸಿ ನೋಟುಗಳ ಮೊತ್ತಕ್ಕೆ ಸಮನಾದ ಮೊತ್ತವನ್ನು ದಂಡ ಮತ್ತು ಬಡ್ಡಿಯಾಗಿ ವಿಧಿಸುವ ಬಗ್ಗೆ ನೋಟೀಸ್ ನೀಡುತ್ತಿರುವುದು.

ಈ ಎಲ್ಲ ತೊಂದರೆಗಳ ನಿವಾರಣೆಯಲ್ಲಿ ಕೂಡ ಸಂಯುಕ್ತ ಸಹಕಾರಿಯು , ರಾಷ್ಟ್ರಮಟ್ಟದ ಸಂಸ್ಥೆಯಾದ ಸಹಕಾರ ಭಾರತಿಯೊಂದಿಗೆ ಸಮನ್ವಯ ಸಾಧಿಸಿಕೊಂಡು ಅಗತ್ಯ ಪ್ರಯತ್ನಗಳನ್ನು ನಡೆಸುತ್ತಿದೆ . ಪ್ರಸ್ತುತ 20 ಜನವರಿ 2020ರಂದು ಮಾನ್ಯ ಹಣಕಾಸು ಸಚಿವರು ಬಡ್ಡೆಟ್ ಪೂರ್ವ ಸಿದ್ಧತೆ ಹಾಗೂ ಸಹಕಾರ ಕ್ಷೇತ್ರದ ಆದಾಯ ತೆರಿಗೆ ತೊಂದರೆಗಳ ನಿವಾರಣೆ ಕುರಿತಂತೆ ಸಹಕಾರ ಭಾರತಿಯ ಸಭೆ ನಡೆಸಿದ್ದು , ಇದರಲ್ಲಿ ಸಂಯುಕ್ತ ಸಹಕಾರಿಯ ಅಧ್ಯಕ್ಷರು ಹಾಗೂ ಸಹಕಾರ ಭಾರತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಬಿ ಹೆಚ್ ಕೃಷ್ಣಾರೆಡ್ಡಿಯವರು ಕೂಡ ಭಾಗವಹಿಸಿದ್ದಾರೆ . ಮೇಲ್ಕಂಡ ಸಮಸ್ಯೆಗಳ ಬಗ್ಗೆ ಸಮಗ್ರವಾದ ಮನವಿಯನ್ನು ಈ ಸಂದರ್ಭದಲ್ಲಿ ಮಾನ್ಯ ಹಣಕಾಸು ಸಚಿವರಿಗೆ ಸಲ್ಲಿಸಿ ಸಹಕಾರ ಕ್ಷೇತ್ರದ ಆದಾಯ ತೆರಿಗೆ ಸಮಸ್ಯೆಗಳ ಬಗ್ಗೆ ಮಾನ್ಯ ಹಣಕಾಸು ಸಚಿವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಾಗಿದೆ . ಮಾನ್ಯ ಹಣಕಾಸು ಸಚಿವರು ಈ ಬಗ್ಗೆ ಪೂರಕವಾಗಿ ಸ್ಪಂದಿಸಿದ್ದು , ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮವಿಡುವ ಭರವಸೆ ನೀಡಿರುತ್ತಾರೆ.

ಸರಕಾರದ & ಸಹಕಾರಿಗಳ ಮನಸ್ಸಿನಲ್ಲಿ ಸಹಕಾರ ಕ್ಷೇತ್ರ ಅದರಲ್ಲೂ ಪ್ರಮುಖವಾಗಿ ಸೌಹಾರ್ದ ಸಹಕಾರಿ ಕ್ಷೇತ್ರದ ಬಗ್ಗೆ ಸಕಾರಾತ್ಮಕ ಉತ್ತಮ ಭಾವನೆಗಳನ್ನು ಬೆಳೆಸುವುದು , ಸರಕಾರ ಹಾಗೂ ಸಹಕಾರಿಗಳೊಡನೆ ನಿರಂತರ ಉತ್ತಮ ಬಾಂಧವ್ಯವನ್ನು ಹೊಂದುವುದು , ಸೌಹಾರ್ದ ಸಹಕಾರಿಗಳ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದು ನಮ್ಮ ಪ್ರಮುಖ ಉದ್ದೇಶ . ರಾಜ್ಯದಲ್ಲಿ ಸೌಹಾರ್ದ ಸಹಕಾರಿಗಳ ಸಂಖ್ಯಾತ್ಮಕ ಬೆಳವಣಿಗೆಯ ಜೊತೆಗೆ ಗುಣಾತ್ಮಕ ಬೆಳವಣಿಗೆಯೂ ಸಹ ಸಂಯುಕ್ತ ಸಹಕಾರಿಯ ಆಡಳಿತ ಮಂಡಳಿಯ ಆದ್ಯತಾ ವಲಯವಾಗಿದೆ . ಆದಾಯ ತೆರಿಗೆ ತೊಂದರೆಗಳಿಂದಾಗಿ ಸಹಕಾರ ಕ್ಷೇತ್ರಕ್ಕೆ ಆಗುತ್ತಿರುವ ಹಿನ್ನಡೆಗಳನ್ನು ಮೀರಿ ಸಹಕಾರಿಗಳು ಗುಣಾತ್ಮಕವಾಗಿ ಬೆಳವಣಿಗೆ ಸಾಧಿಸಬೇಕಾದ ಅಗತ್ಯವಿದೆ .

ಈ ನಿಟ್ಟಿನಲ್ಲಿ ನಾವೆಲ್ಲ ಶ್ರಮಿಸೋಣ , ಇದಕ್ಕೆ ರಾಜ್ಯದ ಎಲ್ಲ ಸೌಹಾರ್ದ ಸಹಕಾರಿಗಳ , ಸಹಕಾರಿ ತಜ್ಞರ , ಸರ್ಕಾರ , ಇಲಾಖೆಯ ಅಧಿಕಾರಿಗಳು , ಮಾಧ್ಯಮ ಮಿತ್ರರಾದ ತಮ್ಮೆಲ್ಲರ ಸಲಹೆ ಸಹಕಾರ ಹಾಗೂ ಮಾರ್ಗದರ್ಶನ ನಿರಂತರವಾಗಿ ನಮ್ಮಗಳ ಮೇಲೆ ಸದಾ ಇರಲಿ ಎಂದು ಅಪೇಕ್ಷಿಸುತ್ತೇವೆ . ಇಂದಿನ ಪತ್ರಿಕಾಗೋಷ್ಠಿಗೆ ಆಗಮಿಸಿದ ತಾವೆಲ್ಲ ಮೇಲ್ಕಂಡ ವಿಷಯಗಳಿಗೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ಹಾಗೂ ಮುಂಬರುವ ದಿನಗಳಲ್ಲಿ ಸಹಕಾರ ಕ್ಷೇತ್ರದ ಬಗ್ಗೆ ಹೆಚ್ಚಿನ ಧನಾತ್ಮಕ ವಿಷಯಗಳನ್ನು ಪ್ರಚುರಪಡಿಸುವ ಮೂಲಕ ಸಹಕಾರ ಕ್ಷೇತ್ರವನ್ನು ಬೆಳಸಲು ಸಹಕರಿಸಿ ಎಂದು ವಿನಂತಿಸುತ್ತೇವೆ .

– ಬಿ. ಹೆಚ್. ಕೃಷ್ಣಾರೆಡ್ಡಿ – ಅಧ್ಯಕ್ಷರು ಬಿ.ಎಸ್.ಗುಂಡುರಾವ್– ನಿರ್ದೇಶಕರು

ಶರಣಗೌಡ ಜಿ . ಪಾಟೀಲ್ – ವ್ಯವಸ್ಥಾಪಕ ನಿರ್ದೇಶಕರು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.