“ ಟಿಪ್ಪು ಸುಲ್ತಾನ್ ಅನ್ಟೋಲ್ಡ್ ಸ್ಟೋರಿ ” ಈ ಚಿತ್ರದ ರಚನೆ , ಮೈಸೂರು ಹುಲಿ , ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ಹೋರಾಟಗಾರ ಟಿಪ್ಪು ಸುಲ್ತಾನರ ಐತಿಹಾಸಿಕ ಸತ್ಯ ಸಾರಂಶ

“ ಟಿಪ್ಪು ಸುಲ್ತಾನ್ ಅನ್ಟೋಲ್ಡ್ ಸ್ಟೋರಿ ” ಈ ಚಿತ್ರದ ರಚನೆ , ಮೈಸೂರು ಹುಲಿ , ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ಹೋರಾಟಗಾರ ಟಿಪ್ಪು ಸುಲ್ತಾನರ ಐತಿಹಾಸಿಕ ಸತ್ಯ ಸಾರಂಶ , ತ್ಯಾಗ , ಬಲಿದಾನ , ದೇಶ ಹಾಗೂ ನಾಡಿನ ಅಭಿವೃದ್ಧಿಗಾಗಿ ನೀಡಿರುವ ಅನುದಾನ , ಅಪಾರ ಕೊಡುಗೆ ಮತ್ತು ಸಾಂರಾಜ್ಯ ಶಾಹಿ , ಬ್ರಿಟೀಷರ ವಿರುದ್ಧ ತನ್ನ ನಾಡಿನ ಸ್ವಾತಂತ್ರ್ಯಕ್ಕಾಗಿ ಮಹಾನ್ ಹೋರಾಟ ಮಾಡಿ ಹುತಾತ್ಮರಾಗಿರುವ ಅಂಶಗಳ ಆಧಾರದ ಮೇಲೆ ಆಧಾರಿತವಾದ ಚಲನ ಚಿತ್ರ ಈ ಚಿತ್ರವು ವಿನೂತನವಾಗಿದ್ದು , ನಿರ್ದೇಶಕರು ಈ ಚಿತ್ರಕ್ಕಾಗಿ ಐತಿಹಾಸಿಕ ಅಧ್ಯಾಯನ ಮಾಡಿ ವಿಶೇಷವಾಗಿ ಇತಿಹಾಸದ ಸತ್ಯಾಸತ್ಯತೆಗಳನ್ನು ಚಿತ್ರದ ಮೂಲಕ ಸಾರ್ವಜನಿಕರಿಗೆ ತಲುಪಿಸುವುದರೊಂದಿಗೆ , ಟಿಪ್ಪುವಿನ ಜೀವನ ಚರಿತ್ರೆಯನ್ನು ತರೆಯಮೇಲೆ ಅದ್ದೂರಿಯಾಗಿ ಚಿತ್ರಿಸಿಲು ನಿರ್ಧರಿಸಿದ್ದಾರೆ .

ಹುತಾತ್ಮ ಟಿಪ್ಪು ಸುಲ್ತಾನರು 49 ಹರ್ಷ ಪರಮಾತ್ರ ನೀಡಿರುವ ವಯಸ್ಸಿನ ಅವದಿಯಲ್ಲಿ ತನ್ನ ನಾಡಿನ ಒಳಿತಿಗಾಗಿ ತನ್ನ ಮಕ್ಕಳನೇ ಬ್ರಿಟೀಷರಿಗೆ ಒತ್ತೆಯಿಟ್ಟು ದೇಶ ಪ್ರೇಮಿ ತನ್ನ ತಂದೆ ಹೈದರಾಲಯವರು ಆರಂಭಿಸಿದ ಬ್ರಿಟಿಸ್ ವಿರೋಧಿ ಬಂಡಾಯವನ್ನು ಸಮರ್ಥವಾಗಿ ಮುಂದುವರಿಸಿದ ಸಾಹಸಿ . ತಾನು ಆಳುತ್ತಿದ್ದ ಮೈಸೂರು ಪ್ರಾಂತ್ಯದಲ್ಲಿ ಕೋಮು ಸೌರ್ಹದತೆಯನ್ನು ಸ್ಥಾಪಿಸಿದ ಮಾದರಿ ಆಡಳಿತಗಾರ , ಟಿಪ್ಪುವು ತನ್ನ ಸಾಮ್ರಜ್ಯದ ನಾಲ್ಕು ಬೇರೆ ಬೇರೆ ದಿಕ್ಕುಗಳಲ್ಲಿರುವ ದೇವಾಲಯಗಳಿಗೆ ಅಪಾರ ಕೊಡುಗೆ ಮತ್ತು ದಾನಗಳನ್ನು ನೀಡಿದ್ದಾರೆ .

ಶ್ರೀರಂಗಪಟ್ಟಣದ ರಂಗನಾಥ ದೇವಾಲಯ , ಮೇಲುಕೋಟೆಯ ನರಸಿಂಹಸ್ವಾಮಿ ದೇವಸ್ಥಾನ , ನಂಜನಗೂಡು ತಾಲ್ಲೂಕು , ಕಳಲೆಯ ಲಕ್ಷ್ಮೀಕಾಂತ ದೇವಾಲಯ , ನಂಜನಗೂಡು ಶ್ರೀ ಕಂಠೇಶ್ವರ ದೇವಾಲಯ , ಬೆಂಗಳೂರಿನ ಶ್ರೀ ಕೋಟೆವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ ಜೀರ್ಣೋದ್ಧಾರ ಮತ್ತು ಶ್ರೀಂಗೇರಿಯ ಶಾರದ ಪೀಠದ ಮೇಲೆ ದಾಳಿ ಮಾಡಿದ ಮರಾಠರನ್ನು ಒಗ್ಗೂಡಿಸಿ ರಕ್ಷಣೆ ಮತ್ತು ಪರಿಹಾರ ನೀಡಿರುವುದು ಸಾಕ್ಷದ್ ಉದಾಹರಣೆಗಳು . ಹಾಗೂ ಹಿಂದು ದೇವಾಲಯಗಳಿಗೆ , ಮಠಗಳಿಗೆ , ನೀಡಿರುವ ಕೊಡುಗೆಗಳು , ಸೂಕ್ತ ರಕ್ಷಣೆ , ಹಾಗೂ ತನ್ನ ಆಡಳಿತದ ನಿರ್ಣಯಕ ಸ್ಥಾನಗಳಲ್ಲಿ ಇನ್ನಿತರೇ ಧರ್ಮದವರನ್ನು ಗಣನೀಯವಾಗಿ ನೇಮಿಸಿಕೊಂಡಿದ್ದರ ನಿರ್ಧಿಷ್ಟ ವಿವರಗಳು ಕನ್ನಡ ಭಾಷೆಯಲ್ಲಿರುವ ಅವರ ಪತ್ರಗಳು , ಶಾಸನಗಳು , ಅವರ ಅಭಿವೃದ್ಧಿ ಕಾರ್ಯಗಳ ಸಾಕ್ಷಿಗಳು ಮುಂತಾದವುಗಳು ಟಿಪ್ಪುವಿನ ಧರ್ಮ ಸಹಿಷ್ಟೊತೆಗೆ ಹಾಗೂ ಅಭಿವೃದ್ಧಿಪರ ಉದಾರ ದೋರಣೆಗಳಿಗೆ ಸಾಕ್ಷಿಗಳಾಗಿವೆ .

ಈ ಮೂಲಕ ಧಾರ್ಮಿಕ ಸೌಹಾರ್ದವನ್ನು ಮೆರೆದ ಟಿಪ್ಪು ಸುಲ್ತಾನರನ್ನು ನಾವು ಎಂದು ಮರೆಯುವಂತಿಲ್ಲ , ಕೋಮು ಸೌಹಾರ್ದತೆ , ಜನಸದ್ದಾವನ , ಸಹಬಾಳ್ವೆಯ ಮೂತಹಕ್ಕಾಗಿ ನಿರ್ಮಿಸುತ್ತಿರುವ ಹೊಸ ಚಿತ್ರ ‘ ಟಿಪ್ಪು ಸುಲ್ತಾನ ಅನ್ಟೋಲ್ಡ್ ಸ್ಟೋರಿ ”

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.