ಹಲವಾರು ವರ್ಷಗಳಿಂದ ಕನ್ನಡ ಸಿನಿಮಾರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ | | ಶಿವರಾಜ್ ಕುಮಾರ್ ಅವರನ್ನು ಕಡೆಗಣಿಸಿ ಇನ್ನು ಬಾಲಿವುಡ್ ನಲ್ಲಿ ಅಂಬೆಗಾಲಿಡುತ್ತಿರುವ ನಟಿ ಕಂಗನಾರಾಣಾವತ್‌ ರವರಿಗೆ ಪದ್ಮಶ್ರೀ ಪ್ರಶಸ್ತಿ ಕೊಟ್ಟಿರುವುದು ಹಾಸ್ಯಾಸ್ಪದ ಹಾಗು ಕೇಂದ್ರದ ತಾರತಮ್ಯ

ಕೇಂದ್ರ ಸರ್ಕಾರದಿಂದ ನಿರಂತರವಾಗಿ ಕನ್ನಡಿಗರಿಗೆ ಅನ್ಯಾಯ , ಭಾರತ ಸರ್ಕಾರದ ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿ ಈ ವರ್ಷವು ಕನ್ನಡಿಗರ ಪಾಲಿಗೆ ಮರೀಚಿಕೆಯಾಗಿದೆ . ಹಲವಾರು ವರ್ಷಗಳಿಂದ ಕನ್ನಡ ಸಿನಿಮಾರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ | | ಶಿವರಾಜ್ ಕುಮಾರ್ ಅವರನ್ನು ಕಡೆಗಣಿಸಿ ಇನ್ನು ಬಾಲಿವುಡ್ ನಲ್ಲಿ ಅಂಬೆಗಾಲಿಡುತ್ತಿರುವ ನಟಿ ಕಂಗನಾರಾಣಾವತ್‌ ರವರಿಗೆ ಪದ್ಮಶ್ರೀ ಪ್ರಶಸ್ತಿ ಕೊಟ್ಟಿರುವುದು ಹಾಸ್ಯಾಸ್ಪದ ಹಾಗು ಕೇಂದ್ರದ ತಾರತಮ್ಯ ನೀತಿಯನ್ನು ಎತ್ತಿ ತೋರಿಸುತ್ತಿದೆ . . ಡಾ | | ಶಿವರಾಜ್ ಕುಮಾರ್ ಅವರು 1986ನೇ ಇಸವಿಯಲ್ಲಿ ಆನಂದ್ ಚಿತ್ರದ ಮುಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಲ್ಲಿಯವರೆಗೆ 120ಕ್ಕೂ ಅಧಿಕ | ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಹಾಗೂ ಭಾರತ ಚಿತ್ರರಂಗದ ಇತಿಹಾಸದಲ್ಲೇ ತಮ್ಮ ಅಭಿನಯದ ಮೊದಲ ಮೂರು ಚಿತ್ರಗಳಲ್ಲಿ ಸತತವಾಗಿ 175 ದಿನಗಳ ದಾಖಲೆಯ ಪ್ರದರ್ಶನ ಕೂಟ್ಟ ಭಾರತದ ಏಕೈಕ ಹ್ಯಾಟ್ರಿಕ್ ಹೀರೋ ಎಂಬ ಸಾಧನೆ ಮಾಡಿದ ನಾಯಕ ನಟರು . ಚಿತ್ರರಂಗದ ಹೂರತಾಗಿಯು ಸಮಾಜ ಸೇವೆಯಲ್ಲು ತೋಡಗಿಸಿಕೊಂಡು ಸಾವಿರಾರು 3 ನಿರ್ಗತಿಕ ಹಾಗು ಘೋಷಿತ ಹೆಣ್ಣು ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ . ಡಾ | | ರಾಜ್ – ಕುಮಾರ್ ಹಾಗು ಪಾರ್ವತಮ್ಮನವರು ಹುಟ್ಟು ಹಾಕಿದ ಶಕ್ತಿಧಾಮ ಎಂಬ ಮಹಿಳೆಯರ ಪುನರ್ವಸತಿ ಕೇಂದ್ರವನ್ನು ಯಶಸ್ವಿಯಾಗಿ ನಡೆಸಿಕೊಂಡು ಸಾವಿರಾರು ಹೆಣ್ಣುಮಕ್ಕಳ ಬಾಳಿನಲ್ಲಿ – ಬೆಳಕಾಗಿದ್ದಾರೆ . – ಕನ್ನಡ ನೆಲ ಜಲದ ಸಮಸ್ಯೆ ಬಂದಾಗಲೆಲ್ಲ ಚಿತ್ರರಂಗದ ಪರವಾಗಿ ಹೋರಾಟದ ಮುಂದಾಳತ್ವ ವಹಿಸಿಕೊಂಡು ನಾಡಿನ ಪರ ಕಾಳಜಿ ಮೆರೆಯುತ್ತಿದ್ದಾರೆ ಇಷ್ಟೆಲ್ಲ ಸಾದನ ಮಾಡಿರುವ ಡಾ | | ಶಿವರಾಜ್ ಕುಮಾರ್ ರವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಬೇಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀಯುತ ಯಡಿಯೂರಪ್ಪ ನವರಿಗೆ ಅಖಿಲ ಕರ್ನಾಟಕ ಡಾ | | ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದಿಂದ ಮನವಿ ಪತ್ರ ಸಲ್ಲಿಸಿದ್ದೇವೆ ಆದರು ಸಹ ಕೇಂದ್ರ ಸರ್ಕಾರ ಈ ಮನವಿಗೆ ಸ್ಪಂದಿಸಿಲ್ಲ .

ಕರ್ನಾಟಕದ ಕೋಟಾದಡಿಯಲ್ಲಿ ಕೇಂದ್ರ ಸರ್ಕಾರ ಪ್ರಭುದೇವ ಹಾಗು ರಾಜಮೌಳಿ ಅವರಿಗೆ ಯಾವ ಮಾನದಂಡದ ಮೇಲೆ ಈ ಪ್ರಶಸ್ತಿ ನೀಡಿದೆಯೋ ಅರ್ಥವಾಗುತ್ತಿಲ್ಲ . ಅವರು ಕನ್ನಡಿಗರೇ ಇರಬಹುದು ಆದರೆ ಅವರು ಮಾಡಿರುವ ಸಾದನೆ ಹೆಸರು ಎಲ್ಲಿ ಬೇರೆ ರಾಜ್ಯದಲ್ಲಿ ಅದುಹೇಗೆ ಕೇಂದ್ರ ಸರ್ಕಾರ ಕನ್ನಡಿಗರ ಕೋಟಾದಡಿಯಲ್ಲಿ ಪರರಾಜ್ಯದವರಿಗೆ ಈ ಪ್ರಶಸ್ತಿ ನೀಡಿತು . ತಮಿಳು ಹಾಗು ತೆಲುಗು ಚಿತ್ರರಂಗದ ಹಾಸ್ಯ ಕಲಾವಿದರಿಗು ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರವು ನೀಡಿರುತ್ತದೆ . ಹಾಗಾದರೆ ನಮ್ಮ ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದ ಸೇವೆಸಲ್ಲಿಸುತ್ತಿರುವ ಅನಂತ್ ನಾಗ್ ರಂತಹ ಹಿರಿಯರು ನಿಮ್ಮ ಕಣ್ಣಿಗೆ ಕಣಾಲಿಲ್ಲವೆ . . . ಕೇಂದ್ರ ಸರ್ಕಾರದ ಈ ಮಲತಾಯಿ ದೋರಣೆ ಯನ್ನು ಖಂಡಿಸಿ ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಅಖಿಲ ಕರ್ನಾಟಕ ಡಾ | | ಶಿವರಾಜ್‌ಕುಮಾರ್ ಹಾಗೂ ರಾಜರತ್ನ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ತೀರ್ಮಾನಿಸಲಾಗಿದೆ .

-ಪ್ರಕಾಶ್ .ಕೆ

ರಾಜ್ಯಾಧ್ಯಕ್ಷರು

– ಸೋಮು

ರಾಜ್ಯ ಪ್ರಧಾನ ಕಾರ್ಯಧ್ಯಕ್ಷರು

-ಹೊನ್ನಯ್ಯ ಗೌಡ ಹೆಜ್

ರಾಜ್ಯ ಕಾರ್ಯಧ್ಯಕ್ಷರು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.