ಲಾಭದಾಯಕತೆಯನ್ನು ಪ್ರಕಟಿಸಿದ ಟ್ರ್ಯೂಕಾಲರ್ ಜಾಗತಿಕವಾಗಿ 200 ದಶಲಕ್ಷ ಮಾಸಿಕ ಸಕ್ರಿಯ ಉಪಯೋಗಿಗಳ ಸಂಖ್ಯೆಯನ್ನು ದಾಟಿದೆ

ಬೆಂಗಳೂರು, ಫೆಬ್ರವರಿ 2020 : – ಕಳೆದ ನಾಲ್ಕು ತಿಂಗಳಲ್ಲಿ ಕಾಲರ್ ಲಾಭದಾಯಕತೆಯನ್ನು ಸಾಧಿಸಿದೆ ಎಂದು ಸಂಸ್ಥೆ ಪ್ರಕಟಿಸಿದೆ . ಜೊತೆಗೆ ಜಗತ್ತಿನ ಎಲ್ಲೆಡೆ 200 ದಶಲಕ್ಷ ಮಾಸಿಕ ಸಕ್ರಿಯ ಬಳಕೆದಾರರ ಪ್ರಮುಖ ಮೈಲುಗಲ್ಲನ್ನು ಕಂಪನಿ ದಾಟಿದೆ . ಟ್ರ್ಯೂಕಾಲರ್ ಭಾರತದಲ್ಲಿ ಅತ್ಯಂತ ದೊಡ್ಡ ಗ್ರಾಹಕರ ವೇದಿಕೆಗಳಲ್ಲಿ ಒಂದಾಗಿದ್ದು , ಅತ್ಯಂತ ಕ್ಷಿಪ್ರಗತಿಯಲ್ಲಿ ವಿಸ್ತರಿಸುವುದರೊಂದಿಗೆ ಈ ದೇಶ ಬ್ರಾಂಡ್ಗೆ ಸ್ಪಷ್ಟವಾಗಿ ತನ್ನ ಸ್ವಂತ ಮನೆಯಂತಹ ಮಾರುಕಟ್ಟೆಯಾಗಿದೆ . ಜಾಹೀರಾತು ಮಾರಾಟಗಳು ಮತ್ತು ಪ್ರಮುಖ ಚಂದಾದಾರಿಕೆಗಳಲ್ಲಿ ಆಕ್ರಮಣಕಾರಿ ಬೆಳವಣಿಗೆ ಭಾರತದಲ್ಲಿ ಕಂಡುಬಂದಿರುವುದು ಈ ಆದಾಯ ಸೃಷ್ಟಿಗೆ ಚಾಲನಾ ಶಕ್ತಿಯಾಗಿದೆ . ಒಂದು ವರ್ಷದ ಹಿಂದೆ ಅದು ಆರಂಭವಾದಾಗಿನಿಂದ ಪ್ರೀಮಿಯರ್ ಚಂದಾದಾರಿಕೆಗಳು ಅಪಾರವಾಗಿ ಬೆಳೆದಿವೆ . ಇದು ಒಂದು ದಶಲಕ್ಷ ಸಂಖ್ಯೆಯನ್ನು ಈಗಾಗಲೇ ದಾಟಿದ್ದು , ಮುಂಬರುವ ತಿಂಗಳುಗಳಲ್ಲಿ ಶೇ . 50ರಷ್ಟು ಬೆಳೆಯುವ ಅಂದಾಜಿದೆ . ಇದು ಟ್ರ್ಯೂಕಾಲರ್ ಕಾಲರ್‌ಗೆ ಗಮನಾರ್ಹ ಸಾಧನೆಯಾಗಿದೆ . ಟ್ರ್ಯೂಕಾಲರ್ ಕಾಲರ್ ಈಗ ಇನ್‌ಸ್ಟೆಂಟ್ ಮೆಸೇಜಿಂಗ್ , ವಿಒಐಪಿ ಮತ್ತು ಫಿನ್ ಟೆಕ್ ಉತ್ಪನ್ನಗಳಾದ ಯುಪಿಐ ಹಣ ವರ್ಗಾವಣೆ , ಭಾರತ್ ಬಿಲ್ ಪಾವತಿ ವ್ಯವಸ್ಥೆ ಮತ್ತು ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರಂಭವಾಗುವ ನಿರೀಕ್ಷೆ ಇರುವ ಡಿಜಿಟಲ್ ಹಣ ಸಾಲ ಮುಂತಾದ ವಿಸ್ತಾರವಾದ ಸೇವೆಗಳೆಲ್ಲವನ್ನು ಒಂದೇ ಕಡೆ ನೀಡುವಂತಹ ಸಂವಹನ ವೇದಿಕೆಯಾಗಿ ಹೊರಹೊಮ್ಮುತ್ತಿದೆ .

ಟ್ರ್ಯೂಕಾಲರ್ ಕಾಲರ್‌ನ ವ್ಯವಸ್ಥಾಪಕ ನಿರ್ದೇಶಕರಾದ ಸಂದೀಪ್ ಪಾಟೀಲ್ ಅವರು ಈ ಸಂದರ್ಭದಲ್ಲಿ ತಮ್ಮ ಚಿಂತನೆಗಳನ್ನು ಹಂಚಿಕೊಂಡು ಮಾತನಾಡಿ , ‘ ‘ ವಾರ್ಷಿಕವಾಗಿ ಶೇ . 70 ಕ್ಕೂ ಹೆಚ್ಚಿನ ಬೆಳವಣಿಗೆಯೊಂದಿಗೆ ಕಳೆದ ಹಲವು ತಿಂಗಳುಗಳಲ್ಲಿ ನಾವು ಲಾಭದಾಯಕವಾಗಿರುವುದರ ಬಗ್ಗೆ ನಾವು ರೋಮಾಂಚಿತರಾಗಿರುವುದಲ್ಲದೇ ಇದನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇವೆ . ನಮ್ಮ ಬಳಕೆದಾರರು ನಮಲ್ಲಿ ಇಟ್ಟಿರುವ ನಂಬಿಕೆಗೆ ಮತ್ತು ನಮ್ಮ ಆದಾಯ ವ್ಯವಹಾರಗಳಿಗೆ ಈ ಸಾಧನೆ ಸಾಕ್ಷಿಯಾಗಿದೆ . ಜಾಹೀರಾತು , ಚಂದಾದಾರಿಕೆಗಳು , ಸಾಲ ಮತ್ತು ಹಣ ಕಾಸು ಸೇವೆಗಳ ಮೂಲಕ ಆದಾಯ ಬೆಳೆಸುವುದನ್ನು ನಾವು ಮುಂದುವರೆಸುವೆವು . ತಂತ್ರಜ್ಞಾನ , ಉತ್ಪನ್ನ ನಿರ್ವಹಣೆ , ಡಾಟಾ ವಿಜ್ಞಾನಗಳು ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಪ್ರತಿಭೆಗಳನ್ನು ನೇಮಿಸಿಕೊಳ್ಳುವುದರ ಮೂಲಕ ಮತ್ತು ವ್ಯವಸ್ಥೆಯಲ್ಲಿ ಪಾಲುದಾರಿಕೆಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದರ ಮೂಲಕ ಭಾರತಕ್ಕಾಗಿ ಮೇಕ್ ಇನ್ ಇಂಡಿಯಾ ಕೈಗೊಳ್ಳಲಿದ್ದೇವೆ . ಮೂರು ವರ್ಷಗಳಲ್ಲಿ ಷೇರುಗಳ ಮೊದಲ ಸಾರ್ವಜನಿಕ ಕೊಡುಗೆ ಐಪಿಒ ) ಗೆ ಸಿದ್ಧವಾಗಲಿರುವ ಆರ್ಥಿಕವಾಗಿ ಸುಸ್ಥಿರ ಹಾಗೂ ಸ್ವತಂತ್ರ ಕಂಪನಿಯನ್ನು ನಿರ್ಮಿಸಲು ನಮ್ಮ ಮಾರ್ಗದಲ್ಲಿ ಇದು ದೃಢವಾದ ಮೈಲುಗಲ್ಲಾಗಿದೆ ‘ ಎಂದರು . ಟ್ರ್ಯೂಕಾಲರ್ ಕಾಲರ್ ತನ್ನ ವ್ಯವಹಾರ ಶ್ರೇಣಿಯನ್ನು ವಿಸ್ತರಿಸುತ್ತಿದೆ . ಟ್ರ್ಯೂಕಾಲರ್ ಕಾಲರ್ ಫಾರ್ ಬ್ಯುಸಿನೆಸ್‌ನಂತಹ ಸೇವೆಗಳನ್ನು ನೀಡಲಿದೆ . ಬ್ಲೂವೇಲರ್ ಮೂಲಕ ಹತ್ತಿರದ ಬಳಕೆದಾರರು ಸಣ್ಣ ವ್ಯವಹಾರಗಳನ್ನು ಆವಿಷ್ಕರಿಸಲು ಪ್ರಕ್ರಿಯೆಯನ್ನು ಇದು ಸರಳವಾಗಿಸುತ್ತದೆ . ಟ್ರ್ಯೂವೀಲರ್ ಪ್ರಿಯಾರಿಟಿ ಎಂಬ ಮತ್ತೊಂದು ವೈಶಿಷ್ಟ್ಯ ಉದ್ಯಮಗಳಿಂದ ಪ್ರಸ್ತುತವಾದ ಕರೆಗಳನ್ನು ಗುರುತಿಸುತ್ತದೆ . ಇವುಗಳನ್ನು ಸ್ವಾಮ್ ಕರೆಗಳಿಂದ ಪ್ರತ್ಯೇಕಿಸುತ್ತದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.