ಕರ್ನಾಟಕ ಉಚ್ಚ ನ್ಯಾಯಾಲಯ ಲಿಂಗಾಯತ ಗಾಣಿಗರು ಮೀಸಲಾತಿ 2ಎ ಅಡಿಯಲ್ಲಿ ಬರುವುದಿಲ್ಲವೆಂದು ತೀರ್ಪು ನೀಡಿದೆ . ಆದರೂ ಸಹ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ

ಕೆಲವರು ಗಾಣಿಗರ ಹೆಸರಿನಲ್ಲಿ ದಿನಾಂಕ : 11 . 02 . 2020 ರ ಮಂಗಳವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಗಾಣಿಗರ ಸಮಾಜದ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಯ ವಿಷಯವಾಗಿ ಧರಣಿ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ . ಅದರಲ್ಲಿ ಪ್ರಮುಖವಾಗಿ ಗುರಣ್ಣ ಜಿ . ಗೋಡಿ ಮತ್ತು ಬಸವರಾಜ ರಾಯಪ್ಪ ರಂಗೇನಹಳ್ಳಿ ಇವರು ಲಿಂಗಾಯತರಾಗಿದ್ದು , ಧರಣಿಗೆ ಕರೆ ನೀಡಿದ್ದಾರೆ . ಇವರು ಲಿಂಗಾಯತ ಒಳಪಂಗಡಕ್ಕೆ ಸೇರಿದವರು . ಅವರು ಗಾಣಿಗ ಲಿಂಗಾಯತರು . ಅಖಿಲ ಕರ್ನಾಟಕ ಗಾಣಿಗರ ಸಂಘ 1972 ರಿಂದ ಅಸ್ತಿತ್ವದಲ್ಲಿದೆ . ಜ್ಯೋತಿಫಣ ಗಾಣಿಗರ ಸಂಘ 1966 ರಿಂದ ಅಸ್ತಿತ್ವದಲ್ಲಿದೆ . ಈ ಎರಡು ಸಂಘದ ಅಧ್ಯಕ್ಷರಾಗಲಿ , ಪದಾಧಿಕಾರಿಗಳಾಲಿ ಧರಣಿಗೆ ಕರೆ ನೀಡಿರುವುದಿಲ್ಲ . ಗುರಣ್ಣ ಜಿ . ಗೋಡಿ ಬಿಜಾಪುರ ಜಿಲ್ಲೆಯಲ್ಲಿ ಲಿಂಗಾಯತರು , ಬೆಂಗಳೂರು ನಗರದಲ್ಲಿ ಗಾಣಿಗರಿಗೆ ಸಿಗುತ್ತಿರುವ ಸೌಲಭ್ಯವನ್ನು ಕಸಿದುಕೊಳ್ಳಲು ಗಾಣಿಗರು ಎಂದು ಹೇಳಿಕೊಳ್ಳುತ್ತಿದ್ದಾರೆ . ಕರ್ನಾಟಕ ಉಚ್ಚ ನ್ಯಾಯಾಲಯ ಲಿಂಗಾಯತ ಗಾಣಿಗರು ಮೀಸಲಾತಿ 2ಎ ಅಡಿಯಲ್ಲಿ ಬರುವುದಿಲ್ಲವೆಂದು ತೀರ್ಪು ನೀಡಿದೆ . ಆದರೂ ಸಹ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ . ಗುರಣ್ಣ ಜಿ . ಗೋಡಿಯವರು ಉಪಮುಖ್ಯಮಂತ್ರಿಗಳಾದ ಶ್ರೀ ಲಕ್ಷ್ಮಣ ಸವದಿಯವರು ಗಾಣಿಗರ ಜನಾಂಗಕ್ಕೆ ಸೇರಿದವರೇ ? ಅಥವಾ ಲಿಂಗಾಯತರೇ ? ಎಂಬುದನ್ನು ಸಾರ್ವಜನಿಕವಾಗಿ ಸಾಭೀತು ಮಾಡಲಿ , ಇವರ ನಿಜಬಣ್ಣ ಬಯಲಾಗುತ್ತದೆ .

ಗಾಣಿಗ ಜನಾಂಗದವರಾಗಲಿ , ಸಂಘದ ಪದಾಧಿಕಾರಿಗಳಾಗಲಿ ಧರಣಿಗೆ ಕರೆ ನೀಡಿರುವುದಿಲ್ಲ . ಆದ್ದರಿಂದ ಗಾಣಿಗ ಕುಲ ಭಾಂದವರು ಆ ಧರಣಿಯಿಂದ ದೂರ ಉಳಿಯಲು ಕೋರಲಾಗಿದೆ . ನಮ್ಮ ಸಮಸ್ಯೆಯನ್ನು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬಗೆಹರಿಸಿಕೊಳ್ಳಲು ಸಾಧ್ಯವಿದೆ . ಇದನ್ನು ಗಾಣಿಗ ಕುಲಬಾಂಧವರು ತಮ್ಮ ಭವಿಷ್ಯದ ದೃಷ್ಟಿಯಿಂದ ಅರ್ಥ ಮಾಡಿಕೊಳ್ಳಬೇಕು .

ಬಿ.ವಿ . ನರಸಿಂಹಯ್ಯ

ಅಧ್ಯಕ್ಷರು – ಜ್ಯೋತಿಫಣ ಗಾಣಿಗರ ಸಂಘ

ಎಂ . ಎಸ್ . ಶ್ರೀನಿವಾಸಮೂರ್ತಿ , ಅಧ್ಯಕ್ಷರು – ಅಖಿಲ ಕರ್ನಾಟಕ ಗಾಣಿಗರ ಸಂಘ

ರಂಗರಾಜು

ಉಪಾಧ್ಯಕ್ಷರು-ಅಖಿಲ ಕರ್ನಾಟಕ ಗಾಣಿಗರ ಸಂಘ

ಮುನಿಶೆಟ್ಟಿ

ಪ್ರಧಾನ ಕಾರ್ಯದರ್ಶಿ – ಅಖಿಲ ಕರ್ನಾಟಕ ಗಾಣಿಗರ ಸಂಘ

ಎಂ . ಆರ್ . ರಾಜಶೇಖರ್

ಕಾರ್ಯದರ್ಶಿ – ಅಖಿಲ ಕರ್ನಾಟಕ ಗಾಣಿಗರ ಸಂಘ

ಅನಂತು

ಪ್ರಧಾನ ಕಾರ್ಯದರ್ಶಿ – ಜ್ಯೋತಿಫಣ ಗಾಣಿಗರ ಸಂಘ

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.