ಬೆಂಗಳೂರಿನ ಓಂಕಾರ ಆಶ್ರಮ ಮಹಾಸಂಸ್ಥಾನದ ಆವರಣದಲ್ಲಿರುವ ಶ್ರೀ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ ದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಮಹಾಶಿವರಾತ್ರಿ

ಬೆಂಗಳೂರಿನ ಓಂಕಾರ ಆಶ್ರಮ ಮಹಾಸಂಸ್ಥಾನದ ಆವರಣದಲ್ಲಿರುವ ಶ್ರೀ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ ದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಮಹಾಶಿವರಾತ್ರಿಯ ಅಂಗವಾಗಿ ದಿನಾಂಕ : 21 – 02 2020ರಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು , ರಥೋತ್ಸವ , ಪಲ್ಲಕ್ಕಿ ಉತ್ಸವ , ಭಜನೆ , ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿದ ಜಾನಪದ ಮೇಳಗಳು ಭಾಗವಹಿಸುತ್ತಿವೆ .

ಆ ದಿವಸ ದರ್ಶನಾರ್ಥಿಗಳಾಗಿ ಆಗಮಿಸುವ ಎಲ್ಲಾ ಭಕ್ತರಿಗೂ ಓಂಕಾರೇಶ್ವರ ಜ್ಯೋತಿರ್ಲಿಂಗದ ಗರ್ಭಗುಡಿಗೆ ಪ್ರವೇಶಿಸಿ ದರ್ಶನ ಮತ್ತು ಓಂಕಾರೇಶ್ವರನಿಗೆ ಸ್ವಹಸ್ತದಿಂದ ಗಂಗಾಜಲಾಭಿಷೇಕವನ್ನು ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ . – ಈ ಎಲ್ಲಾ ಕಾರ್ಯಕ್ರಮದ ಸಂಪೂರ್ಣ ವಿವರಗಳನ್ನು ತಮ್ಮ ಪತ್ರಿಕಾ / ದೃಶ್ಯಮಾಧ್ಯಮಗಳಲ್ಲಿ ಸಾರ್ವಜನಿಕರಿಗೆ ಪ್ರಕಟಿಸುವಮೂಲಕ ಈ ಮಹತ್ಕಾರ್ಯವನ್ನು ಯಶಸ್ವಿಗೊಳಿಸಬೇಕಾಗಿ ಕಳಕಳಿಯ ಮನವಿ .

ಕೆ . ಭಾಸ್ಕರ್

ಕಾರ್ಯದರ್ಶಿಗಳು

9740066436 / 9449631340