ವಿಶ್ವಜ್ಞಾನಿ ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ರವರ ಜಯಂತಿಯ ಶುಭಾಷಯಗಳು – ಜಿ.ಎಸ್.ಗೋಪಾಲ್ ರಾಜ್

ವಿಶ್ವಜ್ಞಾನಿಬಾಬಾ ಸಾಹೇಬ್ ಡಾ.ಬಿ. ಆರ್. ಅಂಬೇಡ್ಕರ್ ಜಯಂತಿಯ ಶುಭಾಷಯಗಳು
ಇತಿಹಾಸ ಚಿಂತಕ, ಮಾನವ ಶಾಸ್ತ್ರ ವಿಮರ್ಶಕ, ಸಮಾಜ ಶಾಸ್ತ್ರಜ್ಞ, ತತ್ವಜ್ಞಾನಿ, ಸಂವಿಧಾನ ಶಿಲ್ಪಿ, ಅಧುನಿಕ ಭಾರತದ ಪಿತಾಮಹ, ದಲಿತ ಮತ್ತು ಮಹಿಳೆಯರ ಉದ್ಧಾರಕ, ಕಾನೂನ ತಜ್ಞ, ಮಾನವಾಧಿಕಾರದ ಸಂರಕ್ಷಕ, ಮಹಾನ್ ಲೇಖಕ, ಪತ್ರಕರ್ತ, ಸಂಶೋಧಕ, ಪಾಲಿ ಸಾಹಿತ್ಯಾಸಕ್ತ, ಬೌದ್ಧ ಸಾಹಿತ್ಯದ ಅಧ್ಯಯನ ಕರ್ತ, ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವ, ಕೂಲಿ ಕಾರ್ಮಿಕರ ಬಂಧು, ಮಹಾನ್ ರಾಜನೀತಿಜ್ಞ, ವೈಜ್ಞಾನಿಕ ಮನೋಭಾವ ಸಮರ್ಥಕ, ಸಂಸ್ಕೃತ ಮತ್ತು ಹಿಂದೂ ಸಾಹಿತ್ಯದ ಅಪಾರ ಅಧ್ಯಯನಗೈದ ಬಾಬಾ ಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ರವರ 129 ನೇ ಜಯಂತಿ ನಿಮಿತ್ಯ ಲೇಖನ.
ಮರಾಠಿ, ಸಂಸ್ಕೃತ, ಗುಜರಾತಿ, ಪಾರ್ಸಿ ಜರ್ಮನ್, ಫ್ರೆಂಚ್ ಮತ್ತು ಪಾಲಿ ಭಾಷೆಗಳನ್ನು ಮಾತನಾಡ ಬಲ್ಲ ಡಾ ಅಂಬೇಡ್ಕರ್ ಮೂಕ ನಾಯಕ ಬಹಿಷ್ಕೃತ ಭಾರತ ಸಮತಾ, ಜನತಾ, ಮತ್ತು ಪ್ರಬುದ್ಧ ಭಾರತ ಪತ್ರಿಕೆಗಳನ್ನು ಕಾಲಾನುಸಾರ ನಡೆಸಿ ಕೊಂಡು ಬರುತ್ತಿದ್ದರು.

ಬಹಿಷ್ಕೃತ ಹಿತಕಾರಣಿ ಸಭಾ ಸಮತಾ ಸೈನಿಕ ದಳ, ಸ್ವತಂತ್ರ ಕಾರ್ಮಿಕ ಪಕ್ಷ, ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಭಾರತೀಯ ಬೌದ್ಧ ಮಹಾಸಭಾ ಡಿಪ್ರೆಸ್ ಕ್ಲಾಸ್ ಎಜುಕೇಶನ್ ಸೊಸೈಟಿ, ಪೀಪಲ್ಸ್ ಎಜುಕೇಷನ್ ಸೊಸಾಯಿಟಿ, ಸಿದ್ಧಾರ್ಥ ಕಾಲೇಜು (ಮುಂಬೈ), ಮಿಲಿಂದ ಕಾಲೇಜು (ಔರಂಗಾಬಾದ್) ಹೀಗೆ ಅನೇಕ ಸಾಮಾಜಿಕ, ರಾಜಕೀಯ, ಧಾರ್ಮಿಕ ಶೈಕ್ಷಣಿಕ ಸಂಘ ಸಂಸ್ಥೆಗಳನ್ನು ಸ್ಥಾಪಿಸಿದರು.
ಮಹಾಡ್ ಚೌಡರ ಕೆರೆ ನೀರು ಮುಟ್ಟುವ ಚಳವಳಿ, ಮೊಹಾಲಿ (ಧುಲೆ) ಚಳವಳಿ, ಅಂಬಾದೇವಿ ಮಂದಿರ ಚಳವಳಿ, ಪುಣೆ ಕೌನ್ಸಿಲ್ ಚಳವಳಿ, ಪರ್ಬತಿ ಚಳವಳಿ, ನಾಗಪುರ ಚಳವಳಿ, ಕಾಳಾರಾಂ ಮಂದಿರ ಪ್ರವೇಶ ಚಳವಳಿ, ಲಕ್ನೌ ಚಳವಳಿ, ಮುಖೇಡ ಚಳವಳಿ ಹೀಗೆ ಅನೇಕ ಚಳವಳಿಗಳನ್ನು ನಡೆಸಿ ಸಾಮಾಜಿಕ ನ್ಯಾಯವನ್ನು ಒದಗಿಸಿ ಕೊಟ್ಟಿದ್ದಾರೆ.

ನೀರಿಗಾಗಿ ಚಳವಳಿ ನಡೆಸಿದವರಲ್ಲಿ ಡಾ. ಅಂಬೇಡ್ಕರ್ ವಿಶ್ವದಲ್ಲಿಯೇ ಮೊದಲಿಗರು. ಲಂಡನ್ ವಿಶ್ವ ವಿದ್ಯಾಲಯ ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ಗುರುತಿಸಬಲ್ಲ ಮಹಾ ಮಾನವ ಡಾ ಅಂಬೇಡ್ಕರ್. ಲಂಡನ್ ವಿಶ್ವ ವಿದ್ಯಾಲಯದ ಇನ್ನೂರು ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನ ಪಡೆದು ಸನ್ಮಾನಿತ ಮೊದಲ ಭಾರತೀಯ ವಿದ್ಯಾರ್ಥಿ ಡಾ ಅಂಬೇಡ್ಕರ್. ವಿಶ್ವದ ಆರನೇ ಮಹಾನ್ ಪುರುಷರಲ್ಲಿ ಡಾ ಅಂಬೇಡ್ಕರ್ ಒಬ್ಬರು. ಲಂಡನ್ ವಿಶ್ವ ವಿದ್ಯಾಲಯದಲ್ಲಿ ಡಿಎಸ್ಸಿ ಪದವಿ ಪಡೆದವರಲ್ಲಿ ಮೊದಲನೇ ಮತ್ತು ಕೊನೆಯ ಭಾರತೀಯ ಡಾ ಅಂಬೇಡ್ಕರ್. ಲಂಡನ್ ವಿಶ್ವ ವಿದ್ಯಾಲಯದಲ್ಲಿ ಎಂಟು ವರ್ಷಗಳ ಪಠ್ಯಕ್ರಮವನ್ನು ಕೇವಲ ಮೂರು ವರ್ಷಗಳಲ್ಲಿ ಮುಗಿಸಿದ ಮಹಾಮಾನವ ಡಾ ಅಂಬೇಡ್ಕರ್. “ದಿ ಪ್ರಾಬ್ಲಂ ಆಫ್ ರುಪಿ” ಪ್ರಬಂಧವನ್ನು ಡಾಕ್ಟರ್ ಆಫ್ ಸೈನ್ಸ್ ಅಧ್ಯಯನದಲ್ಲಿ ಮಂಡಿಸಿದರು. ಈ ವಿಷಯಕ್ಕಾಗಿ “ರಿಸರ್ವ್ ಬ್ಯಾಂಕ್” ಭಾರತದಲ್ಲಿ ಸ್ಥಾಪನೆಯಾಗುವಲ್ಲಿ ಡಾ ಅಂಬೇಡ್ಕರ್ ಕೊಡುಗೆ ಅಪಾರ.
BA, MA, MSc, DSc, Ph D, D Litt, Bar – at – Law ಹೀಗೆ ವಿದ್ವತ್ತು ಹೊಂದಿದ್ದ ಡಾ ಅಂಬೇಡ್ಕರ್ ಬಳಿ 13 ಸಾವಿರ ಇಂಗ್ಲಿಷ್ ಪುಸ್ತಕಗಳು, 3 ಸಾವಿರ ರಾಜ್ಯ ಶಾಸ್ತ್ರ ಪುಸ್ತಕಗಳು, 300 ಯುದ್ಧ ಶಾಸ್ತ್ರ ಪುಸ್ತಕಗಳು, 1100 ಅರ್ಥ ಶಾಸ್ತ್ರ ಪುಸ್ತಕಗಳು, 26000 ಸಾವಿರ ಇತಿಹಾಸ ಪುಸ್ತಕಗಳು 2000 ಧಾರ್ಮಿಕ ಪುಸ್ತಕಗಳು, 5000 ಕಾನೂನು ಪುಸ್ತಕಗಳು, 200 ಸಂಸ್ಕೃತ ಪುಸ್ತಕಗಳು, 800 ಮರಾಠಿ ಪುಸ್ತಕಗಳು, 500 ಹಿಂದಿ ಪುಸ್ತಕಗಳು, 600 ತತ್ವ ಜ್ಞಾನ ಪುಸ್ತಕಗಳು, 1000 ರಿಪೊರ್ಟ್ಸ್ ಗಳು, 400 ಸಾಂದರ್ಭಿಕ ಸಾಹಿತ್ಯ ಪುಸ್ತಕಗಳು, 600 ಪತ್ರ ಮತ್ತು ಭಾಷಣ ಪುಸ್ತಕಗಳು, 12000 ಬಯೋಗ್ರಫಿ ಪುಸ್ತಕಗಳು, 1-29 ಎನ್ಸಾಕ್ಲೊಪಿಡಿಯಾ ಆಫ್ ಬ್ರಿಟನಿಕಾ ಭಾಗಗಳು, 1-15 ಎನ್ಸಾಕ್ಲೊಪಿಡಿಯಾ ಆಫ್ ಸೊಸಿಯಲ್ ಸೈನ್ಸ್, 1-12 ಕೆಥಲಿಕ್ ಎನ್ಸಾಕ್ಲೊಪಿಡಿಯಾ, ಎನ್ಸಾಕ್ಲೊಪಿಡಿಯಾ ಆಫ್ ಎಜುಕೇಶನ್, 2000 ಬುದ್ಧ ಧಮ್ಮ, ಪಾಲಿ ಸಾಹಿತ್ಯ, ಮರಾಠಿ ಸಾಹಿತ್ಯ, 2305 ವಿವಿಧ ವಿಷಯಗಳ ಪುಸ್ತಕಗಳು 527 ಕ್ಕೂ ಹೆಚ್ಚು ಬೇರೆ ಬೇರೆ ವಿಷಯಗಳ ಬಗ್ಗೆ ತಮ್ಮ ಜೀವನದಲ್ಲಿ ಭಾಷಣಗಳನ್ನು ಮಾಡಿದ್ದಾರೆ. ಇವೆಲ್ಲವುಗಳ ಅನುಭವದಿಂದಾಗಿ ಡಾ ಅಂಬೇಡ್ಕರ್ “ಭಾರತದ ಸಂವಿಧಾನ” ರಚಿಸಿದರು.

ಹೆಂಡತಿ, ಮಕ್ಕಳು, ಕುಟುಂಬದ ಕಡೆಗೆ ಹೆಚ್ಚು ಒತ್ತು ಕೊಡದೇ ಭಾರತದ ಅಭ್ಯದಯಕ್ಕಾಗಿ ಶ್ರಮಿಸಿದ ಡಾ ಅಂಬೇಡ್ಕರ್ ರವರಿಗೆ ಮರಣೋತ್ತರ “ಭಾರತ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. “The Greatest man in the world “ಎಂದು ಕೊಲಂಬಿಯಾ ವಿಶ್ವ ವಿದ್ಯಾಲಯವು , “Universe maker” ಎಂದು ಆಕ್ಸ್‌ಫರ್ಡ್ ವಿಶ್ವ ವಿದ್ಯಾಲಯವು, “The greatest Indian” ಎಂದು CNN, IBN, ಮತ್ತು History ಗಳು ಡಾ ಅಂಬೇಡ್ಕರ್ ರವರಿಗೆ ಬಿರುದು ನೀಡಿ ಗೌರವಿಸಿದೆ

ಜಿ.ಎಸ್.ಗೋಪಾಲ್ ರಾಜ್

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.