ಮಾನವಿಯತೆಯನ್ನು ಮೆರೆದ ಜಗಜ್ಯೋತಿಯವರು. ಬಸವಣ್ಣನವರ ಪ್ರತಿಭಾಗರ್ಭದಿಂದುಸಿದ ಕನ್ನಡ ಸಂಸ್ಕೃತಿ ಇಂದಿನ ಜಗತ್ತಿನಲ್ಲಿಯೂ ಎಣೆಯಿಲ್ಲದ್ದು.

ಜನ ಜನರ ನಡುವೆ, ಸಮಾಜ ಸಮಾಜಗಳ ನಡುವೆ ಭೇದಗಳ ಗೋಡೆಯೆಬ್ಬಿಸುವ ವ್ಯವಸ್ಥೆ ಧರ್ಮವಲ್ಲ, ಜಾತೀಯತೆಯನ್ನು ಅಸ್ಪೃಶ್ಯತೆಯನ್ನು ನಿರ್ನಾಮಗೊಳಿ‌ಸಿದ ಹೊರತು ಸಮಾಜದಲ್ಲಿ ಶಾಂತಿಯಿಲ್ಲ, ಸ್ವಾತಂತ್ರ್ಯವಿಲ್ಲ, ಪ್ರಜಾಸತ್ತೆಯಿಲ್ಲವೆಂದು ನಿರ್ಧರಿಸಿ, ಧಾರ್ಮಿಕ ಕ್ರಾಂತಿಯ ಜತೆಜತೆಯಲ್ಲಿಯೇ ಸಾಮಾಜಿಕ ಕ್ರಾಂತಿಯನ್ನು ನಡೆಸಿದ ಮ‌ಹಾನ್ ಕ್ರಾಂತಿಕಾರರು ಶ್ರೀ ಬಸವೇಶ್ವರರು. ಪಾಶ್ಚಾತ್ಯ ರಾಷ್ಟ್ರಗಳು ಅಜ್ಙಾನದ ಕತ್ತಲಲ್ಲಿ ತಡಕಾಡುತ್ತಿದ್ದಾಗ, ಇಡೀ ಜಗತ್ತು ಸ್ತ್ರೀಯರನ್ನು ಗುಲಾಮರಂತೆ ಕಾಣುತ್ತಿದ್ದಾಗ, ಸ್ತ್ರೀಯರಿಗೂ ಲಿಂಗದೀಕ್ಷೆ ನೀಡಿ, ಸರ್ವಾಂಶಗಳಲ್ಲಿಯೂ ಅವಳು ಪುರುಷನಿಗೆ ಸಮಾನಳೆಂದು ಘೋಷಿಸಿ, ಮಾನವಿಯತೆಯನ್ನು ಮೆರೆದ ಜಗಜ್ಯೋತಿಯವರು. ಬಸವಣ್ಣನವರ ಪ್ರತಿಭಾಗರ್ಭದಿಂದುಸಿದ ಕನ್ನಡ ಸಂಸ್ಕೃತಿ ಇಂದಿನ ಜಗತ್ತಿನಲ್ಲಿಯೂ ಎಣೆಯಿಲ್ಲದ್ದು. ಅದೊಂದು ಸಮಗ್ರ ನಿತ್ಯನೂತನ ಪರಿಪೂರ್ಣ.ಎಳವೆಯಲ್ಲಿಯೇ ಆತ್ಮಸಾಕ್ಷಾತ್ಕಾರವನ್ನು ಕಂಡುಕೊಂಡ ಬಸವೇಶ್ವರರಿದ್ದಲ್ಲಿಗೆ, ನೂರಾರು ಸಾವಿರಾರು ಮಂದಿ ಶರಣರು ದೇಶದ ನಾನಾ ಭಾಗಗಳಿಂದ ಬಂದುದು ಸಾಮಾನ್ಯ ಸಂಗತಿಯಲ್ಲ.

ಸ್ಥಾನ, ಜಾತಿ, ಲಿಂಗ, ವರ್ಗ ಭೇದವಿಲ್ಲದೆ ಎಲ್ಲರೂ ಅನುಭವಮಂಟಪದಲ್ಲಿ ಸೇರಿ, ಲೌಕಿಕ ಹಾಗೂ ಆಧ್ಯಾತ್ಮಿಕ ವಿಚಾರಗಳನ್ನು ಕುರಿತು ಚರ್ಚೆ ನಡೆಸುವಾಗ, ಚಿಂತನಾನುಭವಗಳ ಸಂಪರ್ಕ ಸಂಘರ್ಷ ಸಮಾಗಮಗಳಿಂದಾಗಿ ಹೂಸ ಹೂಸ ಭಾವಾಲೋಚನೆ ಅನುಭವಗಳು ‌ಸೂಕ್ಷ್ಮ ಪ್ರಕ್ರಿಯೆಗಳು ಸಂಜನಿಸುವುದುಂಟು.

-ಜಿ.ಎಸ್.ಗೋಪಾಲ್ ರಾಜ್
ಸಂಪಾಧಕರು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.