
ಕನ್ನಡ ನಾಡಿನ ಹೆಸರಾಂತ ಸಾಹಿತಿ, ಕವಿ, ಪದ್ಮಶ್ರಿ ಪ್ರೊಫೆಸರ್ ನಿಸಾರ್ ಅಹಮದ್ ಅವರ ನಿಧನವು ತುಂಬಾ ನೋವಿನ ಸಂಗತಿಯಾಗಿದೆ.
ನಿತ್ಯೋತ್ಸವ ಕವಿ ಎಂದೇ ಖ್ಯಾತರಾಗಿದ್ದ ಪ್ರೊ.ನಿಸಾರ್ ಅಹಮದ್ ಅವರ ಅಗಲಿಕೆಯಿಂದ, ಕನ್ನಡ ನಾಡಿನ ಒಬ್ಬ ಶ್ರೇಷ್ಟ ಕವಿ, ವಿಮರ್ಶಕ ಮತ್ತು ವೈಚಾರಿಕ ಬರಹಗಾರರನ್ನು ಕಳೆದುಕೊಂಡು, ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಅಗಲಿದ ಆತ್ಮಕ್ಕೆ, ಭಗವಂತನು ಚಿರಶಾಂತಿ ದಯಪಾಲಿಸಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ.
ವಿಶ್ವೇಶ್ವರ ಹೆಗಡೆ, ಕಾಗೇರಿ,
ಸಭಾಧ್ಯಕ್ಷರು,
ಕರ್ನಾಟಕ ವಿಧಾನಸಭೆ
City Today News
(citytoday.media)
9341997936