
ಕೋವಿಡ್ 19 ಲಾಕ್ಡೌನ್ ಸಮಯದಲ್ಲಿ ಭಾರತ ಪ್ರಮುಖ ಎಜುಟೆಕ್ ಪ್ಲಾಟ್ಫಾರಂ ಬ್ರೈಟ್ ಟುಟೀ ಇಂದ 6 ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಲೈವ್ ಕ್ಲಾಸ್ಗಳು
ಕೋವಿಡ್ 19 ಹರಡುವುದನ್ನು ತಡೆಯುವ ಉದ್ದೇಶದಿಂದ ಶಾಲೆಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚಿರುವುದರಿಂದಾಗಿ, ವಿದ್ಯಾರ್ಥಿಗಳಲ್ಲಿ ಆನ್ಲೈನ್ ಕಲಿಕೆ ಹೆಚ್ಚು ಚಾಲ್ತಿಗೆ ಬಂದಿದೆ. ಬ್ರೈಟ್ ಟುಟೀಯಂತಹ ತಂತ್ರಜ್ಞಾನ ಆಧರಿತ ಸ್ಟಾರ್ಟಪ್ಗಳಿಂದಾಗಿ ವಿದ್ಯಾರ್ಥಿಗಳು ತಮ್ಮ ಮನೆಯಲ್ಲೇ ಆರಾಮವಾಗಿ ಕಲಿಕೆಯನ್ನು ಮುಂದುವರಿಸಬಹುದಾಗಿದೆ.
ನವದೆಹಲಿ ಮೂಲದ ಎಜುಟೆಕ್ ಕಂಪನಿ ಮತ್ತು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆನ್ಲೈನ್ ಕಲಿಕೆ ಪ್ಲಾಟ್ಫಾರಂ ಬ್ರೈಟ್ ಟುಟೀ ಭಾರತದಲ್ಲಿ ವಿವಿಧ ಶಿಕ್ಷಣ ಮಂಡಳಿಗಳಲ್ಲಿ ಓದುತ್ತಿರುವವರಿಗೆ 6 ರಿಂದ 8ನೇ ತರಗತಿಯವರೆಗಿನ ಮಕ್ಕಳಿಗೆ ಉಚಿತ ಲೈವ್ ಕ್ಲಾಸ್ಗಳನ್ನು ಯೂಟ್ಯೂಬ್ನಲ್ಲಿ ಒದಗಿಸುವುದಾಗಿ ಘೋಷಿಸಿದೆ.
ಬ್ರೈಟ್ ಟುಟೀ ಆರಂಭಿಸಿದ ಲೈವ್ ಲೆಕ್ಚರ್ಗಳು ತರಗತಿವಾರು ಶೆಡ್ಯೂಲ್ ಅನ್ನು ಫಾಲೋ ಮಾಡುತ್ತವೆ. ಉದಾಹರಣೆಗೆ, 6ನೇ ತರಗತಿಯ ಲೈವ್ ಸೆಷನ್ಗಳು ಮಧ್ಯಾಹ್ನ 11 ರಿಂದ 11.40 ರ ವರೆಗೆ ನಡೆಯುತ್ತದೆ. 7ನೇ ತರಗತಿಯ ಲೈವ್ 12 ಗಂಟೆಯಿಂದ 12.40ರ ವರೆಗೆ ನಡೆಯಲಿದೆ ಮತ್ತು 8ನೇ ತರಗತಿಯ ಲೈವ್ 1 ರಿಂದ 1.40ರ ವರೆಗೆ ನಡೆಯಲಿದೆ.
ಇತರ ಕೆಲವು ಸಂಸ್ಥೆಗಳು ಕೂಡ ಉಚಿತ ಕಲಿಕೆ ಸೌಲಭ್ಯವನ್ನು ಒದಗಿಸುತ್ತಿದ್ದು, ತನ್ನ ಪ್ಲಾಟ್ಫಾರಂ ಹೊರಗಡೆ ಉಚಿತವಾಗಿ ಸೇವೆಯನ್ನು ಒದಗಿಸುವಲ್ಲಿ ಬ್ರೈಟ್ ಟುಟೀ ಪ್ರಮುಖವಾದದ್ದು ಎಂದು ಪರಿಗಣಿಸಲ್ಪಟ್ಟಿದೆ. ಈ ಉಪಕ್ರಮದ ಮೂಲಕ ಎಡ್ ಟೆಕ್ ಸ್ಪೇಸ್ನಲ್ಲಿ ತನಗೆ ಹಾಗೂ ಇತರರಿಗೆ ಮಹತ್ವದ ಮೈಲಿಗಲ್ಲನ್ನು ಹಾಕಿಕೊಟ್ಟಿದೆ ಮತ್ತು ಇತರ ಸಂಸ್ಥೆಗಳೂ ಈ ವಿಧಾನವನ್ನು ಅನುಸರಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಈ ಉಪಕ್ರಮದ ಬಗ್ಗೆ ಮಾತನಾಡಿದ ಬ್ರೈಟ್ ಟುಟೀ ನಿರ್ದೇಶಕ ಮತ್ತು ಸಂಸ್ಥಾಪಕ ಅನಂತ್ ಗೋಯೆಲ್ “ಇಡೀ ಜಗತ್ತೇ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಶಟ್ಡೌನ್ ಆಗಿರುವುದರಿಂದ, ಈ ಶಟ್ಡೌನ್ ನಂತರ ಭಾರಿ ಪ್ರಮಾಣದಲ್ಲಿ ವಿದ್ಯಾರ್ಥಿಗಳು ನಮ್ಮ ಕಲಿಕೆ ಪ್ಲಾಟ್ಫಾರಂನಲ್ಲಿ ತೊಡಗಿಸಿಕೊಳ್ಳುತ್ತಿರುವದನ್ನು ನಾವು ಗಮನಿಸಿದ್ದೇವೆ. ವಿದ್ಯಾರ್ಥಿಗಳು ಮನೆಯಲ್ಲೇ ಸುರಕ್ಷಿತವಾಗಿದ್ದು, ಕಲಿಕೆಗೆ ಅನುವು ಮಾಡಿಕೊಡುವುದಕ್ಕಾಗಿ, ದೇಶಾದ್ಯಂತ ವಿದ್ಯಾರ್ಥಿಗಳಿಗೆ ಯೂಟ್ಯೂಬ್ ಮೂಲಕ ಉಚಿತ ತರಗತಿಗಳನ್ನು ನಡೆಸಲು ನಿರ್ಧರಿಸಿದ್ದೇವೆ.”
ಲಾಕ್ಡೌನ್ನಿಂದಾಗಿ ತೊಂದರೆಗೆ ಒಳಗಾಗಿರುವ 6 ರಿಂದ 10 ನೇ ತರಗತಿಯ 10 ಮಿಲಿಯನ್ ವಿದ್ಯಾರ್ಥಿಗಳಿಗೆ ಈ ಉಪಕ್ರಮ ಅನುಕೂಲವಾಗಲಿದೆ ಎಂದು ನಾವು ಭಾವಿಸಿದ್ದೇವೆ. ಜವಾಬ್ದಾರಿಯುತ ಕಾರ್ಪೊರೇಟ್ ಸಂಸ್ಥೆಯಾಗಿರುವ ಎಜುಟೆಕ್ ಉದ್ಯಮವು ಪ್ರಸ್ತುತ ಸನ್ನಿವೇಶದಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತದೆ ಎಂದು ನಾವು ಭಾವಿಸಿದ್ದೇವೆ.”
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಅಸಾಂಪ್ರದಾಯಿಕವಾದ ಹೊಸ ತಲೆಮಾರಿನ ಅತ್ಯಾಧುನಿಕ ಆನ್ಲೈನ್ ಕಲಿಕೆ ಮತ್ತು ಎಡ್ಟೆಕ್ ಸಂಸ್ಥೆ ಭಾರಿ ಜನಪ್ರಿಯತೆ ಗಳಿಸುತ್ತಿದೆ ಮತ್ತು ವಿವಿಧ ಉದ್ಯಮದ ಜನರು ಇದನ್ನು ಮೆಚ್ಚುತ್ತಿದ್ದಾರೆ. ಇದರ ಉಚಿತ ಕಲಿಕೆ ಆಪ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಭಾರಿ ಜನಪ್ರಿಯವಾಗಿದ್ದು, ಶಿಕ್ಷಣ ಪರಿಣಿತರು ಮತ್ತು ಎಜುಟೆಕ್ ಪ್ರತಿಸ್ಫರ್ಧಿಗಳ ಗಮನವನ್ನೂ ಸೆಳೆದಿದೆ.
City Today News
(citytoday.media)
9341997936