
McSpicy Chicken Burger
ದಕ್ಷಿಣ ಮಾರುಕಟ್ಟೆಗೆ ತಕ್ಕಂತೆ ತಯಾರಿಸಿದ ಉತ್ಪನ್ನವು ಉತ್ತಮ ಗುಣಮಟ್ಟದ ಕೋಳಿಯಿಂದ ತಯಾರಿಸಲ್ಪಟ್ಟಿದೆ ಮತ್ತು ಕೊನೆಯ ತುತ್ತಿನವರೆಗೆ ಮಸಾಲೆಭರಿತವಾಗಿದೆ
ಮುಂಬೈ, 8ನೇ ಮೇ 2020: ಸಂಪರ್ಕ ನಿಷೇಧದ (ಕ್ವಾರಂಟೈನ್) ಕಾರಣದಿಂದ ನಿಮ್ಮ ಆಹಾರದ ಬಯಕೆಗಳು ರಾಶಿಯಾಗಿದ್ದರೆ, ಇದೀಗ ಫ್ರೈಡ್ ಚಿಕನ್ ಬಯಕೆಯನ್ನು ಸಡಿಲಿಸುವ ಸಮಯ! ಮೆಕ್ಡೊನಾಲ್ಡ್ಸ್ ಇಂಡಿಯಾ ಈಗ ಅದರ ಮೆನುವಿನಲ್ಲಿ ಪೂರ್ತಿ ಹೊಸದಾದ ಮೆಕ್ಸ್ಪೈಸಿ ಫ್ರೈಡ್ ಚಿಕನ್ ಅನ್ನು ಹೊಂದಿದ್ದು ಅದು ನಿಮಗೆ ಚಿಕನ್ನ ಒಳ್ಳೆಯತನವನ್ನು ಮತ್ತು ಮಸಾಲೆಭರಿತ ಔತಣವನ್ನು ತರುತ್ತದೆ. ಮೆನುವಿನಲ್ಲಿರುವ ಈ ಹೊಸರುಚಿಯು ಕೊನೆಯ ತುತ್ತಿನವರೆಗೆ ಸುವಾಸನೆ ಮತ್ತು ಮಸಾಲೆಯಿಂದ ಕೂಡಿರುತ್ತದೆ ಎನ್ನುತ್ತದೆ.
ಹೊಸ ಮೆಕ್ಸ್ಪೈಸಿ ಫ್ರೈಡ್ ಚಿಕನ್ನಲ್ಲಿ ಪ್ರೋಟೀನ್ನಿಂದ ಸಮೃದ್ಧವಾಗಿದೆ, ಯಾವುದೇ ಸುವಾಸನೆ, ಬಣ್ಣಗಳು ಅಥವಾ ಸಂರಕ್ಷಕಗಳನ್ನು ಹೊಂದಿಲ್ಲ. ಮೆಕ್ಡೊನಾಲ್ಡ್ ಇಂಡಿಯಾ ಉತ್ತಮ ಗುಣಮಟ್ಟದ ಕೋಳಿಯನ್ನು ಬಳಸುತ್ತದೆ ಮತ್ತು ಅದಕ್ಕೆ ಯಾವುದೇ ಬೆಳವಣಿಗೆಯ ಪ್ರವರ್ತಕವನ್ನು ಬಳಸುವುದಿಲ್ಲ. ಮೆಕ್ಡೊನಾಲ್ಡ್ಸ್ ನ ಗುಣಮಟ್ಟ ಮತ್ತು ಸುರಕ್ಷತಾ ಪ್ರಕ್ರಿಯೆಯ ಒಂದು ಭಾಗವಾಗಿ, ಕೋಳಿಯು ತೋಟದಿಂದ ತಟ್ಟೆಗೆ ಬರುವ ಹಾದಿಯನ್ನು 100% ಪತ್ತೆಹಚ್ಚಬಹುದೆಂದು ಖಚಿತಪಡಿಸಿಕೊಳ್ಳಲು ಅದು 64 ಅನನ್ಯ ಪರೀಕ್ಷೆಗಳ ಮೂಲಕ ಹಾದುಹೋಗುತ್ತದೆ, ಹಾಗೂ ಸಂಪೂರ್ಣವಾಗಿ ಸುರಕ್ಷಿತ ಮತ್ತು ಆರೋಗ್ಯಕರವಾಗಿದೆ ಎಂದು ಖಾತ್ರಿಪಡಿಸುತ್ತದೆ.
ಮೆಕ್ಡೊನಾಲ್ಡ್ಸ್ ಯಾವಾಗಲೂ ಸ್ಥಳೀಯ ಸಂವೇದನೆಗಳ ಬಗ್ಗೆ ತಿಳಿದಿರುತ್ತದೆ. ನಮ್ಮ ಮಾರುಕಟ್ಟೆಯಲ್ಲಿರುವ ಎಲ್ಲಾ ಮೆಕ್ಡೊನಾಲ್ಡ್ಸ್ ರೆಸ್ಟೋರೆಂಟ್ಗಳು ಪತ್ಯೇಕ ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡಿಗೆಮನೆಗಳನ್ನು ಹೊಂದಿವೆ. ಸಸ್ಯಾಹಾರಿ ಉತ್ಪನ್ನಗಳನ್ನು ಸಂಗ್ರಹಣೆ, ಅಡುಗೆ ಮತ್ತು ಸೇವೆಯ ಎಲ್ಲಾ ವಿವಿಧ ಹಂತಗಳಲ್ಲಿಯೂ ಪ್ರತ್ಯೇಕವಾಗಿ ಇರಿಸಲಾಗುತ್ತದೆ.
ಹೊರಗಿನಿಂದ ಆಹಾರವನ್ನು ಆರ್ಡರ್ ಮಾಡುವ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ಮೆಕ್ಡೊನಾಲ್ಡ್ಸ್ ನಿಮ್ಮನ್ನು ನೋಡಿಕೊಳ್ಳುತ್ತಿದೆ ಎಂದು ಭರವಸೆ ಇಟ್ಟು ಆರಾಮವಾಗಿರಿ! ತನ್ನ ಅಡಿಗೆಮನೆಗಳಲ್ಲಿ ಮತ್ತು ಎಲ್ಲಾ ಸರಬರಾಜುದಾರರ ಕಡೆಗಳಲ್ಲಿ ನೈರ್ಮಲ್ಯದ ಉನ್ನತ ಗುಣಮಟ್ಟವನ್ನು ಕಾಪಾಡಿಕೊಂಡು, ಪ್ರಮುಖ ಕ್ಯೂಎಸ್ಆರ್, ನವೀನ ಸ್ಪರ್ಶರಹಿತ ಮೆಕ್ಡೆಲಿವರಿ ಸೇವೆಯನ್ನು ಪರಿಚಯಿಸಿದೆ. ಅಡುಗೆ ಮಾಡುವಾಗ, ಪ್ಯಾಕ್ ಮಾಡುವಾಗ ಅಥವಾ ತಲುಪಿಸುವಾಗ ಯಾರೂ ಬರಿಯ ಕೈಗಳಿಂದ ಆಹಾರವನ್ನು ಮುಟ್ಟುವುದಿಲ್ಲ ಮತ್ತು ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಎಲ್ಲಾ ಸಾಮಾಜಿಕ ಅಂತರದ ಕ್ರಮಗಳನ್ನು ಸರಿಯಾಗಿ ಅನುಸರಿಸಲಾಗುತ್ತದೆ ಎಂದು ಇದು ಖಾತ್ರಿಗೊಳಿಸುತ್ತದೆ.
ಮೆನುವಿನಲ್ಲಿನ ಈ ಹೊಸ ಫ್ರೈಡ್ ಚಿಕನ್ನ ಬಗ್ಗೆ ಮಾತನಾಡುತ್ತಾ ಶ್ರೀಮತಿ ಸೀಮಾ ಅರೋರಾ ನಂಬಿಯಾರ್, ಮೆಕ್ಡೊನಾಲ್ಡ್ಸ್ ಇಂಡಿಯಾ (ಪಶ್ಚಿಮ ಮತ್ತು ದಕ್ಷಿಣ) ದ ಮಾರ್ಕೆಟಿಂಗ್ ಮತ್ತು ಪೀಪಲ್ ರಿಸೋರ್ಸಸ್ ನ ಹಿರಿಯ ಉಪಾಧ್ಯಕ್ಷರು, ಹೇಳಿದರು, “ನಮ್ಮ ಗ್ರಾಹಕರು ಏನು ಬಯಸುತ್ತಾರೆ ಮತ್ತು ಇಷ್ಟಪಡುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಎಲ್ಲಾ ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿದೆ ಹಾಗೆ. ಮೆಕ್ ಸ್ಪೈಸಿ ಫ್ರೈಡ್ ಚಿಕನ್ ಅನ್ನು ನಮ್ಮ ಗ್ರಾಹಕರ ರುಚಿಯ ಆದ್ಯತೆಯ ಪ್ರಕಾರ ನಿರ್ದಿಷ್ಟವಾಗಿ ರಚಿಸಲಾಗಿದೆ. ಈ ಉತ್ಪನ್ನವನ್ನು ಘೋಸ್ಟ್ ಚಿಲ್ಲಿ ಪೆಪ್ಪರ್ನೊಂದಿಗೆ ಎಚ್ಚರಿಕೆಯಿಂದ ಮ್ಯಾರಿನೇಟ್ ಮಾಡಲಾಗಿದೆ ಮತ್ತು ಇದು ಕೊನೆಯ ತುತ್ತಿನವರೆಗೆ ಮಸಾಲೆಭರಿತವಾಗಿರುವುದನ್ನು ಖಾತ್ರಿಗೊಳಿಸಿಕೊಳ್ಳಲು ನಿಖರವಾಗಿ ಹುರಿಯಲಾಗಿದೆ – ಗ್ರಾಹಕರು ಅದನ್ನು ಇಷ್ಟಪಡುವ ರೀತಿಯಲ್ಲಿ.”
“ನಮ್ಮ ಗ್ರಾಹಕರ ಸುರಕ್ಷತೆ ಮತ್ತು ಯೋಗಕ್ಷೇಮ ನಮ್ಮ ಪ್ರಮುಖ ಆದ್ಯತೆಯಾಗಿದೆ. ಲಂಬವಾಗಿ ಸಂಯೋಜಿತ ಮತ್ತು ಮುಚ್ಚಿದ ಲೂಪ್ ಪೂರೈಕೆ ಸರಪಳಿ ಪ್ರಕ್ರಿಯೆಯನ್ನು ಹೊಂದಿರುವ ಉತ್ತಮ ಗುಣಮಟ್ಟದ ಕೋಳಿಯನ್ನು ನಾವು ಬಳಸುತ್ತೇವೆ. ಅದರ ಜೊತೆಗೆ, ಈಗ ಪ್ರಸ್ತುತಿಯಲ್ಲಿರುವ ಆರೋಗ್ಯ ಬಿಕ್ಕಟ್ಟಿನ ದೃಷ್ಟಿಯಿಂದ, ನಾವು ಅಡುಗೆಮನೆಯಲ್ಲಿ ನಮ್ಮ ಸುರಕ್ಷತೆ ಮತ್ತು ನೈರ್ಮಲ್ಯ ಅಭ್ಯಾಸಗಳನ್ನು ಮತ್ತಷ್ಟು ಬಲಪಡಿಸಿದ್ದೇವೆ ಮತ್ತು ಸ್ಪರ್ಶರಹಿತ ವಿತರಣೆಯನ್ನು ಪರಿಚಯಿಸಿದ್ದೇವೆ ” ಎಂದೂ ಸಹಾ ಅವರು ಸೇರಿಸಿದರು.
ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿನ ಮೆಕ್ಡೊನಾಲ್ಡ್ ರೆಸ್ಟೋರೆಂಟ್ಗಳನ್ನು ವೆಸ್ಟ್ ಲೈಫ್ ಡೆವಲಪ್ಮೆಂಟ್ ಲಿಮಿಟೆಡ್ (ಡಬ್ಲ್ಯುಡಿಎಲ್) ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಹಾರ್ಡ್ಕ್ಯಾಸಲ್ ರೆಸ್ಟೋರೆಂಟ್ ಪ್ರೈ. ಲಿಮಿಟೆಡ್ (ಎಚ್ಆರ್ಪಿಎಲ್) ಮೂಲಕ ನಿರ್ವಹಿಸುತ್ತದೆ.
ಹಾಗಾದರೆ, ಇಂದು ಊಟಕ್ಕೆ ಮೆಕ್ಸ್ಪೈಸಿ ಫ್ರೈಡ್ ಚಿಕನ್ ಇದ್ದರೆ ಹೇಗೆ? ಈಗಲೇ ಮೆಕ್ಡೊನಾಲ್ಡ್ಸ್ನಿಂದ ಆದೇಶಿಸಿ!
City Today News
(citytoday.media)
9341997936