ಬೆಂಗಳೂರು: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಅಗ್ರಿಬಜಾರ್ ಸಂಸ್ಥೆಯು ರೈತರ ನೋಂದಣಿ ಶುಲ್ಕವನ್ನು ಮನ್ನಾ ಮಾಡಿದೆ. ರೈತರು ಅಗ್ರಿಬಜಾರ್ ಆ್ಯಪ್ ಮೂಲಕ ತಮ್ಮ ಬೆಳೆಗಳನ್ನು ಖರೀದಿದಾರರಿಗೆ ನೇರವಾಗಿ ಮಾರಾಟ ಮಾಡಬಹುದು. ಈಗ ಸಂಸ್ಥೆಯು ರೈತರ ನೋಂದಣಿಯನ್ನು ಉಚಿತ ಮಾಡಿದೆ.
ಸಂಸ್ಥೆಯ ಈ ಪ್ರಸ್ತಾಪಕ್ಕೆ ರೈತ ಸಮುದಾಯದಿಂದ ಉತ್ಸಾಹಭರಿತ ಪ್ರತಿಕ್ರಿಯೆ ಬಂದಿದೆ. ಲಾಕ್ಡೌನ್ ನಿರ್ಬಂಧ, ಮಂಡಿ ಮುಚ್ಚುವಿಕೆ ಮತ್ತು ಲಾಜಿಸ್ಟಿಕ್ಸ್ ಸಮಸ್ಯೆಯಿಂದ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗದ ಸಣ್ಣ ಕೃಷಿ ಮಾಲೀಕರು ಇದರಿಂದ ಹೆಚ್ಚಿನ ಲಾಭವನ್ನು ಪಡೆದಿದ್ದಾರೆ. ಈ ಲಾಕ್ಡೌನ್ ಸಂದರ್ಭದಲ್ಲಿ ಅಗ್ರಿಬಜಾರ್ ಶೇಕಡ 400 ರಷ್ಟು ಹೆಚ್ಚಿನ ನೋಂದಣಿಯನ್ನು ದಾಖಲಿಸಿದೆ. ಆ್ಯಪ್ ಅಥವಾ ಟೋಲ್ ಫ್ರೀ ದೂರವಾಣಿ ಸಂಖ್ಯೆ ಸಹಾಯದಿಂದ ರೈತರು ನೋಂದಣಿ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ www.agribazaar.com
“ಕೋಮಿಡ್-19 ಪರಿಣಾಮ ಭಾರತೀಯ ಕೃಷಿ ತನ್ನ ದೊಡ್ಡ ಸವಾಲುಗಳನ್ನು ಎದುರಿಸಿದೆ. ಸರ್ಕಾರ ಮತ್ತು ಸ್ಥಳೀಯ ಆಡಳಿತದ ಪ್ರಯತ್ನದಿಂದ ಭಾರತೀಯ ರೈತನ ಡಿಜಿಟಲ್ ಪ್ರಯಾಣವು ಅಂತಹ ಕಠಿಣ ಸಮಯದಲ್ಲಿ ಪರಿಹಾರವನ್ನು ತಂದಿದೆ. ಇಂಥ ಸಮಯದಲ್ಲಿ ರೈತರು ನಮ್ಮ ಪ್ಲಾಟ್ ಫಾರ್ಮ್ ನಲ್ಲಿ ಶುಲ್ಕವಿಲ್ಲದೆ ನೋಂದಾಯಿಸಲು ಅನುವು ಮಾಡಿಕೊಡುವ ಮೂಲಕ ಪ್ರಸ್ತುತ ನಿರ್ಬಂಧಗಳ ಮಧ್ಯೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ಸಹಾಯ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. www.agribazaar.com ನಂತಹ ಡಿಜಿಟಲ್ ಪ್ಲಾಟ್ ಫಾರ್ಮ್ ಗಳಿಗೆ ಸ್ಥಳಾಂತರಗೊಳ್ಳುವುದು ಉತ್ತಮ ವ್ಯವಹಾರಗಳಿಗಾಗಿ ಅಲ್ಲ ಆದರೆ ಒಟ್ಟಾರೆ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ” ಎಂದು ಅಗ್ರಿಬಜಾರ್ ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ಸಿಇಒ ಅಮಿತ್ ಅಗರ್ವಾಲ್ ಹೇಳಿದರು.
“ಕಂಪನಿಯು ವಿವಿಧ ರಾಜ್ಯ ಸರ್ಕಾರ, ಕೃಷಿ ಸಂಘಗಳು ಮತ್ತು ಎಫ್ಪಿಒಗಳೊಂದಿಗೆ ತಮ್ಮ ಸದಸ್ಯರನ್ನು ಮತ್ತು ಹೆಚ್ಚಿನ ರೈತರನ್ನು www.agribazaar.com ಪ್ಲಾಟ್ ಫಾರ್ಮ್ ನಲ್ಲಿ ವ್ಯಾಪಾರ ಮಾಡಲು ಮಾತುಕತೆ ನಡೆಸುತ್ತಿದೆ. ಮಾರಾಟಗಾರ (ರೈತ) ಮತ್ತು ಖರೀದಿದಾರನು ನೇರವಾಗಿ ಆನ್ ಲೈನ್ ನಲ್ಲಿ ಸಂಪರ್ಕ ಹೊಂದಿದ್ದು ಸಮಯ ಮತ್ತು ವೆಚ್ಚವನ್ನು ಉಳಿಸುತ್ತದೆ. ಒಪ್ಪಂದ ಪೂರ್ಣಗೊಂಡ ನಂತರ ಅಗ್ರಿಬಜಾರ್ ನ ಸಿಬ್ಬಂದಿ ರೈತರಿಗೆ ಲಾಜಿಸ್ಟಿಕ್ಸ್ ಬೆಂಬಲವನ್ನು ಒದಗಿಸುತ್ತಾರೆ. ಸರಕುಗಳ ವಿತರಣೆಯಲ್ಲಿ ಕಂಪನಿಯ ಅಗ್ರಿಪೇ ಪ್ಲಾಟ್ ಫಾರ್ಮ್ ಮೂಲಕ ರೈತ ಸಮಯಕ್ಕೆ ಅನುಗುಣವಾಗಿ ಹಣವನ್ನು ಪಡೆಯುತ್ತಾನೆ.
City Today News
(citytoday.media)
9341997936