
ಬೆಂಗಳೂರು: ತಂತ್ರಜ್ಞಾನ ಆಧಾರಿತ ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು ಕೋವಿಡ್-19 ತಡೆಗೆ ಕಾರುಗಳಲ್ಲಿ ‘ಶೀಲ್ಡ್+’ ತಂತ್ರಜ್ಞಾವನ್ನು ಅಳವಡಿಸಿದೆ. ಗ್ರಾಹಕರು ತಮ್ಮ ಎಂಜಿ ಮೋಟಾರ್ ಕಾರನ್ನು ತಮ್ಮ ಧ್ವನಿಯ ಮೂಲಕವೇ ನಿಯಂತ್ರಿಸಬಹುದು. ಇದರಿಂದ ಅನಗತ್ಯವಾಗಿ ಕಾರನ್ನು ಮುಟ್ಟುವುದನ್ನು ಕಡಿಮೆ ಮಾಡುತ್ತದೆ.
ಅಷ್ಟೇ ಅಲ್ಲದೆ ಗ್ರಾಹಕರ ಮನೆಯ ಬಾಗಿಲಿಗೆ ಕೆಲವು ಸೇವೆಗಳನ್ನು ಸಂಸ್ಥೆಯು ಪರಿಚಯಿಸಿದೆ. ಸಂಸ್ಥೆಯು ನುರಿತ ಟೆಕ್ನಿಷಿಯನ್ ಗಳು ಗ್ರಾಹಕರ ಮನೆಯ ಬಾಗಿಲಿಗೆ ಬಂದು ಕಾರಿಗೆ ಸ್ಯಾನಿಟೈಜೆಷನ್, ಡಿಸ್ಇನ್ಫೆಕ್ಷನ್ ಮತ್ತು ಫ್ಯೂಮಿಗೇಷನ್ ಮಾಡುತ್ತಾರೆ.
ವಿವಿಧ ತಂತ್ರಜ್ಞಾನದ ತಿಳುವಳಿಕೆಗೆ ಗ್ರಾಹಕರು ಎಂಜಿ ಮೋಟಾರ್ ಶೋ ರೂಮ್ ಗೆ ಭೇಟಿ ನೀಡಿ ಸ್ಕಾö್ಯನ್ ಮಾಡಿದರೆ ವಿವಿಧ ತಂತ್ರಜ್ಞಾನದ ಮಾಹಿತಿಯು ಧ್ವನಿಯ ಮೂಲಕ ತಿಳಿದುಕೊಳ್ಳಬಹುದು.
ಕಾರಿನ ಒಳಗಿರುವ ಮನೋರಂಜನೆ ನೀಡುವ ಸಿಸ್ಟಮ್ ಅನ್ನು ಅಪ್ ಡೇಟ್ ಮಾಡಲು ಗ್ರಾಹಕರು ಶೋ ರೂಂಗೆ ಹೋಗುವ ಅಗತ್ಯವಿಲ್ಲ ಬದಲಾಗಿ ಓವರ್ ದಿ ಏರ್ ತಂತ್ರಜ್ಞಾನ ಮೂಲಕ ಕೂತಲ್ಲೇ ಮಾಡಿಕೊಳ್ಳಬಹುದು.
“ಉತ್ತಮ ಗ್ರಾಹಕ ಅನುಭವಗಳನ್ನು ಹೆಚ್ಚಿಸಲು ನಾವು ನಿರಂತರವಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನವನ್ನು ನೋಡುತ್ತೇವೆ. ಹೊಸ ಯುಗದಲ್ಲಿ ಡಿಜಿಟಲ್ ಮತ್ತು ಸಂಪರ್ಕ-ಕಡಿಮೆ ಅನುಭವಗಳು ಇನ್ನೂ ಹೆಚ್ಚು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಶೀಲ್ಡ್+ ಹೊಸ ಸಾಮಾನ್ಯದಲ್ಲಿ ನಮ್ಮ ಗ್ರಾಹಕರ ಸಂಪೂರ್ಣ ಅನುಕೂಲಕ್ಕಾಗಿ ಗುರಿಯನ್ನು ಹೊಂದಿದೆ” ಎಂಜಿ ಮೋಟಾರ್ ಇಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿ ಗೌರವ್ ಗುಪ್ತಾ ಹೇಳಿದರು.
City Today News
(citytoday.media)
9341997936