
ದಿನಾಂಕ 10-06-2020 ರಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ 22ನೇ ಸ್ಥಾಪನ ದಿನವನ್ನು ನ್ಯಾಷನಲಿಸ್ಟ್ ಯುವ ಕಾಂಗ್ರೆಸ್ಸಿನ ರಾಜ್ಯದ ಮುಖಂಡರುಗಳು ಹಾಗು ಕಾರ್ಯಕರ್ತರು ತಮ್ಮ ಪರಿಸರದಲ್ಲಿ ಗಿಡಗಳನ್ನು ನೆಡುವ ಮುಖಾಂತರ ಆಚರಿಸಲಾಯಿತು.

ಈ ಸಂದರ್ಭದಲ್ಲಿ ನ್ಯಾಷನಲಿಸ್ಟ್ ಯುವ ಕಾಂಗ್ರೆಸ್ಸಿನ ಎಲ್ಲಾ ಕಾರ್ಯಕರ್ತರು “ಮನೆ ಮನೆಗೆ ಗಿಡವನ್ನು ನೆಟ್ಟಿ ಪರಿಸರ ಉಳಿಸಿ ಅಭಿಯಾನಕ್ಕೆ” ರಾಜ್ಯಾಧ್ಯಕ್ಷರಾದ
ಶ್ರೀ ಬಿ.ಎನ್. ಲಕ್ಷ್ಮಣ್ ದೀಕ್ಷಿತ್
ಹಾಗು ವಿಶೇಷ ಆಹ್ವಾನಿತರಾದ ಚಲನಚಿತ್ರ ನಾಯಕ ನಟರಾದ ಶ್ರೀ ಬಾಲಾಜಿ ಶರ್ಮ ರವರು ಚಾಲನೆಯನ್ನು ನೀಡಿರುತ್ತಾರೆ. ಈ ದಿನ ಬೆಂಗಳೂರಿನ ವಿಲ್ಸನ್ ಗಾರ್ಡನ್ ನ ತಮ್ಮ ಕಚೇರಿಯಲ್ಲಿ ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದ ಸಮಾಜ ಸೇವಕ ಶ್ರೀ ಮೊಹಮ್ಮದ್ ಸಮಿಉಲ್ಲ ಅವರು ತಮ್ಮ ಬೆಂಬಲಿಗರೊಂದಿಗೆ ನ್ಯಾಷನಲಿಸ್ಟ್ ಯುವ ಕಾಂಗ್ರೆಸ್ಸಿನ ರಾಜ್ಯಾಧ್ಯಕ್ಷರು ಶ್ರೀ ಬಿ.ಎನ್. ಲಕ್ಷ್ಮಣ್ ದೀಕ್ಷಿತ್, ಉಪಾಧ್ಯಕ್ಷರು ಶ್ರೀ ಅವಿನಾಶ್, ಪ್ರಧಾನ ಕಾರ್ಯದರ್ಶಿ ಶ್ರೀ ವಿದೇಶ್, ಕಾರ್ಯದರ್ಶಿ ಶ್ರೀಮತಿ ಗೀತಾಂಜಲಿ (ಮಹಿಳಾ ಘಟಕ ), ಬೆಂಗಳೂರು ಅಧ್ಯಕ್ಷ ಶ್ರೀ ಸಂಜಯ್ ಕುಮಾರ್ ಹಾಗು ಬೆಂಗಳೂರು ಪ್ರಧಾನ ಕಾರ್ಯದರ್ಶಿ ಶ್ರೀ ಯತೀಶ್ ರವರ ಸಮ್ಮುಖದಲ್ಲಿ ನಮ್ಮ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ಸೇರ್ಪಡೆಗೊಂಡ ಮುಖಂಡರ ಹೆಸರು ಹಾಗು ನಮ್ಮ ಪಕ್ಷದಲ್ಲಿ ನೀಡಿರುವ ಹುದ್ದೆ ಕೆಳಕಂಡಂತಿದೆ
ಶ್ರೀ
ಮೊಹಮ್ಮದ್ ಸಮಿಉಲ್ಲ – ಪ್ರಧಾನ ಕಾರ್ಯದರ್ಶಿ, ಬೆಂಗಳೂರು ನಗರ.
-
ಶ್ರೀ.
ಬಿ.ಎನ್.ಲಕ್ಷ್ಮಣ್ ದೀಕ್ಷಿತ್, ರಾಜ್ಯಾಧ್ಯಕ್ಷರು.
City Today News
(citytoday.media)
9341997936