ಭ್ರಷ್ಟಾಚಾರ ಆರೋಪಿತ 2 ಅಧಿಕಾರಿಗಳ ವಿರುದ್ಧ ದಾಳಿ ದಿನಾಂಕ : 12.06.2020 ರಂದು ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ

ಭ್ರಷ್ಟಾಚಾರ ಆರೋಪಿತ 2 ಅಧಿಕಾರಿಗಳ ವಿರುದ್ಧ ದಾಳಿ ದಿನಾಂಕ : 12.06.2020 ರಂದು ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳವು ರಾಜ್ಯದ 2 ವಿವಿಧ ಸರ್ಕಾರಿ ನೌಕರರು ತಮ್ಮ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ – ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿ ಅವರಿಗೆ ಸಂಬಂಧಿಸಿದ 6 ಸ್ಥಳಗಳ ಮೇಲೆ ದಾಳಿ ನಡೆಸಲಾಗಿರುತ್ತದೆ . ಶೋಧನಾ ಕಾರ್ಯವು ಮುಂದುವರೆದಿದ್ದು ಈವರೆಗೆ ಶೋಧನೆ ನಡೆಸಲಾದ ಸ್ಥಳಗಳಲ್ಲಿ ತನಿಖೆಯಲ್ಲಿ ಪತ್ತೆಯಾದ ಆರೋಪಿತ ಸರ್ಕಾರಿ ನೌಕರರ ಚರ ಮತ್ತು ಸ್ಥಿರ ಆಸ್ತಿಗಳ ವಿವರ ಈ ಕೆಳಕಂಡಂತಿರುತ್ತವೆ . 1. ಶ್ರೀ . ಹನಮಪ್ಪ ಅಂದಪ್ಪ ಪ್ರಭರಣ್ಣವರ , ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು , ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳ , ಬಾಗಲಕೋಟೆ . ರಾಜೀವಗಾಂಧಿ ನಗರ , ಗದಗ ಇಲ್ಲಿ 1 ವಾಸದ ಮನೆ , ಗದಗ ನಗರದಲ್ಲಿ 12 ನಿವೇಶನಗಳು , 25 ಎಕರೆ ಕೃಷಿ ಜಮೀನು , ಚಿನ್ನ 367 ಗ್ರಾಂ , ಬೆಳ್ಳಿ 1 ಕೆ.ಜಿ 629 ಗ್ರಾಂ , 40 ಜೀವಾ ವಿಮಾ ಬಾಂಡ್‌ಗಳು , ನಗದು ( 1 ಲಕ್ಷ 52 ಸಾವಿರ , ವಿವಿಧ ಬ್ಯಾಂಕ್ ಖಾತೆಗಳಲ್ಲಿ ಠೇವಣಿಗಳು { 4 ಲಕ್ಷ 7 ಸಾವಿರ ಮತ್ತು ಕೆ 12 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ . 2 ಶ್ರೀ . ಎಂ . ದಾಸೇಗೌಡ , ವಿಶೇಷ ಭೂ ಸ್ವಾಧೀನಾಧಿಕಾರಿ , ಕೆ.ಐ.ಎ.ಡಿ.ಬಿ , ಮಂಗಳೂರು . ( ಹಾಲಿ ಅಮಾನತ್ತು ) ಮಂಡ್ಯ ನಗರದಲ್ಲಿ 1 ವಾಸದ ಮನೆ , 8 ನಿವೇಶನಗಳು , ಚಿನ್ನ 580 ಗ್ರಾಂ , ಬೆಳ್ಳಿ 6 ಕೆ.ಜಿ 600 ಗ್ರಾಂ , 1 ಮಾರುತಿ ಎರಿಟಗಾ ಕಾರು , 3 ದ್ವಿಚಕ್ರ ವಾಹನಗಳು , 1 ಬ್ಯಾಂಕ್ ಲಾಕರ್ , ವಿವಿಧ ಬ್ಯಾಂಕ್ ಖಾತೆಗಳಲ್ಲಿ ಠೇವಣಿಗಳು { 10 ಲಕ್ಷ ಮತ್ತು ಕೆ 15 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ . ಮೇಲ್ಕಂಡ 2 ಪ್ರಕರಣಗಳಲ್ಲಿ ತನಿಖೆ ಮುಂದುವರೆದಿದ್ದು , ಸದರಿ ಸರ್ಕಾರಿ ನೌಕರರು ಹೊಂದಿರುವ ಆಸ್ತಿ ಪಾಸ್ತಿಗಳ ಹಾಗೂ ಬ್ಯಾಂಕ್ ಲಾಕರ್‌ಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಹಾಗೂ ಸಂಬಂಧಪಟ್ಟ ಇನ್ನು ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಣೆ ಮುಂದುವರೆದಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.