ಉಪ್ಪಾರ ಸಮಾಜವನ್ನು ರಾಜಕೀಯವಾಗಿ ಗುರುತಿಸಿ ಕೊಳ್ಳಲು ಅವಕಾಶ ಮಾಡಿ ಕೊಡಬೇಕೆಂದು ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಯಡಿಯೂರಪ್ಪ ರವರಲ್ಲಿ ವಿನಂತಿ

ಕರ್ನಾಟಕ ರಾಜ್ಯದಲ್ಲಿ ಉಪ್ಪಾರ ಸಮಾಜವು 35 ರಿಂದ 40 ಲಕ್ಷ ಜನಸಂಖ್ಯೆಯನ್ನು ಹೊಂದಿದೆ . ಮೊದಲಿನಿಂದಲೂ ಈ ಸಮಾಜವು ಆರ್ಥಿಕವಾಗಿ , ಸಾಮಾಜಿಕವಾಗಿ , ಹಾಗೂ ರಾಜಕೀಯವಾಗಿ ತುಳಿತಕ್ಕೆ ಒಳಗಾಗಿದೆ .

ಎಲ್ಲಾ ರಾಜಕೀಯ ಪಕ್ಷಗಳು ಕೇವಲ ಮತಗಳಿಗೆ ಸೀಮಿತವಾಗಿ ಭರವಸೆ ನೀಡಿ , ಚುನಾವಣೆ ಮುಗಿದ ಮೇಲೆ ಯಾವುದೇ ಅಧಿಕಾರ ನೀಡದೇ ನಮ್ಮ ಉಪ್ಪಾರ ನಿಗಮ ಮಂಡಳಿಗೂ ಆಧ್ಯಕ್ಷರನ್ನಾಗಲಿ ಸದಸ್ಯರನ್ನಾಗಲೀ ಅಯ್ಕೆ ಮಾಡದೇ ಸರ್ಕಾರದ ಅವಧಿ ಮುಗಿಯುವಾಗ ಅಧಿಕಾರ ಕೊಟ್ಟಂತೆ ಮಾಡಿರುತ್ತಾರೆ . ಭಾರತೀಯ ಜನತಾ ಪಕ್ಷವಾದರೂ ಈ ನಮ್ಮ ಶೋಷಿತ ಸಮಾಜಕ್ಕೆ ಈಗಲಾದರೂ ಉಪ್ಪಾರ ಸಮಾಜವು ಮುಖ್ಯವಾಹಿನಿಗೆ ಬರಲು ವಿಧಾನ ಪರಿಷತ್ ಮತ್ತು ಉಪ್ಪಾರ ನಿಗಮ ಮಂಡಳಿಯಲ್ಲದೇ ಇನ್ನಿತರ ನಿಗಮಗಳಿಗೆ ಭಾರತೀಯ ಜನತಾ ಪಕ್ಷಕ್ಕೆ ದುಡಿದ ಉಪ್ಪಾರ ಸಮಾಜದ ಮುಖಂಡರನ್ನು ಗುರುತಿಸಿ ಸ್ಥಾನ ನೀಡುವುದರ ಮೂಲಕ ಈ ಒಂದು ಸಮಾಜವನ್ನು ರಾಜಕೀಯವಾಗಿ ಗುರುತಿಸಿ ಕೊಳ್ಳಲು ಅವಕಾಶ ಮಾಡಿ ಕೊಡಬೇಕೆಂದು ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಯಡಿಯೂರಪ್ಪ ರವರಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ . ಬೇಡಿಕೆಯನ್ನು ಈಡೇರಿಸಬೇಕೆಂದು ತಮ್ಮಲ್ಲಿ ಗೌರವ ಪೂರಕವಾಗಿ ಮಾಧ್ಯಮದ ಮುಕಾಂತರ ಕೇಳಿಕೊಳ್ಳುತ್ತಿದ್ದೇವೆ .

ವಿಷ್ಣು ರಾ ಲಾತೂರ್ ಅಧ್ಯಕ್ಷರು, ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ( ರಿ )

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.