
ನಾಗಮಂಗಲ: ತಾಲೂಕಿನ ಹೊಣಕೆರೆ ಹೋಬಳಿಯ ಕರಿಕ್ಯಾತನಹಳ್ಳಿಯಲ್ಲಿ ಸೋಮವಾರ ರಾತ್ರಿ ಮನೆಗೆ ನುಗ್ಗಿ ವೃದ್ಧೆ ಕೊಲೆ ಮಾಡಿ ಮೈಮೇಲಿದ್ದ ಸುಮಾರು 70 ಗ್ರಾಂ ಚಿನ್ನದ ಒಡವೆ ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಮನೆಗೆ ನುಗ್ಗಿ ವೃದ್ಧೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿರುವ ಪ್ರಕರಣ ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿ ಕರಿಕ್ಯಾತನಹಳ್ಳಿಯ ಶಾಲೆಯ ಎದುರಿನಲ್ಲಿರುವ ಮನೆಯಲ್ಲಿ ವಾಸವಿದ್ದ ಹನುಮೇಗೌಡರ ಪತ್ನಿ ಜಯಮ್ಮ (70) ಎಂಬುವರನ್ನು ಕೊಲೆ ಮಾಡಲಾಗಿದೆ. ತಡರಾತ್ರಿ ಮನೆಯ ಮುಂಬಾಗಿಲು ಒಡೆದು ಒಳಗೆ ನುಗ್ಗಿದ್ದ ದುಷ್ಕರ್ಮಿಗಳು, ಅಡುಗೆಮನೆಯಲ್ಲಿದ್ದ ಹಿಟ್ಟಿನ ದೊಣ್ಣೆಯಿಂದ ಜಯಮ್ಮ ರವರ ತಲೆಗೆ ಹೊಡೆದು ಕೊಂದು ಮೈಮೇಲಿದ್ದ 30 ಗ್ರಾ ಮಾಂಗಲ್ಯ ಸರ, 10 ಗ್ರಾ ಓಲೆ, ಉಂಗುರ ಹಾಗೂ ಮಾಟಿ ಸೇರಿದಂತೆ ಸುಮಾರು 75 ಗ್ರಾಂಗಳಿಗೂ ಹೆಚ್ಚು ತೂಕದ 150000 ಲಕ್ಷ ರೂ ಮೌಲ್ಯದ ಆಭರಣವನ್ನು ಕಳವು ಮಾಡಿದ್ದಾರೆ. ಪ್ರಕರಣದಿಂದ ಗ್ರಾಮಸ್ಥರು ಆತಂಕದಲ್ಲಿದ್ದು,
ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ರಾಮಚಂದ್ರ ಡಿವೈಎಸ್ಪಿ ವಿಶ್ವನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಅಪರಾಧಿಗಳ ಹುಡುಕಾಟ ನಡೆಸಿದ್ದಾರೆ.
ವರದಿ: ದೇ.ರಾ .ಜಗದೀಶ ನಾಗಮಂಗಲ
City Today News
(citytoday.media)
9341997936