ಗ್ರಾಹಕರಿಗೆ ಲೋಕಲ್ ಶಾಪ್ಗಳಲ್ಲಿ ಪ್ರೋಡಕ್ಟ್ಗಳನ್ನು ಕಂಡುಕೊಳ್ಳುವುದು, ಪಾವತಿಗಳನ್ನು ಮಾಡುವುದು, EMI ಗಳನ್ನು ಪಡೆಯುವುದು ಮತ್ತು ರಿವಾರ್ಡ್ಗಳನ್ನು ಪಡೆಯುವುದಕ್ಕಾಗಿ ಸ್ಮಾರ್ಟ್ ಮತ್ತು ಸಂಪರ್ಕ ರಹಿತ ವಿಧಾನ ಇದಾಗಿದೆ.

ಬೆಂಗಳೂರು ಜೂನ್, 2020: ಅಮೆಜಾನ್ ಪೇ ಇಂದು “ಸ್ಮಾಟ್ ಸ್ಟೋರ್ಸ್” ತೆರೆದಿರುವುದನ್ನು ಘೋಷಿಸಿದೆ. ಈ ಸ್ಟೋರ್ನಲ್ಲಿ ಲಭ್ಯವಿರುವ ಉತ್ಪನ್ನಗಳನ್ನು ಆನ್ವೇಷಣೆ ಮಾಡುವುದಕ್ಕಾಗಿ ಗ್ರಾಹಕರು ಅಮೆಜಾನ್ ಆಪ್ ಉಪಯೋಗಿಸುತ್ತಾ ಸ್ಟೋರ್ನ QR ಕೋಡ್ ಸ್ಕಾನ್ ಮಾಡಿದರೆ ಸಾಕಾಗುತ್ತದೆ. ಗ್ರಾಹಕರು ತಾವು ಖರೀದಿಸುವ ಪ್ರೊಡಕ್ಕ್ಟ್ ಆಯ್ಕೆ ಮಾಡಿಕೊಂಡ ಬಳಿಕ ಪಾವತಿಗಾಗಿ ಅಮೆಜಾನ್ನಲ್ಲಿ ತನಿಖೆ ಮಾಡಬಹುದಾಗಿದೆ. ಅದರಲ್ಲಿ, ಯುಪಿಐ, ಬ್ಯಾಲೆನ್ಸ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳನ್ನು ಉಪಯೋಗಿಸುವ ಆಯ್ಕೆ ಇರುತ್ತದೆ. ಗ್ರಾಹಕರು ಸ್ಥಳದಲ್ಲೇ ಒಂದು ವ್ಯವಹಾರವನ್ನು EMI ಆಗಿ ಪರಿವರ್ತಿಸಬಹುದಾಗಿದೆ ಹಾಗೂ ಕಾಲ ಕಾಲಕ್ಕೆ ತಕ್ಕಂತೆ ಅವರ ಬ್ಯಾಂಕ್ನಿಂದ ಅಥವಾ ಅಮೆಜಾನ್ ಪೇಯಿಂದ ಪುರಸ್ಕಾರಗಳನ್ನು ಪಡೆಯಬಹುದಾಗಿದೆ. ಇಷ್ಟು ಮಾತ್ರವಲ್ಲ – ಬಿಲ್ಲನ್ನು ಡಿಜಿಟಲ್ ಮೂಲಕ ಡೆಲಿವರಿ ಮಾಡಲಾಗುತ್ತದೆ. ಆದ್ದರಿಂದ, ಈ ಸಂಪೂರ್ಣ ಖರೀದಿ ಪ್ರಯಾಣ ಸಂಪರ್ಕ ರಹಿತ, ಅನುಕೂಲಕರ ಮತ್ತು ಪುರಸ್ಕಾರಯುಕ್ತ ಆಗಿರುತ್ತದೆ.
ಅಮೆಜಾನ್ ಪೇಯ ಸ್ಮಾರ್ಟ್ ಸ್ಟೋರ್, ಲೋಕಲ್ ಶಾಪ್ಗಳಿಗೆ ತಮ್ಮ ಪ್ರಚಾರ, ಗ್ರಾಹಕರ ಅನುಭವ ಮತ್ತು ಮಾರಾಟಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಅವುಗಳನ್ನು ಸಶಕ್ತಗೊಳಿಸುತ್ತದೆ.
• ಡಿಜಿಟಲ್ ಸ್ಟೋರ್ ಫ್ರಂಟ್: ಲೋಕಲ್ ಶಾಪ್ಗಳಿಗೆ ಡಿಜಿಟಲ್ ಸ್ಟೋರ್ಫ್ರಂಟ್ಗಳನ್ನು ಸ್ಥಾಪಿಸಲು ಅನುಕೂಲ ಮಾಡಿ ಕೊಡುತ್ತದೆ. ಇದರಿಂದಾಗಿ ಗ್ರಾಹಕರು ತಮ್ಮ ಸ್ಟೋರ್ನಲ್ಲಿ ಕುಳಿತುಕೊಂಡು ಅಥವಾ ಅಮೆಜಾನ್ ಆಪ್ ಉಪಯೋಗಿಸುತ್ತಾ ಪ್ರೋಡಕ್ಟ್ಗಳನ್ನು ಕಂಡುಕೊಳ್ಳಬಹುದು, ರಿವ್ಯೂಗಳನ್ನು ವೀಕ್ಷಿಸಬಹುದು, ಆಫರ್ಗಳನ್ನು ಪರಿಶೀಲಿಸಬಹುದಾಗಿದೆ.
• EMI ಗಳು ಮತ್ತು ಬ್ಯಾಂಕ್ ಆಫರ್ಗಳ ಜೊತೆಗೆ ಸಂಪರ್ಕರಹಿತ ಪಾವತಿಗಳು: ಯುಪಿಐ, ಬ್ಯಾಲೆನ್ಸ್, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಮೂಲಕ ಸಂಪರ್ಕ ರಹಿತ ಪಾವತಿ ಆಯ್ಕೆಗಳು, EMI ಗಳು ಮತ್ತು ಬ್ಯಾಂಕ್ ಆಫರ್ಗಳು ಎಂಬಂತೆ ಮರ್ಚೆಂಟ್ಗಳಿಗೆ ಅನೇಕ ಪ್ರಕಾರದ ಪ್ರಯೋಜನಗಳನ್ನು ನೀಡುವುದು ಸಾಧ್ಯವಾಗಿರುತ್ತದೆ. ಇಷ್ಟು ಮಾತ್ರವಲ್ಲ ಸಂಪರ್ಕ ಮತ್ತು ವೆಚ್ಚ ಕಡಿಮೆ ಮಾಡಲು ಡಿಜಿಟಲ್ ಮೂಲಕ ಬಿಲ್ ಕೂಡಾ ಕಳಿಸಬಹುದಾಗಿದೆ.
• ಅಮೆಜಾನ್ ಪೇ ರಿವಾಡ್ರ್ಸ್: ಹೊಸ ಗ್ರಾಹಕರನ್ನು ಆಕರ್ಷಿಸಲು ಮತ್ತು ಹಳೆಯ ಗ್ರಾಹಕರು ಮತ್ತೆ ಖರೀದಿಗಾಗಿ ಬರುವಂತೆ ಮಾಡುವುದಕ್ಕಾಗಿ ಲೋಕಲ್ ಶಾಪ್ಗಳು ಅಮೆಜಾನ್ ಪೇ ರಿವಾರ್ಡ್ ಕೂಪನ್ಗಳನ್ನು ಒದಗಿಸುವುದಕ್ಕಾಗಿ ಅವರಿಗೆ ಅನುಕೂಲ ಮಾಡಲಾಗಿದೆ. ಈ ಮೂಲಕ ಅವರು ತಮ್ಮ ಮಾರಾಟ ಹೆಚ್ಚಿಸಬಹುದಾಗಿದೆ.
“ಅಮೆಜಾನ್ ಪೇ ಈಗಾಗಲೇ ಲಕ್ಷಗಟ್ಟಲೆ ಲೋಕಲ್ ಶಾಪ್ಗಳನ್ನು ಸ್ವೀಕರಿಸಿದೆ. ಸ್ಮಾರ್ಟ್ ಸ್ಟೋರ್ಗಳ ಮೂಲಕ ಗ್ರಾಹಕರ ಖರೀದಿ ಅನುಭವಗಳನ್ನು ಲೋಕಲ್ ಶಾಪ್ಗಳಲ್ಲಿ ಹೆಚ್ಚು ಅನುಕೂಲಕರ ಮತ್ತು ಸುರಕ್ಷಿತವನ್ನಾಗಿ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ. ಇದಲ್ಲದೆ, EMI ಗಳು, ಬ್ಯಾಂಕ್ ಆಫರ್ಗಳು ಮತ್ತು ಪುರಸ್ಕಾರಗಳ ಮೂಲಕ ಗ್ರಾಹಕರಿಗೆ ಈ ಖರೀದಿಗಳನ್ನು ಹೆಚ್ಚು ಅಗ್ಗ ಮತ್ತು ಪುರಸ್ಕಾರಯುಕ್ತವನ್ನಾಗಿ ಮಾಡುತ್ತಿದ್ದೇವೆ ಹಾಗೂ ಶಾಪ್ಗಳ ಮಾರಾಟ ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ.” ಎಂದು ಅಮೆಜಾನ್ ಪೇಯ ಸಿಇಓ ಮಹೇಂದ್ರ ನೆರುರ್ಕಾ ಹೇಳಿದ್ದಾರೆ.
ದೇಶದಾದ್ಯಂತ ಸಾವಿರಾರು ಲೋಕಲ್ ಶಾಪ್ಗಳು ಅಮೆಜಾನ್ ಪೇ ಸ್ಮಾರ್ಟ್ ಸ್ಟೋರ್ಸ್ಗೆ ಸೈನ್ ಅಪ್ ಆಗಿದ್ದಾರೆ. ಇವುಗಳಲ್ಲಿ ಶ್ರೀ ಬಾಲಾಜಿ ಕಿಚನ್ಸ್-ವಿಶಾಖಪಟ್ಟಣಂ, ಉಷಾ ಕಂಪೆನಿ ಸ್ಟೋರ್ – ಜಬಲ್ಪುರ್ ಹಾಗೂ ಬಿಗ್ ಬಜಾರ್, ಮೆಡ್ಪ್ಲಸ್ ಮತ್ತು ಇನ್ನಷ್ಟು ಸೂಪರ್ ಮಾರ್ಕೆಟ್ಗಳುಸೇರಿವೆ. ಗ್ರಾಹಕರಿಗೆ ಅತ್ಯುತ್ತಮ ಮ್ನಯದ ಮತ್ತು ಅನುಕೂಲಕರ ಇನ್-ಸ್ಟೋರ್ ಖರೀದಿ ಅನುಭವ ಒದಗಿಸುವುದಕ್ಕಾಗಿ ಅಮೆಜಾನ್ ಪೇ ಪ್ರಮುಖ ಬ್ಯಾಂಕ್ಗಳೊಂದಿಗೆ ಪಾಲುಗಾರಿಕೆ ಮಾಡಿಕೊಂಡಿದೆ.
City Today News
(citytoday.media)
9341997936