ಮೈಸೂರು , ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ- ಲಂಚದ ಹಣದ ಸಮೇತ ಆರೋಪಿತನನ್ನು ವಶಕ್ಕೆ ಪಡೆದು , ದಸ್ತಗಿರಿ

ಶಿವಮೊಗ್ಗ ಜಿಲ್ಲೆ , ಶಿಕಾರಿಪುರ ತಾಲ್ಲೂಕು ನೆಹರು ಕಾಲೋನಿಯ ನಿವಾಸಿಯೊಬ್ಬರು ತಮ್ಮ ಮಹಿಳಾ ಸಂಬಂಧಿ ಮೈಸೂರಿನಲ್ಲಿ ವಾಸವಾಗಿದ್ದು , ಆಕೆಗೆ ಪರಿಚಯವಿರುವ ವ್ಯಕ್ತಿಯೊಬ್ಬರು ಮದುವೆಯಾಗುವುದಾಗಿ ನಂಬಿಸಿ , ಅವರನ್ನು ಲೈಂಗಿಕವಾಗಿ ಉಪಯೋಗಿಸಿ ಕೊಂಡು , ಆನಂತರ ಮೋಸ ಮಾಡಿದ್ದರಿಂದ ಸದರಿರವರು ಮೈಸೂರು ನಗರದ ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ . ಈ ವಿಚಾರದ ಕುರಿತಂತೆ ಸದರಿ ಮಹಿಳೆಯು ಪಿರ್ಯಾದುದಾರರಿಗೆ ತಮಗೆ ಮೋಸ ಮಾಡಿದ ವ್ಯಕ್ತಿ ಈಗಲೂ ಒಪ್ಪಿದರೆ ತಾನು ಅವರೊಡನೆ ಮದುವೆಯಾಗುವುದಾಗಿ , ಈ ಬಗ್ಗೆ ಆ ವ್ಯಕ್ತಿಯ ಅಥವಾ ಪೊಲೀಸರ ಸಹಾಯವನ್ನು ಪಡೆಯುವಂತೆ ತಿಳಿಸಿರುತ್ತಾರೆ . ಅದರಂತೆ ಪಿರ್ಯಾದುದಾರರು ಮೇಟಗಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ರವರಾದ ಶ್ರೀ . ಬಿ . ಜಿ . ರಾಘವೇಂದ್ರಗೌಡ ಮತ್ತು ಹೆಡ್ ಕಾನ್ಸ್‌ಟೇಬಲ್ ಶ್ರೀ . ಭೀಮಣ್ಣ ಇವರುಗಳನ್ನು ದಿನಾಂಕಃ 04-07-2020 ರಂದು ಭೇಟಿ ಮಾಡಿ ವಿಚಾರ ಮಾಡಿದಾಗ , ಸದರಿರವರುಗಳಿಗೆ ಮದುವೆ ಮಾಡಿಸಲು ಅಥವಾ ಮೇಲ್ದಂಡ ಪ್ರಕರಣವನ್ನು ಬಿಗಿ ಮಾಡಲು ಆರೋಪಿತರು 1,00,000 / – ರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟು , ದಿನಾಂಕಃ 07-07-2020 ರಂದು 75.000 / ರೂಗಳ ಲಂಚದ ಹಣಕ್ಕೆ ಒತ್ತಾಯಿಸಿರುತ್ತಾರೆಂದು ಹಾಗೂ ಸದರಿಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಇತ್ಯಾದಿಯಾಗಿ ಆರೋಪಿಸಿ ದಿನಾಂಕಃ 08-07-2020 ರಂದು ಪಿರ್ಯಾದುದಾರ ದೂರು ನೀಡಿರುತ್ತಾರೆ . ಈ ಬಗ್ಗೆ ಪ್ರಕರಣದ ಪಿರ್ಯಾದುದಾರರು ಲಂಚದ ಹಣವನ್ನು ನೀಡಲು ಇಷ್ಟವಿಲ್ಲದ ಕಾರಣ ಭ್ರಷ್ಟಾಚಾರ ನಿಗ್ರಹ ದಳ ಮೈಸೂರು ಜಿಲ್ಲಾ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ .

ಈ ದೂರಿನನ್ವಯ ದಿನಾಂಕ : 08.07.2020 ರಂದು ನಡೆಸಿದ ಟ್ರಾಪ್ ಕಾರ್ಯಾಚರಣೆಯಲ್ಲಿ ಶ್ರೀ ಬಿ . ಜಿ . ರಾಘವೇಂದ್ರ ಗೌಡ , ಪೋಲೀಸ್ ನಿರೀಕ್ಷಕರು ಮತ್ತು ಶ್ರೀ ಭೀಮಣ್ಣ , ಸಿ.ಹೆಚ್.ಸಿ -50 , ಇಬ್ಬರೂ ಮೇಟಗಳ್ಳಿ ಪೊಲೀಸ್ ಠಾಣೆ , ಮೈಸೂರು ನಗರ ರವರುಗಳು ರೂ . 75,000 / – ಲಂಚದ ಹಣವನ್ನು ಕೆ.ಆರ್.ಎಸ್ ಜಂಕ್ಷನ್‌ನ ಬಳಿ ರಿಂಗ್‌ರೋಡ್ನಲ್ಲಿರುವ ಅಕ್ಷಯ ಪ್ಯಾಲೇಸ್ ಇನ್ ಲಾಡ್ಸ್ನಲ್ಲಿ ಪಿರ್ಯಾದುದಾರರಿಂದ ಪಡೆದುಕೊಂಡಿದ್ದು , ಮೈಸೂರು , ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದು , ಲಂಚದ ಹಣದ ಸಮೇತ ಆರೋಪಿತನನ್ನು ವಶಕ್ಕೆ ಪಡೆದು , ದಸ್ತಗಿರಿ ಮಾಡಿ , ಲಂಚದ ಹಣವನ್ನು ವಶಪಡಿಸಿಕೊಂಡು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು , ಪ್ರಕರಣದ ತನಿಖೆ ಮುಂದುವರೆದಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.