
ಬಿಜಿ ನಗರದಲ್ಲಿ ಹಾಪ್ಕಾಮ್ಸ್ ಮಳಿಗೆ ಉದ್ಘಾಟಸಿದ ಸಚಿವ ನಾರಾಯಣಗೌಡ
ನಾಗಮಂಗಲ: ತಾಲ್ಲೂಕಿನ ಬಿಜಿ ನಗರದಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆ ಮುಂಭಾಗ ನೂತನ ಹಾಪ್ ಕಾಮ್ಸ್ ಮಳಿಗೆಯನ್ನು ಸಚಿವ ನಾರಾಯಣ ಗೌಡ ಉದ್ಘಾಟಿಸಿದರು.
ಉದ್ಘಾಟನೆ ಕಾರ್ಯಕ್ರಮದ ನಂತರ ಮಾತನಾಡಿದ ಸಚಿವ ನಾರಾಯಣಗೌಡ ರವರು ಸಿದ್ದರಾಮಯ್ಯನವರ ಆರೋಪ ಸತ್ಯಕ್ಕೆ ದೂರವಾದ ಮಾತು ಕೊರೊನಾ ಸುರಕ್ಷತಾ ವಸ್ತುಗಳನ್ನು ಖರೀದಿ ಮಾಡುವಾಗ ಸರ್ಕಾರ ಯಾವುದೇ ಮೋಸದ ಕೆಲಸ ನಡೆಸಿಲ್ಲ. ಯಾರಾದರೂ ತನಿಖೆ ಮಾಡಲಿ, ವಿರೋಧ ಪಕ್ಷದವರಿಗೆ ಮಾಡಲು ಏನೂ ಕೆಲಸವಿಲ್ಲದೇ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಸರ್ಕಾರ ಕೊರೊನಾಗಾಗಿ ಕೇವಲ 600 ಕೋಟಿ ಖರ್ಚು ಮಾಡಿದೆ. ವಿರೋಧ ಪಕ್ಷದವರು ಸರ್ಕಾರ 2-5 ಸಾವಿರ ಕೋಟಿ ಎಂದು ಹೇಳುತ್ತಿದ್ದಾರೆ.ಇದು ನಂಬಲು ಸಾಧ್ಯವಿಲ್ಲದ ಇದು ಸುಳ್ಳು ಆರೋಪ. ವಿರೋಧ ಪಕ್ಷದವರು ಆರೋಪ ಮಾಡುವ ಬದಲು ಕೊರೊನಾ ನಿಯಂತ್ರಣದಲ್ಲಿ ಭಾಗವಹಿಸಿದರೆ ಖುಷಿಯಾಗುತ್ತದೆ. ಮುಖ್ಯಮಂತ್ರಿಗಳು ಯಾವುದೇ ಅಕ್ರಮ ನಡೆಯಲು ಅವಕಾಶ ನೀಡಿಲ್ಲ, ನೀಡುವುದಿಲ್ಲ ಎಂದರು.
ಅಲ್ಲದೇ ಈಗ ಬರುತ್ತಿರುವ ಕೊರೊನಾ ಸುರಕ್ಷತಾ ವಸ್ತುಗಳು ಗುಣಮಟ್ಟದಾಗಿದ್ದು, ಸರ್ಕಾರಕ್ಕೆ ಯಾರು ಸಹ ಅನ್ಯಾಯ ಮಾಡಿಲ್ಲ. ಪ್ರಾರಂಭದಲ್ಲಿ ಚಿಕ್ಕ ತಪ್ಪು, ವ್ಯತ್ಯಾಸವಾಗಿರಬಹುದು.ಅದನ್ನು ಬಿಟ್ಟರೆ ಸರ್ಕಾರ ಜವಾಬ್ದಾರಿಯಿಂದ ನಡೆಯುತ್ತಿದೆ. ಕೋವಿಡ್ ನಿಯಂತ್ರಣದಲ್ಲಿ ತಾಲ್ಲೂಕು ಆಡಳಿತ ದೊಂದಿಗೆ ಜಿಲ್ಲಾಡಳಿತಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿವೆ. ನಮ್ಮ ಜಿಲ್ಲೆಯ ಪ್ರದೇಶಗಳಲ್ಲೂ ಕೂಡ ಕೊರೊನಾ ಹರಡುತ್ತಿದ್ದು, ನಿಯಂತ್ರಣ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದೇನೆ. ಜೊತೆಗೆ ಪ್ರತಿ ತಾಲ್ಲೂಕಿನ ವಿವರವನ್ನು ದಿನನಿತ್ಯ ಪಡೆಯುವ ಮೂಲಕ ಸುಧಾರಣೆ ತರಲು ಕ್ರಮವಹಿಸುತ್ತಿದ್ದೇವೆ ಎಂದರು.

ನಂತರ ಆದಿಚುಂಚನಗಿರಿ ಆಸ್ಪತ್ರೆಗೆ ಭೇಟಿ ನೀಡಿದರು. ಆಡಳಿತ ಮಂಡಳಿಯವರು ರೋಗಿಗಳಿಗೆ ಉಚಿತ ಅಥವಾ ಸರ್ಕಾರದ ಪರಿಹಾರದೊಂದಿಗೆ ಪರೀಕ್ಷಿಸಲು ಅವಕಾಶ ನೀಡಬೇಕು ಎಂದು ಮನವಿ ನೀಡಿದರು. ಅದಕ್ಕೆ ಉತ್ತರಿಸಿದ ಸಚಿವರು ಖಾಸಗಿ ಆಸ್ಪತ್ರೆ ಕೋವಿಡ್ ಸೇವೆ ಮಾಡಲು ಬಂದಿರುವುದು ಪ್ರಮುಖ ವಿಷಯ. ಆದ್ದರಿಂದ ಜಿಲ್ಲಾಧಿಕಾರಿಗಳಿಗೆ ಬೇಗ ಅನುಮೋದನೆ ನೀಡುವಂತೆ ಸೂಚನೆ ನೀಡುತ್ತೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಅಪ್ಪಾಜಿ ಗೌಡ,ತಹಶೀಲ್ದಾರ್ ಕುಂಞಿ ಅಹಮ್ಮದ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಧನಂಜಯ್, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಅನಂತರಾಜು, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಶಾಂತಾ ಮತ್ತು ಆಸ್ಪತ್ರೆ ಸಿಬ್ಬಂದಿ ಇದ್ದರು.
ವರದಿ: ದೇ.ರಾ .ಜಗದೀಶ ನಾಗಮಂಗಲ
City Today News
(citytoday.media)
9341997936