
ಬೆಂಗಳೂರು: ಕೊರೋನಾ ವಾರಿಯರ್ ಗಳಾದ ಪೊಲೀಸರಿಗೆ ಕೊರೋನಾ ತಗುಲಿದಾಗ ಚಿಕಿತ್ಸೆ ಪಡೆಯುವ ಸಲುವಾಗಿ ಸರ್ಕಾರವು ಕೂಡಲೇ ಆರೋಗ್ಯ ಭಾಗ್ಯದಡಿ ಹಣವನ್ನು ಎಲ್ಲಾ ನಿಯೋಜಿತ ಆಸ್ಪತ್ರೆಗಳಿಗೆ ಬಿಡುಗಡೆ ಮಾಡಿ ಪೊಲೀಸ್ ಸಿಬ್ಬಂದಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವುದರ ಜೊತೆಗೆ ಹಲವಾರು ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.
ಲಾಕ್ ಡೌನ್ ವೇಳೆ ಹಾಗೂ ನಂತರ ಕೊರೋನಾ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಈಗ ಪೊಲೀಸ್ ಇಲಾಖೆಯಲ್ಲೇ ಸಾಕಷ್ಟು ಜನರಿಗೆ ಸೋಂಕು ತಗುಲಿ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಪೊಲೀಸ್ ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರತಿಯೊಬ್ಬ ಪೊಲೀಸ್ ಕಾನ್ ಸ್ಟೇಬಲ್ ಗಳಿಗೆ ಶಿಫ್ಟ್ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸುವುದು. ಪೊಲೀಸ್ ಠಾಣೆಗಳಲ್ಲಿ ಕೋವಿಡ್ -19 ಹರಡುವ ಸ್ಥಳವಾಗಿರುವುದರಿಂದ ಅವಶ್ಯಕತೆ ಇರುವ ಸಿಬ್ಬಂದಿ ಮಾತ್ರ ನಿಯೋಜಿಸುವುದು. ಮೂಲಕ ಸಾರ್ವಜನಿಕ ದೂರುಗಳನ್ನು ಆನ್ಲೈನ್ ಗಳ ಮೂಲಕ ಸ್ವೀಕರಿಸಿ ದಾಖಲಾದ ದೂರುಗಳನ್ನು ವಿಚಾರಣೆ ಮಾಡುವುದು. 50 ವರ್ಷ ಮೇಲ್ಪಟ್ಟ ಸಿಬ್ಬಂದಿಗಳಿಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚಿಸುವುದು.
ಕರ್ತವ್ಯ ಮುಗಿದ ನಂತರ ಸಿಬ್ಬಂದಿ ಹಾಗೂ ಠಾಣೆಗಳನ್ನು ಸ್ವಚ್ಛಗೊಳಿಸುವ ವ್ಯವಸ್ಥೆ ಮಾಡುವುದು. ಅದಕ್ಕಾಗಿ ಬೇಕಾಗುವ ಹಣಕಾಸಿನ ನೆರವು ನೀಡುವುದು. ಪೊಲೀಸ್ ಠಾಣೆಗಳಲ್ಲಿ ಸ್ವಾಗತಕಾರರ ಸ್ಥಳಗಳಲ್ಲಿ ಗಾಜಿನ ಕ್ಯಾಬಿನೆಟ್ ಗಳನ್ನು ಅಳವಡಿಸಿ ದೂರುಗಳನ್ನು ಸ್ವೀಕರಿಸುವುದು.

ಕೋವಿಡ್-19 ಆಸ್ಪತ್ರೆ ಹಾಗೂ ಸ್ಮಶಾನ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಮಾಸ್ಕ್, ಹೆಡ್ ಗ್ಲೆರ್,ಗ್ಲೌಸ್,ಹಾಗೂ ಪಿಪಿಇ ಕಿಟ್ ಗಳನ್ನು ನೀಡುವುದು. ಪೊಲೀಸ್ ಸಿಬ್ಬಂದಿಯ ರೋಗ ನಿರೋಧಕ ಶಕ್ತಿ ವೃದ್ಧಿಸಲು ಆಯುಷ್ / ಆಯುರ್ವೇದಿಕ್ ಔಷಧಗಳನ್ನು ನೀಡಲು ಸೂಚಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ.
City Today News
(citytoday.media)
9341997936