
ಆಡಳಿತದ ಶಕ್ತಿಕೇಂದ್ರ ವಿಧಾನಸೌಧದ ನಿರ್ಮಾಣಕ್ಕೆ ಶೀಲಾನ್ಯಾಸ ಮಾಡಿದ ದಿನ ಇಂದು.
1951 ರ ಜುಲೈ 13ರಂದು ಭಾರತದ ಅಂದಿನ ಪ್ರಧಾನಿಗಳಾಗಿದ್ದ ನೆಹರೂ ಮತ್ತು ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆ ಸಿ ರೆಡ್ಡಿಯವರು ಈ ಶಕ್ತಿಸೌಧ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಈ ಭವ್ಯವಾದ ಆಡಳಿತ ಕೇಂದ್ರದ ನಿರ್ಮಾಣಕ್ಕೆ ಕಾರಣಕರ್ತರಾದರು.
ವಿಶ್ವದಲ್ಲಿರುವ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳಿಗೆ ಹೋಲಿಸಿದರೆ ತನ್ನದೇ ಆದ ಛಾಪು ಮೂಡಿಸಿರುವ ವಿಶಿಷ್ಟತೆ ನಮ್ಮ ವಿಧಾನಸೌಧಕ್ಕಿದೆ. ಪ್ರಪಂಚದ ಪ್ರಪ್ರಥಮ ಸಾಂವಿಧಾನಿಕ ಸಂಸ್ಥೆಗಳ ಚೌಕಟ್ಟು ( World’s first Constitutional Complex ) ನಮ್ಮ ಕಾರ್ಯಕ್ಷೇತ್ರವಾದ ವಿಧಾನಸೌಧ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ. ಭವ್ಯಸೌಧದ ಶೀಲಾನ್ಯಾಸದ 70ನೇ ವರ್ಷ ದ ಈ ನೆನಪಿನ ದಿನದಂದು ವಿಧಾನಸೌಧ ಕಟ್ಟಲು ಸಹಕರಿಸಿದ ಮತ್ತು ಉತ್ಕೃಷ್ಟ ಆಡಳಿತಾತ್ಮಕ ನಿರ್ಣಯ ಕೈಗೊಳ್ಳಲು ಸಹಕರಿಸಿದ ಜನಪ್ರತಿನಿಧಿಗಳಿಗೆ ನನ್ನ ನಮನಗಳು.

- ಶ್ರೀ ರಮೇಶ್ ಜಾರಕಿಹೊಳಿ
ಜಲಸಂಪನ್ಮೂಲ ಸಚಿವರು
ಕರ್ನಾಟಕ ಸರ್ಕಾರ
City Today News
(citytoday.media)
9341997936