
ಮುಂಬೈ: ವಿವಾದಿತ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಎಸಿ) ಯಿಂದ ಭಾರತೀಯ ಹಾಗೂ ಚೀನಿ ಪಡೆಗಳು ಹಿಂದೆ ಸರಿಯುವಿಕೆಯು ಈಗಷ್ಟೇ ಆರಂಭಗೊಂಡಿದ್ದು. ಅತ್ಯಂತ ಪ್ರಗತಿಯಲ್ಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಶನಿವಾರ ತಿಳಿಸಿದ್ದಾರೆ. ಭಾರತೀಯ ಜಾಗತಿಕ ಸಪ್ತಾಹ ವೀಡಿಯೊ ಕಾನ್ಫರೆನ್ಸ್ ನಲ್ಲಿ ಮಾತನಾಡುತ್ತಿದೆ ಅವರು “ಸೇನಾ ವಾಪಸಾತಿಯ ಅಗತ್ಯದ ಕುರಿತು ನಾವು ಒಡಂಬಡಿಕೆ ಮಾಡಿಕೊಳ್ಳುವುದು ಈಗ ಕಾರ್ಯಗತಗೊಳ್ಳುತ್ತಿದೆ. ಯೊಕೆಂದರೆ ಗಡಿಯಲ್ಲಿ ಇತ್ತಂಡಗಳು ಪರಸ್ಪರ ಅತ್ಯಂತ ನಿಕಟವಾಗಿ ನಿಯೋಜಿಸುವಾಗಿದ್ದವು.” ಎಂದವರು ಹೇಳಿದರು “ಒಪ್ಪಂದದಂತೆ ಸೇನಾ ಹಿಂತೆಗೆತ ಹಾಗೂ ಉದ್ವಿಗ್ನತೆ ಶಮನ ಪ್ರಕ್ರಿಯೆ ಆರಂಭಗೊಂಡಿದ್ದು. ಸೇನಾ ವಾಪಸತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಹಂತದಲ್ಲಿ ಈ ಬಗ್ಗೆ ಇನ್ನೇನನ್ನೂ ಹೇಳಲು ಬಯಸುವುದಿಲ್ಲ ಎಂದವರು ಹೇಳಿದರು.
ಭಾರತ-ಚೀನಾ ಗಡಿ ವ್ಯವಹಾರಗಳ ಮೇಲಿನ ಸಮಾಲೋಚನೆ ಹಾಗೂ ಸಮನ್ವಯತೆಗಾಗಿನ ಕಾರ್ಯತಂತ್ರದ ಚೌಕಟ್ಟಿನಡಿ ಭಾರತ ಹಾಗೂ ಚೀನಾ ಇನ್ನೊಂದು ಸುತ್ತಿನ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಿದ ಮರುದಿನವೇ ಜೈಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ. ಗಡಿಯಲ್ಲಿ ಶಾಂತಿ ಹಾಗೂ ನೆಮ್ಮದಿಗೆ ಸಂಪೂರ್ಣ ಮರು ಸ್ಥಾಪನೆಗಾಗಿ ಪೂರ್ವ ಲಡಾಖ್ ನ ಎಲ್ಎಸಿ ಯಿಂದ ಎರಡೂ ಕಡೆಗಳ ಸೇನಾಪಡೆಗಳನ್ನು ಸಕಾಲಿಕವಾಗಿ ಸಂಪೂರ್ಣವಾಗಿ ಹಿಂದೆ ಸರಿಯಲು ಇತ್ತಂಡಗಳು ದೃಢ ನಿರ್ಧಾರ ಮಾಡಿದೆ ಎಂದವರು ಹೇಳುದ್ದಾರೆ.
ಜುಲೈ 5ರಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಸುಮಾರು ಎರಡು ಗಂಟೆಗಳ ತಾಸುಗಳ ಕಾಲ ದೂರವಾಣಿ ಸಂಭಾಷಣೆ ನಡೆದ ಬಳಿಕ ಭಾರತ ಹಾಗೂ ಚೀನಾ ಸೇನೆಗಳ ವಾಪಸಾತಿ ಪ್ರಕ್ರಿಯೆ ಆರಂಭಗೊಂಡಿತ್ತು. ಕಳೆದ ಸೋಮವಾರದಂದು ಭಾರತ ಹಾಗೂ ಚೀನಿ ಸೇನೆ ನಡುವೆ ಭೀಕರ ಸಂಘರ್ಷ ನಡೆದ ಗಲ್ವಾನ್ ಕಣಿವೆಯಿಂದ ಎರಡು ಸೇನಾಪಡೆಗಳ ಯೋಧರು ಹಿಂದೆ ಸರಿದಿದ್ದರು.
City Today News
(citytoday.media)
9341997936