
ಅತಿವೃಷ್ಟಿ ನಿರ್ವಹಣೆಯ ಸಮನ್ವಯಕ್ಕಾಗಿ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರು ಮಹಾರಾಷ್ಟ್ರದ ಸಾಂಗ್ಲಿ ಕ್ಷೇತ್ರದ ಲೋಕಸಭಾ ಸದಸ್ಯರಾದ ಶ್ರೀ ಸಂಜಯ್ ಕಾಕಾ ಪಾಟೀಲ್ ಅವರೊಂದಿಗೆ ಚರ್ಚೆ ನಡೆಸಿದರು.

ನೆರೆ ನಿರ್ವಹಣೆಗಾಗಿ ಈಗಾಗಲೇ ಎರಡೂ ರಾಜ್ಯಗಳ ಅಧಿಕಾರಿಗಳ ಸಮನ್ವಯ ಸಮಿತಿ ರಚಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅನುವಾಗುವಂತೆ ಈ ಮಾತುಕತೆ ನಡೆದಿದೆ. ಸಭೆಯಲ್ಲಿ ರಾಜ್ಯದ ಜವಳಿ ಸಚಿವರಾದ ಶ್ರೀ ಶ್ರೀಮಂತ್ ಪಾಟೀಲ್ ಅವರೂ ಕೂಡಾ ಉಪಸ್ಥಿತರಿದ್ದರು.
City Today News
(citytoday.media)
9341997936