
ಮಾಧ್ಯಮ ಮಿತ್ರ ರಲ್ಲಿ ವಿನಂತಿ..
ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ತಮಗೆ ಬೇಕಾದ ರೀತಿಯಲ್ಲಿ ಕೆಲವು ಹೇಳಿಕೆಗಳನ್ನು ಸೃಷ್ಟಿಸಿ ಇದು ಸಂತೋಷ್ ಹೆಗ್ಡೆ ಅವರ (ಸ್ಟೇಟ್ ಮೆಂಟ್ )ಹೇಳಿಕೆ ಎಂದು ಅನೇಕ ಬಾರಿ ಬಿಂಬಿಸುವ ಪ್ರಯತ್ನ ನಡೆದಿದೆ. ಇದು ಸರಿಯಲ್ಲ. ವ್ಯವಸ್ಥೆ ವಿರುದ್ದ ನಾನು ಬೇಕಷ್ಟು ಬಾರಿ ಧ್ವನಿ ಎತ್ತಿದ್ದೇನೆ..ಮುಂದೆಯೂ ಅಗತ್ಯ ಸಂದರ್ಭಗಳಲ್ಲಿ ಇದು ಇದ್ದೇ ಇರುತ್ತದೆ. ಆದರೆ ನನ್ನದಲ್ಲದ ಹೇಳಿಕೆ ಇಲ್ಲವೇ ಅವರಿಗೆ ಬೇಕಾದ ರೀತಿಯಲ್ಲಿ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ನನ್ಮ ಹೆಸರು ದುರ್ಬಳಕೆ ಮಾಡಿಕೊಂಡಲ್ಲಿ ಸಹಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ನೇರವಾಗಿ ಮಾದ್ಯಮ ಮಿತ್ರರು ಸಂಪರ್ಕ ಮಾಡಿ ಪ್ರತಿಕ್ರಿಯೆ ಪಡೆಯುತ್ತಾರೆ. ಆದರೆ ನನ್ನದಲ್ಲದ ಮಾತನ್ನು ಸೃಷ್ಟಿಸಿ ಸೋಷಿಯಲ್ ಮೀಡಿಯಾದಲ್ಲಿ ಪ್ರಚುರಪಡಿಸಬಾರದೆಂದು ತಿಳಿಸುತ್ತೇನೆ.
-ನ್ಯಾ. ಸಂತೋಷ್ ಹೆಗ್ಡೆ
ಮಾಜಿ ಲೋಕಾಯುಕ್ತರು.
City Today News
(citytoday.media)
9341997936