
ಬೆಂಗಳೂರಿನಲ್ಲಿ ದಿನಾಂಕ:11.08.2020 ರ ರಾತ್ರಿ ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಗಲಭೆಯನ್ನು ವರದಿ ಮಾಡಲು ಹೋದ ಮಾಧ್ಯಮದವರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದನ್ನು ಪ್ರೆಸ್ಕ್ಲಬ್ ಆಫ್ ಬೆಂಗಳೂರು ಖಂಡಿಸುತ್ತದೆ.
ಆ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕೂಡಲೇ ಬಂಧಿಸಬೇಕೆಂದು ಬೆಂಗಳೂರು ಪ್ರೆಸ್ಕ್ಲಬ್ ಸರಕಾರವನ್ನು ಒತ್ತಾಯಿಸುತ್ತದೆ. ಪ್ರತಿ ಬಾರಿಯೂ ಇಂತಹ ಗಲಾಟೆ ನಡೆಯುವ ಸಂದರ್ಭದಲ್ಲಿ ಮಾಧ್ಯಮದವರ ಮೇಲೆ ಹಲ್ಲೆಯಾಗುತ್ತಿರುವುದು ನಿಜಕ್ಕೂ ಅತ್ಯಂತ ನೋವಿನ ವಿಷಯ.
ಇಂತಹ ಸಂದರ್ಭದಲ್ಲಿ ವರದಿ ಮಾಡುವ ಪತ್ರಕರ್ತರಿಗೆ ರಕ್ಷಣೆ ನೀಡಬೇಕೆಂದು ಸರಕಾರವನ್ನು ಹಿಂದೆ ಅನೇಕ ಭಾರಿ ಮನವಿ ಮಾಡಿದ್ದೇವೆ. ನಿಷ್ಪಕ್ಷವಾಗಿ ಕೆಲಸ ಮಾಡುವ ಪತ್ರಕರ್ತರಿಗೆ ರಕ್ಷಣೆ ನೀಡಬೇಕೆಂದು ಮತ್ತೊಮ್ಮೆ ಸರಕಾರವನ್ನು ಪ್ರೆಸ್ಕ್ಲಬ್ ಆಫ್ ಬೆಂಗಳೂರು ಒತ್ತಾಯಿಸುತ್ತದೆ.
-ಕೆ. ಸದಾಶಿವ ಶೆಣೈ
ಅಧ್ಯಕ್ಷರು
ಎಚ್.ವಿ. ಕಿರಣ್
ಪ್ರಧಾನ ಕಾರ್ಯದರ್ಶಿ
City Today News
(citytoday.media)
9341997936