ಅದಮ್ಯ ಚೇತನ ವತಿಯಿಂದ ದಿವಂಗತ ಅನಂತಕುಮಾರ್‌ ಅವರ ಒತ್ತಾಸೆಯ ಹಸಿರು ಭಾನುವಾರ ಕಾರ್ಯಕ್ರಮ ಸತತ 250 ನೇ ಕಾರ್ಯಕ್ರಮ

ಅದಮ್ಯ ಚೇತನ ವತಿಯಿಂದ ಸತತ 250 ನೇ ಹಸಿರು ಭಾನುವಾರ ಕಾರ್ಯಕ್ರಮ

ಬೆಂಗಳೂರು ಅಕ್ಟೊಬರ್‌ 11, 2020: ಬೆಂಗಳೂರು ನಗರದಲ್ಲಿ ಮರಗಿಡಗಳನ್ನು ಹೆಚ್ಚಿಸುವ ದಿವಂಗತ ಅನಂತಕುಮಾರ್‌ ಅವರ ಒತ್ತಾಸೆಯ ಹಸಿರು ಭಾನುವಾರ ಕಾರ್ಯಕ್ರಮ ಸತತ 250 ನೇ ಕಾರ್ಯಕ್ರಮ ನಡೆಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಅದಮ್ಯ ಚೇತನ ಸಂಸ್ಥೆಯ ಮುಖಸ್ಥೆ ಡಾ ತೇಜಸ್ವಿನಿ ಅನಂತಕುಮಾರ್‌ ಹೇಳಿದರು.

ಐಐಎಸ್‌ಸ್ಸಿ ಆವರಣದಲ್ಲಿ ಆಯೋಜಿಸಲಾಗಿದ್ದ 250 ನೇ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಾಂಧೀಜಿಯವರ ಸತ್ಯಾಗ್ರಹದ ರೀತಿಯಲ್ಲಿ ಪರಿಸರವನ್ನು ಹೆಚ್ಚಿಸುವ ಉದ್ದೇಶದಿಂದ ದಿವಂಗತ ಅನಂತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪ್ರಾರಂಭವಾದ ಹಸಿರು ಬೆಂಗಳೂರು 1:1 ಕಾರ್ಯಕ್ರಮ 250 ನೇ ವಾರವನ್ನು ಪೂರೈಸಿದೆ. 2015, ಸೆಪ್ಟೆಂಬರ್‌ 22 ರಂದು ಅನಂತಕುಮಾರ್‌ ಅವರ ಹುಟ್ಟುಹಬ್ಬದ ದಿನದಂದು ಪ್ರಾರಂಭವಾದ ಈ ಕಾರ್ಯಕ್ರಮ ಇದುವರೆಗೂ ಸತತವಾಗಿ ನಡೆದುಕೊಂಡು ಬಂದಿದೆ.

100 ನೇ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ 140 ಕ್ಕೂ ಹೆಚ್ಚು ಕಡೆ ಹಸಿರು ಭಾನುವಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಐಐಎಸ್‌ಸ್ಸಿ ವಿಜ್ಞಾನಿಗಳ ಸಂಶೋಧನೆಯಂತೆ ಪ್ರತಿಯೊಬ್ಬ ಮನುಷ್ಯನಿಗೆ ಉಸಿರಾಡಲು 7 ಮರಗಳ ಅವಶ್ಯಕತೆ ಇದೆ. ಈಗ ಬೆಂಗಳೂರಿನಲ್ಲಿ 7 ಜನರಿಗೆ ಒಂದರಂತೆ ಮರಗಳ ಸಂಖ್ಯೆ ಇದೆ. 30 ವರ್ಷಗಳ ಹಿಂದೆ ನಗರದಲ್ಲಿ 25 ಲಕ್ಷ ಜನರಿದ್ದು 25 ಲಕ್ಷ ಮರಗಳಿತ್ತು. ಪ್ರಸ್ತುತ ಒಂದು ಕೋಟಿ ಜನಸಂಖ್ಯೆ ಇದ್ದು ಪ್ರತಿಯೊಬ್ಬ ಮನುಷ್ಯನಿಗೆ ಒಂದು ಮರದಂತೆ ಗಿಡ ನೆಡುವ ಉದ್ದೇಶವನ್ನು ಹಸಿರು ಭಾನುವಾರ ಕಾರ್ಯಕ್ರಮ ಹೊಂದಿದೆ. ಅದಮ್ಯ ಚೇತನದ ವತಿಯಿಂದ ಪ್ರತಿ ಭಾನುವಾರ ಗಿಡ ನೆಡುವ ಕಾರ್ಯಕ್ರಮವನ್ನು ಮಾಡಲು ನಿರ್ಧರಿಸಿ 250 ಭಾನುವಾರ ಗಳಿಂದ ನಿರಂತರವಾಗಿ ಮಾಡಿಕೊಂಡು ಬರಲಾಗಿದೆ ಈ ಕಾರ್ಯಕ್ರಮ ಮುಂದುವರೆಯಲಿದೆ ಎಂದು ಹೇಳಿದರು.

ಈ ಕಾರ್ಯಕ್ರಮದ ಇನ್ನೊಂದು ವಿಶೇಷತೆ ಏನೆಂದರೆ, ಗಿಡಗಳನ್ನು ನೆಡುವುದಷ್ಟೇ ಅಲ್ಲದೆ ಅವುಗಳ ಪೋಷಣೆಯನ್ನು ಕೈಗೆತ್ತಿಕೊಂಡಿರುವುದು. ಎರಡು ಭಾನುವಾರಗಳ ಮಧ್ಯೆ ನೆಟ್ಟಿರುವ ಗಿಡಗಳ ಆರೈಕೆ ಹಾಗೂ ಅವುಗಳಿಗೆ ಬೇಕಾದ ಪೊಷಕಾಂಶಗಳ ಪೂರೈಕೆಯನ್ನು ಅದಮ್ಯ ಚೇತನ ಮಾಡುತ್ತಿದೆ. ರಾಯಚೂರು ಹಾಗೂ ಬಳ್ಳಾರಿ ಸೇರಿದಂತೆ ರಾಜ್ಯದ ಇತರೆ ಭಾಗಗಳಲ್ಲೂ ಹಸಿರು ಭಾನುವಾರ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಅಕ್ಕಿ ತೊಳೆದ ನೀರನ್ನು ಟ್ಯಾಂಕರ್‌ ಮೂಲಕ ಈ ಗಿಡಗಳಿಗೆ ಹಾಕುವ ಮೂಲಕ ಅವುಗಳ ಆರೈಕೆಯನ್ನು ಮಾಡಲಾಗುತ್ತಿದೆ. ಇದರ ಜೊತೆಯಲ್ಲಿಯೇ ತಾರಸಿ ತೋಟ, ಶೂನ್ಯ ತ್ಯಾಜ್ಯ ಈ ಎಲ್ಲಾ ಕಲ್ಪನೆಗಳು ಜನಜನಿತವಾಗುತ್ತಿವೆ.

ಈ ಕಾರ್ಯಕ್ರಮ ಸ್ವಯಂ ಸೇವಕರ ಸ್ವಯಂ ಇಚ್ಚೆ ಇಂದ ಬಂದು ಮಾಡುವಂತಹ ಕಾರ್ಯಕ್ರಮವಾಗಿದ್ದು, ಜನಾಂದೋಲನವಾಗಿ ರೂಪುಗೊಂಡಿದೆ.

ಈ ಕಾರ್ಯಕ್ರಮದಲ್ಲಿ ಸಾವಿರಾರು ಸ್ವಯಂಸೇವಕರು, ಸಾರ್ವಜನಿಕರು, ಹಸಿರು ಕಾರ್ಯಕರ್ತರುಗಳು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಅನಂತಕುಮಾರ್‌ ಅವರು ದಿವಂಗತರಾದ ಸಂಧರ್ಭದಲ್ಲೂ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್‌ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಂದುವರೆಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

250 ನೇ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಐಐಎಸ್‌ಸ್ಸಿಯ ಪ್ರೋ ರಾಮಚಂದ್ರ, ಹಾಗೂ ಹಲವಾರು ಐಐಎಸ್‌ಎಸ್ಸಿ ವಿಜ್ಞಾನಿಗಳು ಮತ್ತು ಲಯನ್ಸ್‌ ಇಂಟರ್‌ನ್ಯಾಷನಲ್‌ ಡಿಸ್ಟ್ರಿಕ್ಟ್‌ 317 ಏ ನ ಅಧ್ಯಕ್ಷರಾದ ಎ ಸಿ ಬಾಲಸುಬ್ರಮಣ್ಯ ಮತ್ತು ಅವರ ತಂಡದವರು ಹಾಗೂ ಅದಮ್ಯ ಚೇತನ ಸಂಸ್ಥೆಯ ಹಸಿರು ಕಾರ್ಯಕರ್ತರು ಪಾಲ್ಗೊಂಡಿದ್ದರು.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.