” ಕದ್ದವರೆ ಕಳ್ಳರಲ್ಲಾ ಕದಿಯಲು ಸಹಕರಿಸಿದವರು ಸಹ ಕಾನೂನಿನ ದೃಷ್ಟಿಯಲ್ಲಿ ಕಳ್ಳರು “

ಪತ್ರಿಕಾ ಹೇಳಿಕೆ

ವಾರಸುದಾರರಿಲ್ಲದ ಅನಾಥ ಶವಗಳನ್ನು ಬಿಡದೆ ಕದಿಯುವ ಕಿರಾತಕರು ಸಂಸದರಾದ ಬಿ.ಎಸ್.ವೈ.ರಾಘವೇಂದ್ರರವರೆ , ಈ ಆಸ್ಪತ್ರೆಯ ಕಿರಾತಕ ಮುಖ್ಯಸ್ಥನೊಂದಿಗೆ ( ತಪೋವನ , ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ ದಾವಣಗೆರೆ ) ನಿಮಗಿರುವ ವಿಶ್ವಾಸ ಮತ್ತು ಸಂಬಂಧವನ್ನು ಸಾರ್ವಜನಿಕರ ಮುಂದೆ ಬಹಿರಂಗ ಗೊಳಿಸಿ ” ಕದ್ದವರೆ ಕಳ್ಳರಲ್ಲಾ ಕದಿಯಲು ಸಹಕರಿಸಿದವರು ಸಹ ಕಾನೂನಿನ ದೃಷ್ಟಿಯಲ್ಲಿ ಕಳ್ಳರು ” ಸತ್ಯ ಹೊರಬರಬೇಕಾದರೆ ಸರ್ಕಾರವು ಸಿ.ಬಿ.ಐ. ತನಿಖೆಗೆ ನೀಡಲಿ . ಕರ್ನಾಟಕದ ವೈದ್ಯಕೀಯ ಸಚಿವರು ಮತ್ತು ಗೃಹ ಸಚಿವರ ವಿರುದ್ಧ ದೂರು ದಾಖಲು . ವಾಸ್ತವ ವಿಷಯ ಕರ್ನಾಟಕ ಪೋಲಿಸ್ ಇಲಾಖೆಯ ದಾಖಲೆಗಳಲ್ಲಿ ವಾರಸುದಾರರು ಇಲ್ಲದೆ ಇರುವ ಶವಗಳ ಶವಸಂಸ್ಕಾರಗಳ ಸಂಖ್ಯೆ ಸರಿ ಇರುತ್ತದೆ . ಆದರೆ ಇದರ ನಿಜ ವಾಸ್ತವವೇ ಬೇರೆ ಇರುತ್ತದೆ . ಇದರ ಮೊದಲ ಭಾಗವಾಗಿ ಈ ದಾಖಲೆಗಳೊಂದಿಗೆ ನಿಮ್ಮ ಮುಂದೆ ಕರ್ನಾಟಕದ ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ರಿಸರ್ಚ್ ಸೆಂಟರಗಳು ತಮ್ಮಲ್ಲಿ ವಿದ್ಯಾಭ್ಯಾಸ ಮಾಡುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮನುಷನ ನರಕೋಶ ಮತ್ತು ಅಂಗಾಂಗಗಳ ಪರಿಚಯ ಮತ್ತು ಪರೀಕ್ಷಾ ವಿಧಾನಗಳನ್ನು ತಿಳಿಸಲು ಕಾಲೇಜಿನ ಮುಖ್ಯಸ್ಥರು ಕೆಲ ಖಾಸಗಿ ವ್ಯಕ್ತಿಗಳು ಮತ್ತು ಇಲಾಖಾವಾರು ಅಧಿಕಾರಿಗಳೊಂದಿಗೆ , ಕಾನೂನು ಬಾಹಿರವಾಗಿ ಕದ್ದು ( ಕರ್ನಾಟಕ ಅನಾಟಮಿ ಆಕ್ಟ್ ೧೯೫೭ ) ಉಲ್ಲಂಘಿಸಿ ಕಾಲೇಜುಗಳು ಮತ್ತು ರಿಸರ್ಚ್ ಸೆಂಟರಗಳಲ್ಲಿ ಇಟ್ಟುಕೊಳ್ಳುವ ಪ್ರವೃತ್ತಿ ಅತಿ ಜಾಣತನದಿಂದ ನಡೆದು ಬಂದಿರುತ್ತದೆ . ಇದು ಕೆಲ ಅಧಿಕಾರಿ ವರ್ಗಕ್ಕೆ ತಿಳಿದರೂ ಸಹ ಕೆಲ ಗಣ್ಯ ವ್ಯಕ್ತಿಗಳ ಕಾಣದ ಕೈಗಳ ಒತ್ತಡಕ್ಕೆ ಮಣಿದು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ . ಇದಕ್ಕೆ ಒಂದು ಉತ್ತಮ ತಾಜಾ ಉದಾಹರಣೆ ಮತ್ತು ಸಾಕ್ಷಿಯನ್ನು ಈ ಪತ್ರಿಕಾಗೋಷ್ಠಿ ಮೂಲಕ ತಮ್ಮ ಮುಂದೆ ಬಯಲಿಗೆ ಇಡುತ್ತಿದ್ದೇವೆ . ಸಂಸದರಾದ ಮಾನ್ಯ ಬಿ.ಎಸ್.ವೈ.ರಾಘವೇಂದ್ರರವರೆ ದಾವಣಗೆರೆ ಜಿಲ್ಲೆಯ ತಪೋವನ ಮಲ್ಲಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ವೈದ್ಯಕೀಯ ವಿದ್ಯಾಲಯದ ಮುಖ್ಯಸ್ಥರಾದ ” ಶಶಿಕುಮಾರ್ ಮೆಹರವಾಡಿ ವಸುದೇವ ರೊಂದಿಗೆ ನಿಮ್ಮ ವಿಶ್ವಾಸ ಮತ್ತು ಸಂಬಂಧವು ಯಾವ ರೀತಿ ಮತ್ತು ರೂಪವೆಂಬುವದನ್ನು ಸಾರ್ವನಿಕರ ಮುಂದ ನೇರವಾಗಿ ಬಹಿರಂಗಪಡಿಸಿ . ಇದಕ್ಕೆ ಕಾರಣವಿಷ್ಟೆ.

ಈ ಸಂಸ್ಥೆಯ ಮುಖ್ಯಸ್ಥನು , ದಾವಣಗೆರೆ ಗಾಂಧಿನಗರದ ರುದ್ರಭೂಮಿಯಿಂದ ದಿನಾಂಕ ೨೯.೫.೨೦೧೯ ರಂದು ವಾರಸುದಾರರು ಇಲ್ಲದ ಅನಾಥ ಶವ ಮತ್ತು ಶವದ ಅಂಗಾಂಗಗಳನ್ನು ಖಾಸಗಿ ವ್ಯಕ್ತಿಗಳೊಂದಿಗೆ ಸೇರಿ ಕಾನೂನು ಬಾಹಿರವಾಗಿ ಕದ್ದು ತನ್ನ ವೈದ್ಯಕೀಯ ಸಂಸ್ಥೆಯಲ್ಲಿ ಇಟ್ಟುಕೊಂಡಿರುತ್ತಾರೆ . ಕರ್ನಾಟಕ ಅನಾಟಮಿ ಕಾಯ್ದೆಯನ್ವಯ ೫ ಇಲಾಖೆಯ ಪೂರ್ವ ನಿರಾಕ್ಷೇಪಣ ಪ್ರಮಾಣಪತ್ರ ಪಡೆಯದೆ ಅಕ್ರಮವಾಗಿ ಕದ್ದು ಇಟ್ಟುಕೊಂಡಿರುತ್ತಾರೆಂದು ಸಾಕ್ಷಿ ಸಮೇತ ಸಲ್ಲಿಸಿದ ದೂರು ಇದುವರೆಗೂ ಸೂಕ್ತ ರೀತಿ ತನಿಖೆ ನಡೆಸದೆ ಹಿಂಬರಹಗಳನ್ನು ನೀಡಿರುವುದು ಬಹುದೊಡ್ಡ ಅನುಮಾನಕ್ಕೆ ಆಸ್ಪದವಾಗಿರುತ್ತದೆ . ಇಲಾಖಾವಾರು ಅಧಿಕಾರಿಗಳು ದ್ವಂದ್ವ ನಿಲುವಿನ ದೃಢೀಕೃತ ದಾಖಲೆಗಳನ್ನು ನೀಡುತ್ತಿದ್ದಾರೆ . ಮಾನ್ಯ ಬಿ.ಎಸ್.ವೈ. ರಾಘವೇಂದ್ರರವರೆ , ಮೇಲ್ಕಂಡ ಸಂಸ್ಥೆಯ ಮುಖ್ಯಸ್ಥರು ತಮ್ಮ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ . ಮತ್ತು ಒತ್ತಡ ಹೇರುತ್ತಿದ್ದಾರೆ ಎನ್ನುವ ನೇರ ಆರೋಪಗಳು ಕೇಳಿ ಬರುತ್ತಿದ್ದು ಇದಕ್ಕೆ ಪೂರಕವೆಂಬಂತೆ ಘಟನಾವಳಿಗಳೂ ಸಹ ನಡೆಯುತ್ತಿರುವುದು ವಾಸ್ತವ ವಿಷಯಕ್ಕೆ ಪುಷ್ಟಿ ನೀಡಿದಂತಿರುತ್ತದೆ . ದಿನಾಂಕ ೨೦/೦೧/೨೦೨೧ ರಂದು ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸಿ.ಬಿ.ಐ.ರವರಿಗೆ ದೂರು ಸಲ್ಲಿಸಿರುತ್ತೇವೆ . ಇದರ ಮರುದಿನವೆ ದಿನಾಂಕ ೨೩/೦೧/೨೦೨೧ ರಂದು ತಾವುಗಳು ಶಿವಮೊಗ್ಗದ ಖಾಸಗಿ ಜಾಗ ಒದರಲ್ಲಿ ಗಂಟೆಗಟ್ಟಲೆ ನಿರಂತರವಾಗಿ ಸಂಸದರೆಂಬುವುದನ್ನು ಮರೆತು ಮೇಲ್ಕಡ ಸಂಸ್ಥೆಯ ಆರೋಪ ಹೊತ್ತ ಮುಖ್ಯಸ್ಥನೊಂದಿಗೆ ಚರ್ಚೆಯಲ್ಲಿ ಭಾಗಿದಾರರಾಗಿರುತ್ತೀರಿ . ಇದಕ್ಕೆ ತಾವುಗಳು ಸ್ಪಷ್ಟನೆಯನ್ನು ಸಾರ್ವಜನಿಕವಾಗಿ ಮತ್ತು ಸಂಸ್ಥೆಯ ಮುಖ್ಯಸ್ಥನ ವಿಶ್ವಾಸ ಹಾಗೂ ಸಂಬಂಧದ ಬಗ್ಗೆ ಬಹಿರಂಗವಾಗಿ ಸಾರ್ವಜನಿಕರ ಮುಂದೆ ಹೇಳಿಕೆ ನೀಡುವಂತೆ ಆಗ್ರಹಿಸುತ್ತೇವೆ . ಈ ಪತ್ರಿಕಾ ಮತ್ತು ಮಾಧ್ಯಮಗೋಷ್ಟಿಯಲ್ಲಿ ಮೊದಲ ಭಾಗವಾಗಿ ಅನಾಥ ಶವಗಳನ್ನು ಮತ್ತು ಅಂಗಾಂಗಗಳನ್ನು ಯಾವ ರೀತಿ ಕಳ್ಳ ಮಾರ್ಗದಲ್ಲಿ ಸಾಗಾಣಿಕೆ ನಡೆಯುತ್ತದೆ ಎಂಬುವುದರ ಬಗ್ಗೆ ವಿಸ್ಕೃತ ಹೇಳಿಕೆಯನ್ನು ನೀಡುವುದರ ಜೊತೆಗೆ ಕೆಲ ದಾಖಲಾತಿಗಳನು ( ಇಲಾಖಾವಾರು ನೀಡಿರುವ ದಾಖಲಾತಿಗಳು ) ತಮ್ಮ ಮುಂದೆ ಇಡುತ್ತಾ , ಮುಂದುವರೆದು ಹೇಳುವುದೇನೆಂದರೆ ಬಹುತೇಕ ಕರ್ನಾಟಕದ ವೈದ್ಯಕೀಯ ಕಾಲೇಜುಗಳು ಮತ್ತು ರಿಸರ್ಚ್ ಸೆಂಟರ್‌ಗಳಿಗೆ ಯಾವ ಯಾವ ಅಧಿಕಾರಿಗಳ ಮತ್ತು ರಾಜಕಾರಣಿಗಳ ಮತ್ತು ಕಾಣದ ಕೈಗಳು ಕಾಣದ ರೀತಿ ಕಾನೂನು ನಿಯಮವಾಳಿಗಳನ್ನು ಉಲ್ಲಂಘಿಸಿ ವೈದ್ಯಕೀಯ ಕಾಲೇಜುಗಳಿಗೆ ಮತ್ತು ರಿಸರ್ಚ್ ಸೆಂಟರ್‌ಗಳಿಗೆ ಪರವಾನಿಗೆ ಮತ್ತು ಪರವಾನಿಗೆ ನವೀಕರಣಕ್ಕೆ ತಮ್ಮ ಕೃಪಾ ಕಟಾಕ್ಷವಿದೆ ಎಂಬುವುದನ್ನು ದಾಖಲೆ ಸಮೇತ ಮುಂದಿನ ಭಾಗದಲ್ಲಿ ದೃಡೀಕೃತ ದಾಖಲಾತಿಗಳೊಂದಿಗೆ ತಮ್ಮ ಮುಂದೆ ಬಹಿರಂಗಗೊಳಿಸುತ್ತೇವೆ ಎಂದು ಹೇಳಲು ಬಯಸುತ್ತೇವೆ .

– ವೀರಾಚಾರ್ ಬಿ.ಯು-ಅಧ್ಯಕ್ಷರು ವಿ.ಕೆ.ಎಸ್.ಎಸ್. ಹರೀಶ್‌ಹಳ್ಳಿ – ಸಮಾಜ ಕಾರ್ಯಕರ್ತರು,         ಪವನರಾಜ್ ಪವರ್, 

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.