ಬಿಎಂಟಿಸಿ ಕೇಂದ್ರ ಕಛೇರಿ ಬಳಿ ಪ್ರತಿಭಟನೆ

ಪತ್ರಿಕಾಗೋಷ್ಟಿಯ ಹೇಳಿಕೆ

ಸಾರಿಗೆ ಕಾರ್ಮಿಕರು ಇತ್ತೀಚೆಗೆ ನಡೆಸಿದ ಮುಷ್ಕರದ ನಂತರದಲ್ಲಿ ಸಮಸ್ಯೆಗಳು ತೀವ್ರವಾಗಿ ಹೆಚ್ಚಳವಾಗಿವೆ . ನಿಗದಿತ ಸಮಯಕ್ಕೆ ವೇತನಗಳು ಸಿಗುತ್ತಿಲ್ಲ . ಅರ್ಧ ಸಂಬಳಗಳನ್ನು ನೀಡಲಾಗಿದೆ . ಈಗಷ್ಟೇ ಶಾಲಾ ಕಾಲೇಜುಗಳು ಆರಂಭವಾಗಿದ್ದು , ತಮ್ಮ ಮಕ್ಕಳಿಗೆ ಶಿಕ್ಷಣ ಶುಲ್ಕವನ್ನು ಕಟ್ಟಲಾಗದ ಪರಿಸ್ಥಿತಿ ಉದ್ಭವವಾಗಿದೆ . ಕಾರ್ಮಿಕರ ಗಳಿಕೆ ರಜೆಗಳನ್ನು ಕಡಿತ ಮಾಡಲಾಗುತ್ತಿದೆ . ರಜೆಗಳನ್ನು ವಜಾ ಮಾಡಿಕೊಂಡು ಸಂಬಳವನ್ನು ನೀಡಲಾಗುತ್ತಿದೆ . ಬಲವಂತವಾಗಿ ರಜೆಗಳನ್ನು ಹಾಕುವಂತೆ ಮಾಡಲಾಗುತ್ತಿದೆ . ಕಾರ್ಮಿಕರ ಹಕ್ಕಿನ ವಾರದ ರಜೆಯನ್ನು ನೀಡದ ಕಿರುಕುಳ ನೀಡಲಾಗುತ್ತಿದೆ . ಪ್ರತಿದಿನದ ಕೆಲಸವನ್ನು ಪಡೆದುಕೊಳ್ಳಲು ನಾಲ್ಕಾರು ಗಂಟೆಗಳು ಕಾಯಬೇಕಾಗಿದೆ . ಗಂಟೆಗಟ್ಟಲೆ ಕಾಯಿಸಿ ನಂತರ ಕೆಲಸ ನೀಡದೆ ರಜೆ ಹಾಕುವಂತೆ ಬಲವಂತ ಮಾಡಲಾಗುತ್ತಿದೆ . ಕೆಲಸ ಪಡೆದುಕೊಳ್ಳಲು ಅಧಿಕಾರಿಗಳಿಗೆ ಲಂಚ ನೀಡಬೇಕಾದ ಪರಿಸ್ಥಿತಿಯಿದೆ . ಪೂರ್ಣಪ್ರಮಾಣದಲ್ಲಿ ಮಾರ್ಗಾಚರಣೆ ಮಾಡದಿರುವುದರಿಂದ 8 ಗಂಟೆ . ಬದಲಿಗೆ 12 ಗಂಟೆ ಕೆಲಸ ಮಾಡುವಂತಾಗಿದೆ . ಮಹಿಳಾ ಕಾರ್ಮಿಕರಿಗೆ ವಿಪರೀತ ಸಮಸ್ಯೆಗಳು ಉಂಟಾಗಿವೆ . ಮೊದಲ ಮತ್ತು ಸಾಮಾನ್ಯ ಪಾಳಿಗಳಲ್ಲಿ ಕೆಲಸ ನೀಡದಿರುವುದು ಮತ್ತು 12 ಗಂಟೆಗಳ ಕಾಲ ಕೆಲಸ ಮಾಡಬೇಕಿರುವುದರಿಂದ ನೈಸರ್ಗಿಕ ಕ್ರಿಯೆಗಳಿಗೂ ಅನಾನುಕೂಲ ಉಂಟಾಗಿದೆ ಮತ್ತು ಕೌಟುಂಬಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತಿವೆ . ಕಾರ್ಮಿಕರ ಮೇಲೆ ಶಿಸ್ತಿನ ಕ್ರಮಗಳು ಕೆಲವೊಮ್ಮೆ ಸೇಡಿನ ಕ್ರಮಗಳಾಗಿ ಪರಿವರ್ತನೆಯಾಗುತ್ತಿವೆ . ಡಿಪೋ ಮಟ್ಟದಲ್ಲಿ ಕುಂದುಕೊರತೆ ನಿವಾರಣಾ ಸಮಿತಿಗಳು ಅಸ್ತಿತ್ವದಲ್ಲಿ ಇಲ್ಲದಿರುವುದರಿಂದ ಕಾರ್ಮಿಕರ ಮೇಲಿನ ಕಿರುಗಳಗಳಿಗೆ ಪರಿಹಾರವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ . ಇದೇ ಸಂದರ್ಭದಲ್ಲಿ 300 ಎಲೆಕ್ಟಿಕ್‌ ಬಸ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ತರುವುದಾಗಿ ಸಾರಿಗೆ ಸಚಿವರು ಹೇಳಿದ್ದಾರೆ . ಮುಂದಿನ ದಿನಗಳಲ್ಲಿ ಸಾರಿಗೆ ನಿಗಮಗಳನ್ನು ಖಾಸಗೀಕರಿಸುವ ಹುನ್ನಾರದ ಭಾಗವಾಗಿ ಇಂತಹ ಪ್ರಯತ್ನಗಳನ್ನು ಸರ್ಕಾರ ಮಾಡುತ್ತಿದೆ . ಸಾರಿಗೆ ಕಾರ್ಮಿಕರ ಭವಿಷ್ಯದ ಮೇಲೆ ಮತ್ತು ರಾಜ್ಯದ ಜನತೆಯ -2 ಸಾರ್ವಜನಿಕ ಸಾರಿಗೆಯ ಹಕ್ಕಿನ ಮೇಲೆ ಇದು ನಕಾರಾತ್ಮಕ ಪರಿಣಾಮವನ್ನು ಬೀರಲಿದೆ .

ಈ ಹಿನ್ನೆಲೆಯಲ್ಲಿ ಆಡಳಿತ ವರ್ಗದ ಮತ್ತು ಸರ್ಕಾರದ ಗಮನ ಸೆಳೆಯಲು 10-02-20 21 ರಂದು ಬುಧವಾರ ಮಧ್ಯಾಹ್ನ 1.00 ಗಂಟೆಗೆ ಬಿಎಂಟಿಸಿ ಕೇಂದ್ರ ಕಛೇರಿ ಬಳಿ ಪ್ರತಿಭಟನೆ ನಡೆಸಿ , ಮನವಿ ಸಲ್ಲಿಸಲು ಕ.ರಾ.ರ.ಸಾ.ನಿಗಳು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ತೀರ್ಮಾನಿಸಿದೆ .

ಬೇಡಿಕೆಗಳು 1. ನಿಗದಿತ ಸಮಯಕ್ಕೆ ವೇತನ ಪಾವತಿ ಮಾಡಬೇಕು . ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು . 2 ವಾರದ ರಜೆಯನ್ನು ಕಡ್ಡಾಯವಾಗಿ ಷರತ್ತುಗಳಿಲ್ಲದೆ ನೀಡಬೇಕು . ಕಾರ್ಮಿಕರ ರಜೆ ಕಡಿತ ನಿಲ್ಲಿಸಬೇಕು . ಹಿಂದೆ ಕಡಿತ ಮಾಡಿರುವ ರಜೆಗಳನ್ನು ವಾಪಸ್ ನೀಡಬೇಕು . 3. ಪೂರ್ಣ ಪ್ರಮಾಣದಲ್ಲಿ ಮಾರ್ಗಾಚರಣೆ ಆರಂಭಿಸಿ , ನಾಲ್ಕು ಪಾಳಿಗಳಲ್ಲಿ ಕೆಲಸ ನೀಡಬೇಕು . ಕೆಲಸ ನೀಡಲು ಲಂಚ ಪಡೆಯುವ ಅಧಿಕಾರಿಗಳನ್ನು ಶಿಕ್ಷಿಸಬೇಕು . 4 , ಮಹಿಳಾ ಕಾರ್ಮಿಕರಿಗೆ ಮೊದಲ ಮತ್ತು ಸಾಮಾನ್ಯ ಪಾಳಿಯಲ್ಲಿ ಕೆಲಸಕ್ಕೆ ಆದ್ಯತೆ ನೀಡಬೇಕು . 5 , ಘಟಕ ಮಟ್ಟದಲ್ಲಿ ಕಾರ್ಮಿಕರ ಕುಂದು ಕೊರತೆ ನಿವಾರಣಾ ಸಮಿತಿಗಳನ್ನು ರಚಿಸಿ ಸಮಸ್ಯೆಗಳ ನಿವಾರಣೆಗೆ ಕ್ರಮ ವಹಿಸಬೇಕು . 6 , ಗುತ್ತಿಗೆ ಆಧಾರದಲ್ಲಿ 300 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಯನ್ನು ನಿಲ್ಲಿಸಬೇಕು , ಸಾರಿಗೆ ನಿಗಮಗಳೇ ನೇರವಾಗಿ ತಮ್ಮ ಸಿಬ್ಬಂದಿಯ ಮೂಲಕವೇ ಕಾರ್ಯಾಚರಣೆ ಮಾಡಬೇಕು .

– ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.