ಮುಖ್ಯಮಂತ್ರಿಗಳು  2021-2022 ರ ಆಯ – ವ್ಯಯದಲ್ಲಿ ” ಸವಿತಾ ಸಮಾಜದ ಅಭಿವೃದ್ಧಿ ನಿಗಮಕ್ಕೆ” ಸೂಕ್ತ ರೀತಿಯಲ್ಲಿ ಅನುದಾನ ನೀಡಲು ಮನವಿ

ಪತ್ರಿಕಾ ಗೋಷ್ಠಿ: “ಈ ವರ್ಷದ 2021-2022ರ ಆಯ-ವ್ಯಯದಲ್ಲಿ. ಸವಿತಾ ಸಮಾಜದ ಅಭಿವೃದ್ಧಿ ನಿಗಮಕ್ಕೆ ಸೂಕ್ತ ರೀತಿಯಲ್ಲಿ ಅನುದಾನ ನೀಡುವ ಬಗ್ಗೆ “

ಸವಿತಾ ಸಮಾಜದ ಅಭಿವೃದ್ಧಿ ನಿಗಮಕ್ಕೆ 05.03.2020 , ಆಯ – ವ್ಯಯ 2020-2021 ರಲ್ಲಿ ಮುಖ್ಯಮಂತ್ರಿಗಳು ಮಂಡಿಸಿದ ಮಂಡನೆಯಲ್ಲಿ ಕರ್ನಾಟಕ ರಾಜ್ಯ ಸವಿತಾ ಸಮಾಜದ ಅಭಿವೃದ್ಧಿ ನಿಗಮಕ್ಕೆ ಯಾವುದೇ ಹಣವನ್ನು ಒದಗಿಸಿರುವುದಿಲ್ಲ . ಆಯ – ವ್ಯಯ ಪುಸ್ತಕದ 89ನೇ ಟಿಪ್ಪಣಿಯಲ್ಲಿ ಉಪ್ಪಾರ, ವಿಶ್ವಕರ್ಮ , ನಿಜಶರಣ ಅಂಬಿಗ ಆರ್ಯವೈದ್ಯ , ಕುಂಬಾರ ಮತ್ತು ಗೊಲ್ಲ ಸಮುದಾಯದವರಿಗೆ ಅನುದಾನವನ್ನು 2020-2021ನೇ ಸಾಲಿನಲ್ಲಿ ಒದಗಿಸಲಾಗಿದೆ . ದುರದೃಷ್ಟ ಸಮಾಜಕವಾಗಿ , ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಶೋಷಣೆಗೊಳಪಟ್ಟ , ಸವಿತಾ ಸಮಾಜದ ಅಭಿವೃದ್ಧಿ ನಿಗಮಕ್ಕೆ ಯಾವುದೇ ಅನುದಾನವನ್ನು ಒದಗಿಸಿರುವುದಿಲ್ಲ . ಹೀಗಾಗಿ 2021-2022 ನೇ ಆರ್ಥಿಕ ವರ್ಷದಲ್ಲಿ ಮಂಡಿಸುವ ಆಯ – ವ್ಯಯದಲ್ಲಿ ಅತ್ಯಂತ ಶೋಷಣೆಗೊಳಪಟ್ಟ ಸವಿತಾ ಸಮಾಜಕ್ಕೆ ಸೂಕ್ತ ಅನುದಾನ ( ಅಭಿವೃದ್ಧಿ ನಿಗಮಕ್ಕೆ ) ವನ್ನು ನೀಡಬೇಕೆಂದು ಕೋರುತ್ತೇವೆ .

ಸರ್ಕಾರ ಆಜ್ಞೆ ಸಂಖ್ಯೆ : ಎಸ್‌ಡಬ್ಲೂಡಿ 225 ಬಿಸಿಎ 2000 ದಿ: 30.03.2000 ಈ ಆಜ್ಞೆಯಲ್ಲಿ ನಮೂದಿಸಿರುವ 2ಎ ಪ್ರವರ್ಗದಲ್ಲಿ ಸಂಖ್ಯೆ : 8 ರಲ್ಲಿ ಸವಿತಾ ಸಮಾಜವನ್ನು ಸೇರಿಸಲಾಗಿದೆ . ಪ್ರವರ್ಗ 2ಎ ರಲ್ಲಿ 102 ಜಾತಿಗಳನ್ನು ನಮೂದಿಸಲಾಗಿದೆ . ಈ 102 ಜಾತಿಗಳಲ್ಲಿ ಸವಿತಾ ಸಮಾಜದವರು ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ . ಸವಿತಾ ಸಮಾಜದಂತೆ ಇರುವ ಇತರೆ ಸಮಾಜಗಳಾದ ಮಡಿವಾಳ , ತಿಗಳ , ಕುಂಬಾರ ಹಾಗೂ ದೇವಾಡಿಗ ಈ ಜಾತಿಗಳ ಜೊತೆಗೆ ಪ್ರವರ್ಗ-2ಎ ನಲ್ಲಿರುವ ಸಂಖ್ಯಾಶುಲದಲ್ಲಿ ಶೇ .1 ಕ್ಕಿಂತ ಕಡಿಮೆಯಿರುವ ಜಾತಿಗಳನ್ನು ಸೇರಿಸಿ ಪ್ರವರ್ಗ-2ಎ ನ ಪರಿಷ್ಕರಿಸಿ ಈ ಜಾತಿಗಳ ಸಮೂಹಕ್ಕೆ ಪ್ರವರ್ಗ-2ಎ ನಲ್ಲಿರುವ ಶೇ .15 ರಷ್ಟು ಇರುವ ಮೀಸಲಾತಿಯನ್ನು ಪ್ರವರ್ಗ-1ಕ್ಕೆ ಸೇರಿಸುವುದು ಅಥವಾ ಪ್ರವರ್ಗ-2 ನ್ನು ವಿಭಜಿಸಿ , ಪ್ರವರ್ಗ-2ಸಿ ಎಂದು ಪರಿಗಣಿಸಿ ಪ್ರತ್ಯೇಕ ಶೇ .5 ರಷ್ಟು ಮೀಸಲಾತಿ ನೀಡಬೇಕೆಂದು ಕೋರುತ್ತೇವೆ .

ಹೀಗಾಗಿ , ಸಾಮಾಜಿಕ ನ್ಯಾಯ ಒದಗಿಸಿದಂತೆ ಆಗುತ್ತದೆ . ಸವಿತಾ ಸಮಾಜ ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದೇವೆ .

ನಾನು ಹಿಂದುಳಿದ ವರ್ಗಗಳ ಆಯೋಗದಲ್ಲಿ ಸದಸ್ಯನಾಗಿದ್ದಾಗ ( 04.12.1997 – 04.12.2000 ) 2 ಎ ಪ್ರವರ್ಗದಲ್ಲಿರುವ 101 ಜಾತಿಗಳ ಪಟ್ಟಿಯನ್ನು ಪರಿಷ್ಕರಿಸಿ ಸವಿತಾ , ಮಡಿವಾಳ , ತಿಗಳ , ಕುಂಬಾರ , ದೇವಾಡಿಗೆ ಈ ಜಾತಿಗಳ ಜೊತೆಗೆ ಸಂಖ್ಯಾ ಬಲದಲ್ಲಿ ಶೇ .1 ಕ್ಕಿಂತ ಕಡಿಮೆಯಿರುವ ಜಾತಿಗಳು ಸೇರಿದೆ . ಹೊಸ ಪ್ರವರ್ಗ ಸೃಷ್ಟಿಸಬೇಕಾಗಿ ಆಯೋಗಕ್ಕೆ ಒಂದು ಪ್ರಸ್ತಾವನೆಯನ್ನು ಸಲ್ಲಿಸಿದ್ದೆ . ಇದರ ಆಧಾರದ ಮೇಲೆ ಪರಿಗಣಿಸಲು ವಿನಂತಿ ,

– ಪ್ರೊ . ಎನ್.ವಿ. ನರಸಿಂಹಯ್ಯ ಸವಿತಾ ಸಮಾಜ ( ನೋ ) ಮಾಜಿ ಅಧ್ಯಕ್ಷರು ಹಾಗೂ ಗೌರವಾಧ್ಯಕ್ಷರು

ಪತ್ರಿಕಾ ಗೋಷ್ಠಿ ಯಲ್ಲಿ ಆರ್ . ವೇಣುಗೋಪಾಲ್ , ಮಾಜಿ ಪ್ರಧಾನ ಕಾರ್ಯದರ್ಶಿ , ಸವಿತಾ ಸಮಾಜ ( ರಿ ) .
ಎಂ . ರಾಮಾಂಜನೇಯ ಮಾಜಿ ಪ್ರಧಾನ ಕಾರ್ಯದರ್ಶಿ , ಸವಿತಾ ಸಮಾಜ ( ರಿ )
ಎಸ್ . ಮಂಜುನಾಥ್ , ಹಿರಿಯ ಮುಖಂಡರು , ಸವಿತಾ ಸಮಾಜ ( ರಿ )
ಶಿವ ಶಂಕರ್ ಮಾಜಿ ಪ್ರಧಾನ ಕಾರ್ಯದರ್ಶಿ , ಬೆಂಗಳೂರು ಸವಿತಾ ಸಮಾಜ ( ರಿ ) , ಗೌರವಾಧ್ಯಕ್ಷರು , ಸವಿತಾ ಕಲಾ ಸಂಘ ( ರಿ ) .
ಜಿ . ಮಂಜುನಾಥ್ , ಪ್ರಧಾನ ಕಾರ್ಯದರ್ಶಿ , ಬೆಂಗಳೂರು ಸವಿತಾ ಸಮಾಜ ( ರಿ )
ಜಿ .ಸೌಭಾಗ್ಯ, ಸಂಸ್ಥಾಪಕ ರಾಜ್ಯಾಧ್ಯಕ್ಷರು . ಕರ್ನಾಟಕ ರಾಜ್ಯ ಸ್ತ್ರೀ ಸವಿತಾ ಸಮಾಜ ( ರಿ ) ಕೆ.ಹೇಮಂತ್ ಕುಮಾರ್ , ಜಂಟಿ ಕಾರ್ಯದರ್ಶಿ , ಸವಿತಾ ಕಲಾ ಸಂಘ ( ರಿ ) ಉಪಸ್ತಿತಿಯಿದ್ದರು

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.