ನಿರ್ಮಾಣ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣ್ ವಿದ್ಯಾ ಹೆಲ್ತ್‌ಲೈನ್

ನಿರ್ಮಾಣ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣ್ ವಿದ್ಯಾ ಹೆಲ್ತ್‌ಲೈನ್ ಎಂಬ ಸರ್ಕಾರೇತರ ಸಂಸ್ಕಯು ಕಳೆದ 15 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ . ಇದು ಕರ್ನಾಟಕದಾದ್ಯಂತದ ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ವೃತ್ತಿ ಸಂಬಂಧಿತ ಮಾರ್ಗದರ್ಶನ ನೀಡುವುದರ ಮೂಲಕ ನೆರವಾಗುತ್ತಿದೆ .

ನಮ್ಮ ಸಂಸ್ಥೆಯು ಶೈಕ್ಷಣಿಕ , ಕೌಶಲ್ಯಾಭಿವೃದ್ಧಿ , ಉದ್ಯಮಶೀಲತೆ ಮತ್ತು ಸಾಮಾಜಿಕ ನಾಯಕತ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ . ಶೈಕ್ಷಣಿಕ ಕ್ಷೇತ್ರದಲ್ಲಿ , ” ವಿದ್ಯಾ ಹೆಲ್ತ್‌ಲೈನ್ ” ಎಂಬ ಯೋಜನೆಯ ಅಡಿಯಲ್ಲಿ ನಾವು ಟೆಲಿ ಕೌನ್ಸೆಲಿಂಗ್ ಸೇವೆಗಳನ್ನು ಒದಗಿಸುತ್ತಿದ್ದೇವೆ . ಈ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶಾತಿ , ವಿದ್ಯಾರ್ಥಿವೇತನ , ಉಚಿತ ತರಬೇತಿ , ಉದ್ಯೋಗಕ್ಕೆ ಸಂಬಂಧಿಸಿದ ಅಧಿಸೂಚನೆ ಪ್ರಕೊಮಟಿಕ್ ಪರೀಕ್ಷಾ ಆಧಾರಿತ ಆಪ್ತ ಸಮಾಲೋಚನೆ ಹಾಗೂ ಸಮಗ್ರ ಶೈಕ್ಷಣಿಕ ಮಾಹಿತಿಗಳನ್ನು ಉಚಿತವಾಗಿ ನೀಡಲಾಗುತ್ತದೆ . ಈ ಸೌಲಭ್ಯವು ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ಸ್ನಾತಕೋತ್ತರ ವಿದ್ಯಾರ್ಥಿ ಹಾಗೂ ಉದ್ಯೋಗಾಕಾಂಕ್ಷಿಗಳವರೆಗಿನ ಎಲ್ಲರಿಗೂ ಅನ್ವಯಿಸುತ್ತದೆ .

ಈ ಸೇವೆಯಲ್ಲಿ ವಿದ್ಯಾರ್ಥಿಯು ನಮ್ಮ ವಿದ್ಯಾ ಸಹಾಯವಾಣಿಗೆ ಕರೆ ಮಾಡಿ ತಮಗೆ ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಉಚಿತವಾಗಿ ಪಡೆಯಬಹುದು . ನಮ್ಮ ಟೋಲ್ – ಫೀ ( ಶುಲ , ರಹಿತ ) ನಂ . 1800 425 2429 ಆಗಿರುತ್ತದೆ .

ಈ ಸೌಲಭ್ಯವು ಬೆಳಿಗೆ 8 ರಿಂದ ರಾತ್ರಿ .8 ರವರೆಗೆ ಲಭ್ಯವಿರುತ್ತದೆ . ಈ ಎಲ್ಲಾ ಮಾಹಿತಿಯನ್ನು ಒದಗಿಸಲು , ನಮ್ಮಲ್ಲಿ ಸುಶಿಕ್ಷಿತ ಸಲಹೆಗಾರರು ಹಾಗೂ ಆಪ್ತಸಮಾಲೋಚಕರು ಲಭ್ಯವಿರುತ್ತಾರೆ . ಈ ಸೇವೆಯು ಕರ್ನಾಟಕದಾದ್ಯಂತ ಎಲ್ಲಾ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ ಎಂದು ತಿಳಿಸಲು ಇಚ್ಛಿಸುತ್ತೇವೆ .

ಸುಚಿತ್ರ ದುಷ್ಯಂತ್ ಹಾಗೂ ಆಪ್ತಸಮಾಲೋಚಕರು

ನಿರ್ಮಾಣ್ ವಿದ್ಯಾ ಹೆಲ್ತ್‌ಲೈನ್

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.