ಸಿಸಿಬಿ ಪೊಲೀಸರಿಂದ ಕೊಲೆ ಮತ್ತು ದರೋಡೆಗೆ ಹೊಂಚುಹಾಕುತ್ತಿದ್ದ ಡಿ.ಜೆ.ಹಳ್ಳಿ ರೌಡಿ ಮಜರ್‌ಖಾನ್ @ ಭಟ್ಟಿ ಮಜರ್ ಮತ್ತು ಸಹಚರರ ಬಂಧನ

ಸಿ.ಸಿ.ಬಿ. ಕಾರ್ಯಾಚರಣೆ

ಸಿಸಿಬಿ ಪೊಲೀಸರಿಂದ ಕೊಲೆ ಮತ್ತು ದರೋಡೆಗೆ ಹೊಂಚುಹಾಕುತ್ತಿದ್ದ ಡಿ.ಜೆ.ಹಳ್ಳಿ ರೌಡಿ ಮಜರ್‌ಖಾನ್ @ ಭಟ್ಟಿ ಮಜರ್ ಮತ್ತು ಸಹಚರರ ಬಂಧನ , ಕೃತ್ಯಕ್ಕೆ ಸಂಬಂಧಪಟ್ಟ ಮಾರಕಾಸ್ತ್ರಗಳ ವಶ ದಿನಾಂಕ : 23-02-2021 ರಂದು ರಾತ್ರಿ ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೋದಿಗಾರ್ಡನ್ , ಪ್ಯಾರಡೂಟ್ ಮಿಲಿಟರಿ ಗೌಂಡ್ ಪಕ್ಕದ ಮಡ್ ರಸ್ತೆಯಲ್ಲಿ ನಿಂತುಕೊಂಡು ಹಳೆ ದ್ವೇಷದಿಂದ ಇಬ್ಬರ ಮೇಲೆ ಕೊಲೆ ಮಾಡಿ ಅವರ ಕಡೆಯಿಂದ ನಗದು ಚಿನ್ನದ ಆಭರಣಗಳನ್ನು ದೋಚಲು ಸಜ್ಜಾಗಿದ್ದ ಆಸಾಮಿಗಳಾದ 1 ) ಮಜರ್‌ಖಾನ್ ( @ ಭಟ್ಟಿ ಮಜರ್ ಬಿನ್ ಲೇಟ್ . ಇಸ್ಟಾಲ್ ಖಾನ್ 38 ವರ್ಷ 2 ) ಯೋಗೇಶ @ ಲೋಕಿ ಬಿನ್ ಕೃಷ್ಣಮೂರ್ತಿ 38 ವರ್ಷ , 3 ) ರಿಜ್ವಾನ್ ( @ ರಿಜ್ಞಾನ್‌ಪಾಷ ಬಿನ್ ಲೇ.ವಜೀರ್ ಪಾಷ 26 ವರ್ಷ 4 ) ಸುಮಿತ್ ( @ ರಾಹುಲ್ ಬಿನ್ ಜಯಪೂಜಾರಿ 28 ವರ್ಷ , 5 ) ಪುನಿತ್ ಬಿನ್ ಲೇಟ್ , ಚೋಟರಾಜ್ 30 ವರ್ಷ , ಎಂಬುವವರನ್ನು ಸಿಸಿಬಿ ಸಂಘಟಿತ ಅಪರಾಧ ದಳದ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡು ಇವರುಗಳ ಕಡೆಯಿಂದ ಮಾರಕಾಸ್ತ್ರಗಳನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ .

ಈ ಆರೋಪಿಗಳ ವಿರುದ್ದ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರೆದಿರುತ್ತದೆ . ಮೇಲ್ಕಂಡ ಆರೋಪಿಗಳ ಪೈಕಿ 1 ) ಮಜರ್‌ಖಾನ್ @ ಮಜರ್ ಈತನ ಮೇಲೆ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿರುತ್ತಾನೆ . ಈತನ ಮೇಲೆ 2 ಕೊಲೆಯ ಕೇಸುಗಳು ಮತ್ತು 2 ಕೊಲೆಯತ್ನ ಕೇಸುಗಳು , 2 ಹಲ್ಲೆ ಕೇಸುಗಳು , 6 ಕಳ್ಳಭಟ್ಟಿ ಕೇಸುಗಳು ಮತ್ತು ಒಂದು ದರೋಡೆ ಕೇಸು ಮತ್ತು ಒಂದು ದರೋಡೆಯತ್ನ ಕೇಸು ದಾಖಲಾಗಿರುತ್ತವೆ . 2 ) ಸುಮಿತ್ @ ರಾಹುಲ್ ಈತನ ಮೇಲೆ ಉಡುಪಿ ಮಂಚಕಾಲ ಪೊಲೀಸ್ ಠಾಣೆಯಲ್ಲಿ ದರೋಡೆಯತ್ನ ಕೇಸು ದಾಖಲಾಗಿರುತ್ತದೆ . ಈ ಕಾರ್ಯಾಚರಣೆಯನ್ನು ಸಿಸಿಬಿ , ಸಂಘಟಿತ ಅಪರಾಧ ದಳದ ಸಹಾಯಕ ಪೊಲೀಸ್ ಕಮೀಷನರ್ ಶ್ರೀ.ಹೆಚ್.ಎನ್.ಧರ್ಮೇಂದ್ರ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ ಬಸವರಾಜ್ ಎ ತೇಲಿ ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ .

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.