” ವರ್ತ್ ಮೈ ವಾಲ್ಯು” ರೋಟರಿ ಕೆಂಗೇರಿ ಉಪನಗರ ಸಂಘಟಿಸಿರುವ ರೈತರ ಸಂತೆ ಮತ್ತು ಕೃಷಿ ಆಪ್ ಬಿಡುಗಡೆ

ನಾವು ರೋಟರಿ ಕೆಂಗೇರಿ ಉಪನಗರದಿಂದ ದಿನಾಂಕ 28-02-2021ರಂದು ಭಾನುವಾರ ಬೆಳಿಗ್ಗೆ 8.00 ಘಂಟೆಯಿಂದ ಸಂಜೆ 5.00 ಘಂಟೆಯವರೆಗೆ ರೈತ ಸಂತೆಯನ್ನು ನಡೆಸಲು ಆಯೋಜಿಸಿದ್ದೇವೆ . ಮಂಡ್ಯ , ಚನ್ನಪಟ್ಟಣ , ರಾಮನಗರದಿಂದ ಸುಮಾರು ನೂರು ರೈತರು ತಮ್ಮ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ . ಉತ್ತಮ ಸಾಧನೆಗೈದ ರೈತರಿಗೆ ಸನ್ಮಾನ ಮಾಡಲಾಗುವುದು . ಸಾವಯವ ಕೃಷಿ , ಅಧಿಕ ಫಸಲುಗಳನ್ನು ಗಳಿಸುವ ನೂತನ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಗುವುದು .

ರೈತರಿಗೆ ಅನುಕೂಲವಾಗುವ ಒಂದು ವಿಶೇಷ ಸೌಲಭ್ಯವನ್ನು ಹಮ್ಮಿಕೊಂಡಿದ್ದೇವೆ . ವರ್ತ್ ಮೈ ವಾಲ್ಯು ಎಂಬ ಆಪ್‌ವೊಂದನ್ನು ಸಹಕಾರ ಸಚಿವರಾದ ಶ್ರೀ ಎಸ್ . ಟಿ . ಸೋಮಶೇಖರ್ ಮತ್ತು ರೋಟರಿ ಜಿಲ್ಲೆ 3190 ದ ಜಿಲ್ಲಾ ಪಾಲಕರಾದ ರೋ . ಬಿ . ಎಲ್ . ನಾಗೇಂದ್ರರವರು ಬಿಡುಗಡೆ ಮಾಡಿ ರೈತರನ್ನು ನೇರವಾಗಿ ಗ್ರಾಹಕರನ್ನು ಒಂದು ವೇದಿಕೆ ಮೇಲೆ ಒಗ್ಗೂಡಿಸುವ ಕಾರ್ಯಕ್ರಮವೂ ಇದೆ . ರೈತರ ಕುಟುಂಬದವರಿಗೆ ಆರೋಗ್ಯ ಶಿಬಿರದ ವ್ಯವಸ್ಥೆಯೂ ಮಾಡಲಾಗಿದೆ . ಸಾಧಕ ರೈತರಿಗೆ , ಕೃಷಿ ಕ್ಷೇತ್ರದಲ್ಲಿ ಅಮೂಲ್ಯ ಕೊಡುಗೆ ನೀಡಿದವರಿಗೆ ಸನ್ಮಾನ ಮಾಡಲಾಗುವುದು .

ಈ ರೈತರ ಸಂತೆಯಲ್ಲಿ ರೋಟರಿ ಸೌತ್ ಈಸ್ಟ್ , ಮೈಸೂರು , ರೋಟರಿ ಸಿಲ್ಕ್ ಸಿಟಿ , ರಾಮನಗರ , ರೋಟರಿ ಮಾಲ್ಗುಡಿ, ರೋಟರಿ ನಾಗರಭಾವಿ , ರೋಟರಿ ಸೆಂಟೇನಿಯಲ್ ಇವರೂ ಕೂಡ ಕೈ ಜೋಡಿಸಿದ್ದಾರೆ . ಎಂದು ಪತ್ರಿಕಾ ಗೋಷ್ಠಿಯಲ್ಲಿ ಕಿರಣ್ ಕುಮಾರ್ ಕೆ . ಎನ್ . ಅಧ್ಯಕ್ಷರು , 2020 -2021 ತಿಳಿಸಿದರು.

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.